ಬೆಂಗಳೂರು: ಏರ್ ಇಂಡಿಯಾ ವಿಮಾನ ಸಂಸ್ಥೆ ಬೆಂಗಳೂರಿನಿಂದ ಅಬುಧಾಬಿಗೆ ನೇರ ಅಂತರರಾಷ್ಟ್ರೀಯ ವಿಮಾನ ಹಾರಾಟವನ್ನು ಮಂಗಳವಾರ ಆರಂಭಿಸಿದೆ.
ಕೆಂಪೇಗೌಡ ಅಂತರರಾಷ್ಟ್ರೀಯ ವಿಮಾನ ನಿಲ್ದಾಣದಿಂದ ವಿಮಾನ ಪ್ರತಿ ಮಂಗಳವಾರ, ಗುರುವಾರ ಶನಿವಾರ ಮತ್ತು ಭಾನುವಾರ ಮಧ್ಯಾಹ್ನ 3.25ಕ್ಕೆ ಹೊರಡಲಿದೆ. ಅಬುಧಾಬಿಯನ್ನು ಸಂಜೆ 6 ಗಂಟೆಗೆ ತಲುಪಲಿದೆ. ಅಬುಧಾಬಿಯಿಂದ ಪ್ರತಿ ಮಂಗಳವಾರ, ಗುರುವಾರ, ಶನಿವಾರ ಮತ್ತು ಭಾನುವಾರ ಸಂಜೆ 6.55ಕ್ಕೆ ವಿಮಾನ ಹೊರಡಲಿದ್ದು ಮಧ್ಯರಾತ್ರಿ 12.40ಕ್ಕೆ ಬೆಂಗಳೂರು ತಲುಪಲಿದೆ.
ಈ ಮೂಲಕ ಅಯೋಧ್ಯೆ, ಭುವನೇಶ್ವರ, ಚೆನ್ನೈ, ಗೋವಾ, ಹೈದರಾಬಾದ್, ಜೈಪುರ, ಲಖನೌ, ಪುಣೆ ಮತ್ತು ವಿಶಾಖಪಟ್ಟಣ ನಗರಗಳ ಪ್ರಯಾಣಿಕರು ಬೆಂಗಳೂರಿನ ಮೂಲಕ ಅಬುಧಾಬಿಗೆ ನೇರ ಪ್ರಯಾಣ ಬೆಳೆಸಬಹುದು ಎಂದು ವಿಮಾನ ಸಂಸ್ಥೆ ಹೇಳಿದೆ.
ಬೆಂಗಳೂರಿನಿಂದ ಪ್ರತಿ ವಾರ ಒಟ್ಟು 27 ನಗರಗಳನ್ನು ತಲುಪುವ ಏರ್ ಇಂಡಿಯಾ ವಿಮಾನ 200ಕ್ಕೂ ವಿಮಾನದ ಹಾರಾಟ ನಡೆಸುತ್ತದೆ.
ಬೆಂಗಳೂರು ಮಾತ್ರವಲ್ಲದೆ ಭಾರತದ 7 ನಗರಗಳಿಂದ ಏರ್ ಇಂಡಿಯಾ ಅಬುಧಾಬಿಗೆ ನೇರ ವಿಮಾನ ಹಾರಾಟ ನಡೆಸುತ್ತದೆ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.