ಬೆಂಗಳೂರು: ಮನೆಯ ಸ್ನಾನದ ಕೋಣೆಯಲ್ಲಿ ಪತಿಯನ್ನು ಕೂಡಿಹಾಕಿ ಪತ್ನಿ ಪರಾರಿಯಾಗಿದ್ದು, ಈ ಸಂಬಂಧ ರಾಜರಾಜೇಶ್ವರಿನಗರ ಠಾಣೆಗೆ ದೂರು ಸಲ್ಲಿಕೆಯಾಗಿದೆ.
‘ಠಾಣೆ ವ್ಯಾಪ್ತಿಯ ನಿವಾಸಿಯೊಬ್ಬರು, ಪತ್ನಿಯನ್ನು ಹುಡುಕಿಕೊಡುವಂತೆ ದೂರು ನೀಡಿದ್ದಾರೆ. ಪರಿಶೀಲಿಸಿ ಮುಂದಿನ ಕ್ರಮ ಕೈಗೊಳ್ಳಲಾಗುವುದು’ ಎಂದು ಪೊಲೀಸ್ ಮೂಲಗಳು ಹೇಳಿವೆ.
‘ದೂರುದಾರರಿಗೆ ಎರಡು ತಿಂಗಳ ಹಿಂದೆಯಷ್ಟೇ ಮದುವೆಯಾಗಿದೆ. ಪತಿ– ಪತ್ನಿ ಇಬ್ಬರೂ ಚೆನ್ನಾಗಿದ್ದರು. ಆಗಸ್ಟ್ 12ರಂದು ಪತಿಯನ್ನು ಸ್ನಾನ ಮಾಡಲು ಕಳುಹಿಸಿದ್ದ ಪತ್ನಿ, ಹೊರಗಿನಿಂದ ಬಾಗಿಲು ಹಾಕಿಕೊಂಡು ಮನೆಯಿಂದ ಪರಾರಿಯಾಗಿದ್ದಾರೆ’ ಎಂದು ತಿಳಿಸಿವೆ.
‘ಸಂಬಂಧಿಕರು, ಸ್ನೇಹಿತರು ಹಾಗೂ ಇತರೆಡೆ ಹುಡುಕಾಡಿದರೂ ಪತ್ನಿ ಬಗ್ಗೆ ಮಾಹಿತಿ ಸಿಕ್ಕಿಲ್ಲ. ಬೇರೊಬ್ಬ ಯುವಕನ ಜೊತೆ ಪತ್ನಿ ಒಡನಾಟ ಹೊಂದಿದ್ದರೆಂದು ದೂರುದಾರ ತಿಳಿಸಿದ್ದಾರೆ. ಯುವಕನ ಜೊತೆ ಪತ್ನಿ ಹೋಗಿರಬಹುದೆಂದು ಅವರು ಅನುಮಾನ ವ್ಯಕ್ತಪಡಿಸಿದ್ದಾರೆ’ ಎಂದು ಮೂಲಗಳು ಹೇಳಿವೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.