ಬೆಂಗಳೂರು: ಮಹಿಳೆಯರೇ ಸೇರಿ ಇಲ್ಲಿನ ರಾಜರಾಜೇಶ್ವರಿ ನಗರದಲ್ಲಿ ‘ಸ್ಮಾರ್ಟ್ ಮುದ್ದೆ ಸ್ಪೈಸಿ ಫಿಶ್’ ರೆಸ್ಟೋರೆಂಟ್ ಪ್ರಾರಂಭಿಸಿದ್ದಾರೆ.
ನಗರದಲ್ಲಿ ಬುಧವಾರ ಈ ಹೋಟೆಲ್ ಉದ್ಘಾಟಿಸಿದ ರಾಜ್ಯ ಮೀನುಗಾರಿಕೆ ಸಚಿವ ಎಸ್. ಅಂಗಾರ, ‘ಮಹಿಳಾ ಉದ್ಯಮಿಗಳೇ ಸೇರಿ ಈ ರೀತಿಯ ರೆಸ್ಟೊರೆಂಟ್ ಪ್ರಾರಂಭಿಸಿರುವುದು ಸ್ವಾಗತಾರ್ಹ. ಪ್ರಧಾನಮಂತ್ರಿಯವರ ನಾರಿಶಕ್ತಿ, ಆತ್ಮನಿರ್ಭರದಂತಹ ಕಲ್ಪನೆಗಳಿಗೆ ಇಂತಹ ಬೆಳವಣಿಗೆಗಳು ಪೂರಕವಾಗಿವೆ’ ಎಂದು ಶ್ಲಾಘಿಸಿದರು.
‘ಎಂಟು ಮಹಿಳೆಯರು ರೆಸ್ಟೊರೆಂಟ್‌ನಲ್ಲಿ ಕೆಲಸ ಮಾಡುತ್ತಿದ್ದಾರೆ. ಮುಂದಿನ ದಿನಗಳಲ್ಲಿ ನಗರದ 40 ಕಡೆ ಇಂತಹ ಹೋಟೆಲ್‌ಗಳನ್ನು ಪ್ರಾರಂಭಿಸುವ ಉದ್ದೇಶವಿದೆ’ ಎಂದು ರೆಸ್ಟೋರೆಂಟ್ ಮಾಲೀಕರಾದ ಸ್ವಪ್ನಾ ಅರುಣ್ ಹೇಳಿದರು.
ಮಮತಾ ಷಣ್ಮುಗಂ ಅವರೊಂದಿಗೆ ಸೇರಿ ಸ್ವಪ್ನಾ ಈ ಹೋಟೆಲ್ ಪ್ರಾರಂಭಿಸಿದ್ದಾರೆ. ‘ಮಹಿಳೆಯರನ್ನು ಸ್ವಾವಲಂಬಿಯಾಗಿಸುವುದರ ಜೊತೆಗೆ ಅವರು ಆರ್ಥಿಕವಾಗಿ ಸಬಲರಾಗಬೇಕು ಎಂಬ ಉದ್ದೇಶದಿಂದ ಈ ರೆಸ್ಟೋರೆಂಟ್ ಪ್ರಾರಂಭಿಸುತ್ತಿದ್ದೇವೆ. ವಿಶೇಷ ಎಂದರೆ, ತಿಂಗಳಿಗೊಮ್ಮೆ ವಾರ್ಡ್‌ನಲ್ಲಿನ ಪೌರಕಾರ್ಮಿಕರಿಗೆ ಉಚಿತವಾಗಿ ಮೀನಿನ ಊಟ ವಿತರಿಸಲಾಗುವುದು’ ಎಂದೂ ಹೇಳಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.