ಬೆಂಗಳೂರು: ‘ಮಾನ್ಯತಾ ಟೆಕ್‌ಪಾರ್ಕ್‌ನ ವೈಟ್ ಆರ್ಕೀಡ್‌ನಲ್ಲಿ ‘ಫ್ಯೂಷನ್ ನೈಟ್ಸ್’ ಕಾರ್ಯಕ್ರಮ ಆಯೋಜಿಸುವುದಕ್ಕೆ ನಮ್ಮ ವಿರೋಧವಿಲ್ಲ. ಆದರೆ, ನಟಿ ಸನ್ನಿ ಲಿಯೋನ್ ಬಂದರೆ ಸಹಿಸುವುದಿಲ್ಲ. ಪ್ರತಿಭಟನೆ ಮಾಡುತ್ತೇವೆ’ ಎಂದು ಕರ್ನಾಟಕ ರಕ್ಷಣಾ ವೇದಿಕೆಯ ಯುವಸೇನೆಯ ಅಧ್ಯಕ್ಷ ಹರೀಶ್ ಎಚ್ಚರಿಸಿದರು.
ಶನಿವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ‘ಸನ್ನಿ ಲಿಯೋನ್ ಅವರಿಗೆ ನೀಡಿರುವ ಆಹ್ವಾನವನ್ನು ಟೈಮ್ಸ್ ಕ್ರಿಯೇಷನ್ಸ್‌ನವರು ಹಿಂಪಡೆಯಬೇಕು’ ಎಂದು ಒತ್ತಾಯಿಸಿದರು.
‘ರಾಷ್ಟ್ರಕೂಟರ ಮಹಾರಾಣಿ ವೀರಮಹಾದೇವಿಯವರ ಜೀವನ ಚರಿತ್ರೆ ಆಧರಿಸಿ ನಿರ್ಮಾಪಕ ವಿ.ಸಿ.ವಾಡಿ ಉದಯನ್, ‘ವೀರಮಹಾದೇವಿ’ ಸಿನಿಮಾ ನಿರ್ಮಿಸುತ್ತಿದ್ದಾರೆ. ರಾಣಿ ಪಾತ್ರದಲ್ಲಿ ನೀಲಿಚಿತ್ರಗಳ ನಟಿ ಸನ್ನಿ ಲಿಯೋನ್ ನಟಿಸುತ್ತಿದ್ದು, ಅದು ನಮ್ಮ ನಾಡು ಹಾಗೂ ವೀರಮಹಾದೇವಿಗೆ ಮಾಡುತ್ತಿರುವ ಅಪಮಾನ’ ಎಂದು ದೂರಿದರು.
‘ಸನ್ನಿ ಲಿಯೋನ್ ಅವರನ್ನು ಸಿನಿಮಾದಿಂದ ಕೈಬಿಡುವಂತೆ ಒತ್ತಾಯಿಸುತ್ತಿದ್ದೇವೆ. ಆಕಸ್ಮಾತ್ ಅವರಿಂದಲೇ ಪಾತ್ರ ಮಾಡಿಸಿ ಸಿನಿಮಾ ಬಿಡುಗಡೆ ಮಾಡಿದರೆ ರಾಜ್ಯದಾದ್ಯಂತ ಗಂಭೀರ ಸ್ವರೂಪದ ಹೋರಾಟ ನಡೆಸಲಿದ್ದೇವೆ’ ಎಂದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.