ADVERTISEMENT

ಚೊಕ್ಕಸಂದ್ರ, ಮಲ್ಲಸಂದ್ರದಲ್ಲಿ ನೀರಿನ ಸಮಸ್ಯೆ

​ಪ್ರಜಾವಾಣಿ ವಾರ್ತೆ
Published 18 ಅಕ್ಟೋಬರ್ 2023, 20:07 IST
Last Updated 18 ಅಕ್ಟೋಬರ್ 2023, 20:07 IST
ಮಲ್ಲಸಂದ್ರದಲ್ಲಿ ಶಾಸಕ ಎಸ್. ಮುನಿರಾಜು ಸಂಪು ಪರಿಶೀಲಿಸಿದರು.
ಮಲ್ಲಸಂದ್ರದಲ್ಲಿ ಶಾಸಕ ಎಸ್. ಮುನಿರಾಜು ಸಂಪು ಪರಿಶೀಲಿಸಿದರು.   

ಪೀಣ್ಯ ದಾಸರಹಳ್ಳಿ: ಇಲ್ಲಿನ ಕುಡಿಯುವ ನೀರಿನ ಸಮಸ್ಯೆ ಪ್ರದೇಶಗಳಿಗೆ  ಶಾಸಕ ಎಸ್. ಮುನಿರಾಜು ಅವರು ಅಧಿಕಾರಿಗಳೊಂದಿಗೆ ತೆರಳಿ ಪರಿಶೀಲಿಸಿದರು.

ಹತ್ತು ದಿನವಾದರೂ ನೀರು ಪೂರೈಕೆಯಾಗುತ್ತಿಲ್ಲ. ತಗ್ಗು ಪ್ರದೇಶಗಳಿಗೆ ನೀರು ಸರಾಗವಾಗಿ ಹರಿಯುತ್ತದೆ. ಎತ್ತರ ಪ್ರದೇಶದ ಮನೆಗಳಿಗೆ ನೀರು ಪೂರೈಕೆಯಾಗುತ್ತಿಲ್ಲ ಎಂದು ಮಲ್ಲಸಂದ್ರದ ಬಿಎಚ್ಇಎಲ್ ಮಿನಿ ಕಾಲೊನಿ ಮಹಿಳೆಯರು ದೂರು ನೀಡಿದರು.

ವಾರಕ್ಕೊಮ್ಮೆ ನೀರು ಬಿಟ್ಟರು ಅರ್ಧ ಸಂಪು ತುಂಬುವುದಿಲ್ಲ. ಬೋರ್‌ವೆಲ್‌ಗಳಲ್ಲೂ ನೀರು ಇಲ್ಲ. ಕಾವೇರಿ ನೀರು ಸರಿಯಾಗಿ ಬಿಡುತ್ತಿಲ್ಲ ಎಂದು ಚೊಕ್ಕಸಂದ್ರದ ಮಹಿಳೆಯರು ತಮ್ಮ ಅಳಲು ತೋಡಿಕೊಂಡರು.

ADVERTISEMENT

ವಾಟರ್‌ಮನ್‌ಗಳು ಒಂದು ಕಡೆ ನೀರು ಬಿಟ್ಟು ಮತ್ತೊಂದು ಪ್ರದೇಶಕ್ಕೆ ನೀರು ಹರಿಸುವುದಿಲ್ಲ. ಮನೆಗೆ ಬೇಕಾದಷ್ಟು ನೀರನ್ನು ತುಂಬಲು ನೀರು ಬರುವುದಿಲ್ಲಎಂದು ದೂರಿದರು.

ಸಮಸ್ಯೆ ಆಲಿಸಿದ ಶಾಸಕ ಎಸ್. ಮುನಿರಾಜು ಅವರು ಸಮಯಕ್ಕೆ ಸರಿಯಾಗಿ ನೀರು ಬಿಡುವಂತೆ ಅಧಿಕಾರಿಗಳಿಗೆ ಸೂಚಿಸಿದರು.

ಚೊಕ್ಕಸಂದ್ರದಲ್ಲಿ ಶಾಸಕ ಎಸ್. ಮುನಿರಾಜು ಅವರು ಸಾರ್ವಜನಿಕರ ಸಮಸ್ಯೆ ಆಲಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.