ಪುರುಷರಿಗಷ್ಟೇ ಮೀಸಲು ಎಂಬ ಮಾತನ್ನ, ಅಘೋಷಿತ ಸಂಪ್ರದಾಯವನ್ನ ಮಹಿಳೆಯರು ಮೀರಿದ್ದನ್ನು ಮತ್ತೆ ಬೆಂಗಳೂರು ರಸ್ತೆಗಳು ಕಾಣ್ತಿವೆ. ಆಟೊ ಚಾಲಕಿಯರು ಸಿದ್ಧಸೂತ್ರಗಳನ್ನ ಮೂಲೆಗೆ ತಳ್ಳಿ, ಹೊಸ ವ್ಯಾಖ್ಯಾನ ಬರೆಯುತ್ತಿದ್ದಾರೆ. ಈ ಮಹಾನಗರದಲ್ಲಿ ಒಂದೂವರೆ ಲಕ್ಷ ಆಟೊ ಚಾಲಕರಿದ್ದಾರೆ. ಅವರಲ್ಲಿ ಚಾಲಕಿಯರ ಸಂಖ್ಯೆ ಸುಮಾರು 200 ಮಾತ್ರ. ಆರ್ಥಿಕವಾಗಿ ಸ್ವಾವಲಂಬಿ ಜೀವನ ಸಾಗಿಸುವುದರ ಜೊತೆಗೆ, ಸ್ವಾತಂತ್ರ್ಯದ ಹೊಸ ಅರ್ಥವನ್ನೂ ತಿಳಿದುಕೊಳ್ಳುತ್ತಿರುವ ಈ ಆಟೊ ಚಾಲಕಿಯರ ಕಥೆಯೇ ಸ್ಫೂರ್ತಿದಾಯಕ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.