ಬೆಂಗಳೂರು: 110 ಹಳ್ಳಿಗಳಿಗೆ ಕಾವೇರಿ ಕುಡಿಯುವ ನೀರು ಪೂರೈಕೆಗಾಗಿ ಜಿಕೆವಿಕೆ ಆವರಣದಲ್ಲಿರುವ ಜಲರೇಚಕ ಯಂತ್ರಗಾರದಿಂದ ಅಮೃತ್ ಕೊಳವೆ ಮಾರ್ಗಕ್ಕೆ ಜೋಡಣೆ ಕೆಲಸಗಳು ನಡೆಯುತ್ತಿರುವ ಕಾರಣ, ಬುಧವಾರ ರಾತ್ರಿ 9 ರಿಂದ ಗುರುವಾರ ರಾತ್ರಿ 9 ಗಂಟೆವರೆಗೆ ಈ ಕೆಳಗೆ ತಿಳಿಸಿರುವ ಪ್ರದೇಶಗಳಲ್ಲಿ ಕಾವೇರಿ ನೀರುಪೂರೈಕೆಯಲ್ಲಿ ವ್ಯತ್ಯಯವಾಗಲಿದೆ ಎಂದು ಜಲಮಂಡಳಿ ಪ್ರಕಟಣೆ ತಿಳಿಸಿದೆ.
ನೀರು ಪೂರೈಕೆ ವ್ಯತ್ಯಯವಾಗುವ ಸ್ಥಳಗಳು: ರಾಜು ಕಾಲೊನಿ, ಸರ್ವೋದಯ ನಗರ, ಇಬ್ರಾಹಿಮ್ ಸ್ಟ್ರೀಟ್-1 ರಿಂದ 9ನೇ ರಸ್ತೆ, ನೋಬಲ್ ಸ್ಕೂಲ್ -1 ಮತ್ತು 2ನೇ ಅಡ್ಡರಸ್ತೆ, ನೂರ್ ಲೇಔಟ್, ಶಾಂಪುರ ರೈಲ್ವೆಗೇಟ್-1 ಮತ್ತು 2ನೇ ಅಡ್ಡರಸ್ತೆ, ವಯಾಲಿಕಾವಲ್ ಲೇಔಟ್-1ರಿಂದ 9ನೇ ಮುಖ್ಯ ರಸ್ತೆ, ಸಂದ್ಯಗಪ್ಪ ಲೇಔಟ್-1ರಿಂದ 3ನೇ ಅಡ್ಡರಸ್ತೆ, ವೀರಣ್ಣ ಪಾಳ್ಯ, ನಾರಾಯಣಸ್ವಾಮಿ ಲೇಔಟ್, ರೈಲ್ವೆ ಗೇಟ್, ವಯಾಲಿ ಕಾವಲ್ ಲೇಔಟ್ -10 ರಿಂದ 16ನೇ ಅಡ್ಡರಸ್ತೆ, ಪ್ರಕೃತಿ ಲೇಔಟ್, ಗುಂಡುತೋಪು, ಆಯಿಲ್ ಮಿಲ್ ರಸ್ತೆ(1 ರಿಂದ 15ನೇ ಕ್ರಾಸ್ ತಗ್ಗು ಪ್ರದೇಶ), 16ರಿಂದ 18ನೇ ಅಡ್ಡರಸ್ತೆ(1 ರಿಂದ 15ನೇ ತಿರುವಿನವರೆಗಿನ ಎತ್ತರದ ಪ್ರದೇಶ), 3ನೇ ಬ್ಲಾಕ್ ಸರ್ವೀಸ್ ರಸ್ತೆ, ಹೆಚ್.ಆರ್.ಬಿ.ಆರ್ ಲೇಔಟ್, ಆರ್.ಎಸ್ ಪಾಳ್ಯ, ಸದಾಶಿವ ದೇವಸ್ಥಾನ ರಸ್ತೆ, ಸತ್ಯ ಮೂರ್ತಿ ರಸ್ತೆ, ಆಯಿಲ್ ಮಿಲ್ ರಸ್ತೆ, ಕೆ.ಹೆಚ್.ಬಿ. ಕ್ವಾಟ್ರಸ್, ಓ.ಎಂ.ಬಿ.ಆರ್ ಲೇಔಟ್, ಹೆಣ್ಣೂರು, ರಾಮಸ್ವಾಮಿ ಪಾಳ್ಯ, ಗುರುಮೂರ್ತಿ ರಸ್ತೆ ಮತ್ತು ಸುತ್ತಮುತ್ತಲಿನ ಪ್ರದೇಶಗಳಲ್ಲಿ ನೀರು ಪೂರೈಕೆಯಲ್ಲಿ ವ್ಯತ್ಯಯವಾಗಲಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.