ADVERTISEMENT

ಬೆಂಗಳೂರು | ಯುವತಿ ಕೊಲೆ ಪ್ರಕರಣ: ಪಿ.ಜಿ. ಮಾಲೀಕನ ವಿರುದ್ಧ ಎಫ್‌ಐಆರ್‌

​ಪ್ರಜಾವಾಣಿ ವಾರ್ತೆ
Published 16 ಆಗಸ್ಟ್ 2024, 15:26 IST
Last Updated 16 ಆಗಸ್ಟ್ 2024, 15:26 IST
ಎಫ್‌ಐಆರ್‌ (ಪ್ರಾತಿನಿಧಿಕ ಚಿತ್ರ)
ಎಫ್‌ಐಆರ್‌ (ಪ್ರಾತಿನಿಧಿಕ ಚಿತ್ರ)   

ಬೆಂಗಳೂರು: ನಗರದ ಭಾರ್ಗವಿ ಪೇಯಿಂಗ್ ಗೆಸ್ಟ್‌ (ಪಿಜಿ)ಯಲ್ಲಿ ನಡೆದಿದ್ದ ಯುವತಿ ಕೊಲೆ ಪ್ರಕರಣ ಆಧರಿಸಿ ಪಿ.ಜಿ. ಮಾಲೀಕರ ವಿರುದ್ಧ ಕೋರಮಂಗಲ ಠಾಣೆಯಲ್ಲಿ ಎಫ್‌ಐಆರ್‌ ದಾಖಲಾಗಿದೆ.

ಸೂಕ್ತ ಭದ್ರತೆ ಹಾಗೂ ಸುರಕ್ಷತಾ ಕ್ರಮ ಕೈಗೊಳ್ಳದೆ ಜೀವಹಾನಿಗೆ ಕಾರಣವಾದ ಆರೋಪದ (ಬಿಎನ್‌ಎಸ್‌ 125) ಅಡಿಯಲ್ಲಿ ಭಾರ್ಗವಿ ಪಿ.ಜಿ. ನಡೆಸುತ್ತಿದ್ದ ಶ್ಯಾಮಸುಂದರ್‌ ರೆಡ್ಡಿ ಹಾಗೂ ಕಟ್ಟಡದ ಮಾಲೀಕ ವಿಜಯ್‌ಕುಮಾರ್‌ ವಿರುದ್ಧ ಪ್ರಕರಣ ದಾಖಲಿಸಲಾಗಿದೆ ಎಂದು ಪೊಲೀಸರು ಹೇಳಿದ್ದಾರೆ.

ಜುಲೈ 23ರ ರಾತ್ರಿ 11 ಗಂಟೆಯಾದರೂ ಪಿ.ಜಿ. ಗೇಟ್‌ ತೆರೆದಿತ್ತು. ಭದ್ರತಾ ಸಿಬ್ಬಂದಿ ಇರಲಿಲ್ಲ. ಈ ಲೋಪಗಳನ್ನು ಬಳಸಿಕೊಂಡೇ ಅಭಿಷೇಕ್‌ ಘೋಸಿ ಪಿ.ಜಿ. ಪ್ರವೇಶಿಸಿ, 303ರ ಕೊಠಡಿಯಲ್ಲಿ ವಾಸವಿದ್ದ ಕೃತಿಕುಮಾರಿ (23) ಅವರನ್ನು ಹೊರಗೆ ಎಳೆದು ಚಾಕುವಿನಿಂದ ಇರಿದು ಹತ್ಯೆಗೈದಿದ್ದ ಎಂದು ಪೊಲೀಸರು ತಿಳಿಸಿದ್ದಾರೆ.

ADVERTISEMENT

ಪ್ರಕರಣದ ತನಿಖಾ ವರದಿ ಹಾಗೂ ಪೊಲೀಸ್‌ ಮಾರ್ಗಸೂಚಿ ಉಲ್ಲಂಘನೆ ಕುರಿತ ವರದಿ ಲಗತ್ತಿಸಿ ಭಾರ್ಗವಿ ಲೇಡೀಸ್ ಪಿ.ಜಿ. ಲೈಸೆನ್ಸ್‌ ರದ್ದುಗೊಳಿಸಲು ಶಿಫಾರಸು ಮಾಡಲಾಗುವುದು ಎಂದು ಹಿರಿಯ ಪೊಲೀಸ್‌ ಅಧಿಕಾರಿಯೊಬ್ಬರು ತಿಳಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.