ADVERTISEMENT

ಬೆಂಗಳೂರಿನಲ್ಲಿದ್ದಾಗ ಲವ್ ಜಿಹಾದ್‌ಗೆ ಒಳಗಾಗಿದ್ದೆ: ಸೌಂದರ್ಯ ಸ್ಪರ್ಧೆಯ ವಿಜೇತೆ

ರಾಷ್ಟ್ರಮಟ್ಟದ ಸೌಂದರ್ಯ ಸ್ಪರ್ಧೆಯ ವಿಜೇತೆಯೊಬ್ಬರು ಬೆಂಗಳೂರಿನಲ್ಲಿದ್ದಾಗ ತಾವು ಲವ್‌ ಜಿಹಾದ್ ಬಲೆಗೆ ಸಿಲುಕಿ ಹೊರ ಬಂದ ಸಂಕಷ್ಟವನ್ನು ಹೇಳಿಕೊಂಡಿರುವುದು ಗಮನ ಸೆಳೆದಿದೆ.

​ಪ್ರಜಾವಾಣಿ ವಾರ್ತೆ
Published 11 ನವೆಂಬರ್ 2024, 10:11 IST
Last Updated 11 ನವೆಂಬರ್ 2024, 10:11 IST
<div class="paragraphs"><p>ರಿನಿಮಾ ಬೋರಾ ಅಗರವಾಲ್</p></div>

ರಿನಿಮಾ ಬೋರಾ ಅಗರವಾಲ್

   

ಬೆಂಗಳೂರು: ರಾಷ್ಟ್ರಮಟ್ಟದ ಸೌಂದರ್ಯ ಸ್ಪರ್ಧೆಯ ವಿಜೇತೆಯೊಬ್ಬರು ಬೆಂಗಳೂರಿನಲ್ಲಿದ್ದಾಗ ತಾವು ಲವ್‌ ಜಿಹಾದ್ ಬಲೆಗೆ ಸಿಲುಕಿ ಹೊರ ಬಂದ ಸಂಕಷ್ಟವನ್ನು ಹೇಳಿಕೊಂಡಿರುವುದು ಗಮನ ಸೆಳೆದಿದೆ.

Mrs India Galaxy 2024 ಸ್ಪರ್ಧೆಯ (‘ಶ್ರೀಮತಿ ಇಂಡಿಯಾ ಗ್ಯಾಲಾಕ್ಷಿ 2024‘) ವಿಜೇತೆ ಅಸ್ಸಾಂ ಮೂಲದ ರಿನಿಮಾ ಬೋರಾ ಅಗರವಾಲ್ ಅವರು ಅಸ್ಸಾಂನ ಜನಪ್ರಿಯ ಯುಟ್ಯೂಬರ್ ಆದ ಅಬಯೋಬ್ ಭುಯಾನ್ ( UNTOLD by Aboyob Bhuyan) ಅವರೊಂದಿಗಿನ ಸಂದರ್ಶನದಲ್ಲಿ ತಮಗಾದ ಅನ್ಯಾಯವನ್ನು ತೆರೆದಿಟ್ಟಿದ್ದಾರೆ.

ADVERTISEMENT

‘ನಾನು ನನ್ನ 16 ನೇ ವಯಸ್ಸಿನಲ್ಲಿ ಸಾಕಷ್ಟು ಕನಸುಗಳನ್ನು ಹೊತ್ತು ಶಿಕ್ಷಣಕ್ಕಾಗಿ ಬೆಂಗಳೂರಿಗೆ ಹೋದೆ. ಅಲ್ಲಿ ಕೆಲ ವರ್ಷಗಳ ನಂತರ ಮುಸ್ಲಿಂ ಯುವಕನೊಬ್ಬನನ್ನು ನಾನು ಪ್ರೇಮಿಸುತ್ತಿದ್ದೆ. ಇದಕ್ಕೆ ನನ್ನ ಪೋಷಕರ ವಿರೋಧ ಇತ್ತು. ಕ್ರಮೇಣ ಆ ಯುವಕ ನನ್ನನ್ನು ಲವ್ ಜಿಹಾದ್‌ಗೆ ಒಳಪಡಿಸುತ್ತಾ ಹೋದ. ನನಗೆ ದನದ ಮಾಂಸ ತಿನ್ನಲು ಒತ್ತಾಯಿಸುತ್ತಿದ್ದ, ನಮಾಜ್ ಮಾಡಲು ಹೇಳುತ್ತಿದ್ದ, ನನ್ನ ಸಂಪ್ರಾದಾಯಗಳನ್ನು ಗೌರವಿಸುತ್ತಿರಲಿಲ್ಲ‘ ಎಂದು ಆರೋಪಿಸಿದ್ದಾರೆ.

‘ಅವನ ವರ್ತನೆಗೆ ನಾನು, ‘ನೀನು ತಾಲಿಬಾನ್ ತರಾ ಆಡಬೇಡ’ ಎಂದು ಹೇಳುತ್ತಿದ್ದೆ. ಕಡೆಗೆ ಒಂದು ದಿನ ನನ್ನ ಹೆಸರನ್ನು ಆಯೇಷಾ ಹುಸೇನ್ ಎಂದು ಬದಲಾಯಿಸಲು ಮುಂದಾಗಿದ್ದ. ನಿಜ ನಮ್ಮ ದೇಶದಲ್ಲಿ ಲವ್ ಜಿಹಾದ್ ತೊಲಗಿಲ್ಲ. ನಾನು ಅನುಭವಿಸಿರುವುದು ಅದೇ ಆಗಿದೆ. ಹೇಗೋ ದೇವರ ದಯೆಯಿಂದ ಅದರಿಂದ ಹೊರ ಬಂದು ಹೊಸ ಬದುಕು ಕಟ್ಟಿಕೊಂಡೆ‘ ಎಂದು ಹೇಳಿದ್ದಾರೆ.

ಜನರು ತಮ್ಮ ತಮ್ಮ ಮೂಲಭೂತ ಸಂಪ್ರದಾಯಗಳನ್ನು ಗೌರವಿಸಬೇಕು. ನನ್ನ ಸಂದರ್ಶನವನ್ನು ಸಂಪೂರ್ಣ ನೋಡಿ. ಸಾಕಷ್ಟು ವಿಷಯಗಳ ಬಗ್ಗೆ ಮಾತನಾಡಿದ್ದೇನೆ. ಬೇರೆನೂ ವಿವಾದವಾಗುವುದು ಬೇಡ ಎಂದು ರಿನಿಮಾ ಬೋರಾ ತಮ್ಮ ಇನ್‌ಸ್ಟಾಗ್ರಾಂ ಪೋಸ್ಟ್‌ನಲ್ಲಿ ಹೇಳಿದ್ದಾರೆ.

Mrs India Galaxy 2024 ಸ್ಪರ್ಧೆಯನ್ನು Mrs India Inc ಎಂಬ ಸಂಸ್ಥೆ ನಡೆಸುತ್ತದೆ. ಇಲ್ಲಿ ಗೆಲ್ಲುವ ಸ್ಪರ್ಧಿಗಳು Mrs Galaxy Pageant ಎನ್ನುವ ಜಾಗತಿಕ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳುತ್ತಾರೆ.

ರಿನಿಮಾ ಬೋರಾ ಅಗರವಾಲ್ ಅವರು ಇನ್‌ಸ್ಟಾಗ್ರಾಂನಲ್ಲಿ ಅಧಿಕೃತ ಖಾತೆ ಹೊಂದಿದ್ದಾರೆ. ಅವರಿಗೆ 43 ಸಾವಿರಕ್ಕೂ ಅಧಿಕ ಫಾಲೋವರ್‌ಗಳಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.