ಬೆಂಗಳೂರು: ಅಂತರಾಷ್ಟ್ರೀಯ ಹುಲಿ ದಿನದ ಅಂಗವಾಗಿ ಗರುಡಾ ಮಾಲ್ ಆವರಣದಲ್ಲಿ ಹೆಸರಾಂತ ಛಾಯಾಗ್ರಾಹಕರು ಸೆರೆಹಿಡಿದ ವನ್ಯಜೀವಿ ಛಾಯಾಚಿತ್ರಗಳ ಪ್ರದರ್ಶನವನ್ನು ಚಲನಚಿತ್ರ ನಿರ್ದೇಶಕ ನಿರೂಪ್ ಭಂಡಾರಿ, ನಟಿ ನೀತಾ ಅಶೋಕ್ ಉದ್ಘಾಟಿಸಿದರು.
ಕಾಡು ಮತ್ತು ನಾಡಿನ ನಡುವೆ ಸಂಘರ್ಷದಲ್ಲಿ ತಮ್ಮ ಜೀವ ರಕ್ಷಣೆಗಾಗಿ ಮನುಷ್ಯರ ಮೇಲೆ ಪ್ರಾಣಿಗಳು ದಾಳಿ ಮಾಡುತ್ತಿವೆ. ಅಭಿವೃದ್ದಿ ಹೆಸರಿನಲ್ಲಿ ಕಾಡನ್ನು ನಾಶಪಡಿಸಿ, ಗಿಡ–ಮರಗಳನ್ನು ಕಡಿದು ಕಾಂಕ್ರೀಟ್ ನಾಡಾಗಿ ಪರಿವರ್ತಿಸಲಾಯಿತು. ಹಲವಾರು ವನ್ಯಜೀವಿಗಳು ಅಳಿವಿನ ಅಂಚಿನಲ್ಲಿವೆ. ಮೂಕಪ್ರಾಣಿಗಳ ನೋವನ್ನು ನಾವು ಅರ್ಥ ಮಾಡಿಕೊಳ್ಳಬೇಕು ಎಂದು ನಿರೂಪ್ ಭಂಡಾರಿ
ಹೇಳಿದರು.
ಪ್ರತಿವರ್ಷ ಜುಲೈ 29ರಂದು ಅಂತರರಾಷ್ಟ್ರೀಯ ಹುಲಿ ದಿನ ಆಚರಿಸಲಾಗುತ್ತದೆ. ಇದರ ಅಂಗವಾಗಿ ಗರುಡಾ ಮಾಲ್ (ಮಾಗ್ರತ್ ರಸ್ತೆ) ವನ್ಯಜೀವಿ ಛಾಯಾಚಿತ್ರ ಪ್ರದರ್ಶನವನ್ನು ’ವನ್ಯ ಜೀವಿ ಕಥೆಗಳು‘ ಹೆಸರಿನಲ್ಲಿ ಏರ್ಪಡಿಸಿವೆ. ಜುಲೈ 31ರವರೆಗೆ ಪ್ರದರ್ಶನ ಇರಲಿದ್ದು, ಅಪರೂಪದ ವನ್ಯಜೀವಿಗಳಚಿತ್ರಗಳು ಪ್ರದರ್ಶನದಲ್ಲಿವೆ.
ಕಿರಣ್ ಸದಾನಂದ, ಮಹೇಶ್ ರೆಡ್ಡಿ, ಮಂಜು ಆಚಾರ್ಯ, ಪ್ರಮೋದ್ ಕುಮಾರ್ ಪಿ. ಲಕ್ಷ್ಮಿನ್, ಶ್ರೀಧರ್ ನಾಗರಾಜ್, ಸುರೇಶ್ ಬಸವರಾಜು, ವಿನಯ್ ಎಸ್. ಕುಮಾರ್ ಇಲ್ಲಿ ಪ್ರದರ್ಶಿತವಾಗುತ್ತಿರುವ ಛಾಯಾಚಿತ್ರಗಳನ್ನು ಸೆರೆಹಿಡಿದಿದ್ದಾರೆ.
ಭಾರತ, ಕೋಸ್ಟರಿಕಾ ಮತ್ತು ಆಫ್ರಿಕಾದ ದಟ್ಟಕಾಡುಗಳಲ್ಲಿ ತಮ್ಮ ಕ್ಯಾಮರಾ ಕಣ್ಣಿನಲ್ಲಿ ಮೂರು ದಶಕಗಳ ಕಾಲ ಸೆರೆಹಿಡಿದ ಛಾಯಾಗ್ರಾಹಕರ ಅಪರೂಪದ ಪಕ್ಷಿಗಳು, ಹುಲಿಗಳು, ಆನೆಗಳು ಹಾಗೂ ಚಿರತೆಗಳ ಛಾಯಾಚಿತ್ರಗಳನ್ನು ಮಾಲ್‌ನ ಎಲ್ಲ ಅಂತಸ್ತುಗಳಲ್ಲಿ ನೋಡಬಹುದಾಗಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.