ADVERTISEMENT

ಶ್ರೀಮಂತಿಕೆ ಅಭಿವೃದ್ಧಿಯ ಮೌಲ್ಯವಲ್ಲ: ಅಶೋಕ್ ಧವಳೆ

​ಪ್ರಜಾವಾಣಿ ವಾರ್ತೆ
Published 16 ನವೆಂಬರ್ 2024, 15:19 IST
Last Updated 16 ನವೆಂಬರ್ 2024, 15:19 IST
<div class="paragraphs"><p>ದಕ್ಷಿಣ ಮಧ್ಯ ವಲಯ ವಿಮಾ ನೌಕರರ ಒಕ್ಕೂಟದ 13ನೇ ಸಮ್ಮೇಳನದಲ್ಲಿ ಎಐಐಇಎ ಮಾಜಿ ಅಧ್ಯಕ್ಷ ಅಮಾನುಲ್ಲಾ ಖಾನ್, ಅಖಿಲ ಭಾರತ ಕಿಸಾನ್ ಸಭಾ ಅಧ್ಯಕ್ಷ ಅಶೋಕ್ ಧವಳೆ, ಸಿಐಟಿಯು ಪ್ರಧಾನ ಕಾರ್ಯದರ್ಶಿ ಮೀನಾಕ್ಷಿ ಸುಂದರಂ ಮತ್ತು ಸಿಪಿಎಂ ಮುಖಂಡ ಸೀತಾರಾಂ ಯೆಚೂರಿ ಅವರ ಭಾವಚಿತ್ರದ ಮುಂದೆ ಘೋಷಣೆ ಕೂಗಿ ಕಾರ್ಯಕ್ರಮ ಉದ್ಘಾಟಿಸಿದರು </p></div>

ದಕ್ಷಿಣ ಮಧ್ಯ ವಲಯ ವಿಮಾ ನೌಕರರ ಒಕ್ಕೂಟದ 13ನೇ ಸಮ್ಮೇಳನದಲ್ಲಿ ಎಐಐಇಎ ಮಾಜಿ ಅಧ್ಯಕ್ಷ ಅಮಾನುಲ್ಲಾ ಖಾನ್, ಅಖಿಲ ಭಾರತ ಕಿಸಾನ್ ಸಭಾ ಅಧ್ಯಕ್ಷ ಅಶೋಕ್ ಧವಳೆ, ಸಿಐಟಿಯು ಪ್ರಧಾನ ಕಾರ್ಯದರ್ಶಿ ಮೀನಾಕ್ಷಿ ಸುಂದರಂ ಮತ್ತು ಸಿಪಿಎಂ ಮುಖಂಡ ಸೀತಾರಾಂ ಯೆಚೂರಿ ಅವರ ಭಾವಚಿತ್ರದ ಮುಂದೆ ಘೋಷಣೆ ಕೂಗಿ ಕಾರ್ಯಕ್ರಮ ಉದ್ಘಾಟಿಸಿದರು

   

ಪ್ರಜಾವಾಣಿ ಚಿತ್ರ

ಬೆಂಗಳೂರು: ‘ಶ್ರೀಮಂತಿಕೆಯನ್ನು ಅಭಿವೃದ್ಧಿಯ ಮೌಲ್ಯವಾಗಿ ಪ್ರದರ್ಶನ ಮಾಡಲಾಗುತ್ತಿದೆ. ಇದು ಹೆಚ್ಚು ದಿನ ಮುಂದುವರಿಯಲು ಸಾಧ್ಯವಿಲ್ಲ’ ಎಂದು ಅಖಿಲ ಭಾರತ ಕಿಸಾನ್ ಸಭಾದ ಅಧ್ಯಕ್ಷ ಅಶೋಕ್ ಧವಳೆ ಅಭಿಪ್ರಾಯಪಟ್ಟರು.

ADVERTISEMENT

ದಕ್ಷಿಣ ಮಧ್ಯ ವಲಯ ವಿಮಾ ನೌಕರರ ಒಕ್ಕೂಟದ 13ನೇ ಮಹಾ ಸಮ್ಮೇಳನ ಉದ್ಘಾಟಿಸಿ ಅವರು ಮಾತನಾಡಿದರು.

‘ಶ್ರೀಮಂತರು ಹಾಗೂ ಬಡವರ ನಡುವಿನ ಅಂತರ ಹೆಚ್ಚುತ್ತಿದೆ. ಬಡವರು ಕಳೆದುಕೊಳ್ಳುವ ಸಂಪತ್ತು ಶ್ರೀಮಂತರ ಪಾಲಾಗುತ್ತಿದೆ. ಇದೆಲ್ಲ, ಒಂದಲ್ಲ ಒಂದು ದಿನ ಬದಲಾವಣೆಯಾಗಲೇಬೇಕು. ಶ್ರೀಲಂಕಾದಲ್ಲಿ ದುಡಿಯುವ ಜನರ ಪರವಿರುವ ಮಾರ್ಕ್ಸ್‌ವಾದ ಒಪ್ಪಿಕೊಂಡಿರುವ ಪಕ್ಷ ಆಡಳಿತಕ್ಕೆ ಬಂದಿದೆ. ಇಂತಹ ಬದಲಾವಣೆ ಭಾರತದಲ್ಲಿ ಏಕೆ ಆಗಬಾರದು’ ಎಂದು ಪ್ರಶ್ನಿಸಿದರು.

‘ಕಾರ್ಲ್‌ ಮಾರ್ಕ್ಸ್‌ ಸಮಾನತೆಯ ಆಶಯದಿಂದ ಪ್ರತಿಪಾದಿಸಿರುವ ಸಿದ್ಧಾಂತ ಇಂದಿಗೂ ಬಹುತೇಕ ಜನರ ಮನಸ್ಸಿಗೆ ಹತ್ತಿರವಾಗಿದೆ. ಆ ಸಿದ್ಧಾಂತ ಒಪ್ಪಿಕೊಂಡವರು, ಬದಲಾವಣೆಗಾಗಿ ರೂಪಾಂತರವಾಗಲು ಈ ಸಮ್ಮೇಳನ ಸಾಧನವಾಗಲಿ’ ಎಂದು ಆಶಿಸಿದರು.

‘ದೇಶದಲ್ಲಿ ಇಂದು ದುಡಿಯುವ ಜನರ ಬದಲಿಗೆ ಸಂಪತ್ತಿನ ಕ್ರೋಡೀಕರಣವನ್ನೇ ಮೌಲ್ಯ ಎಂದು ತೋರಿಸಲಾಗುತ್ತಿದೆ. ಬಂಡವಾಳ ಆಕರ್ಷಣೆ ಹಾಗೂ ಸ್ಥಳೀಯ ಜನರ ನಡುವಿನ ಆಯ್ಕೆಯಲ್ಲಿ ಲಾಭವೇ ಪ್ರಧಾನವಾಗುತ್ತಿದೆ. ಇದೇ ಸ್ಥಿತಿ ಮುಂದುವರಿದರೆ ದೇಶದಲ್ಲಿ ಸಾಮಾನ್ಯರ ಬದುಕು ಇನ್ನಷ್ಟು ಬರ್ಬರವಾಗುತ್ತದೆ’ ಎಂದು ಸಿಐಟಿಯು ಕರ್ನಾಟಕ ರಾಜ್ಯ ಪ್ರಧಾನ ಕಾರ್ಯದರ್ಶಿ ಮೀನಾಕ್ಷಿ ಸುಂದರಂ ಹೇಳಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.