ADVERTISEMENT

ಮಹಿಳಾ ಸಬಲೀಕರಣ ಸುಧಾರಣೆಗೆ ಸಹಕಾರಿ: ಡಿ.ವಿ ಸದಾನಂದ ಗೌಡ

​ಪ್ರಜಾವಾಣಿ ವಾರ್ತೆ
Published 28 ಜನವರಿ 2023, 19:36 IST
Last Updated 28 ಜನವರಿ 2023, 19:36 IST
ಬಾಗಲಗುಂಟೆಯ ಎಂಇಐ ಆಟದ ಮೈದಾನದಲ್ಲಿ ಎನ್. ಲೋಕೇಶ್ ಗೌಡ ಆಯೋಜಿಸಿದ್ದ ಪ್ರಧಾನಿ ನರೇಂದ್ರ ಮೋದಿ ಅವರ ಮಾತೃಶ್ರೀ ದಿ. ಹೀರಾಬೆನ್ ಮೋದಿ ಅವರ ಸ್ಮರಣಾರ್ಥವಾಗಿ ಮಹಿಳಾ ಸಬಲೀಕರಣ ಕಾರ್ಯಕ್ರಮದಲ್ಲಿ ಸ್ತ್ರೀ ಶಕ್ತಿ ಸ್ವಸಹಾಯ ಗುಂಪುಗಳಿಗೆ ಸಂಸದ ಡಿ.ವಿ. ಸದಾನಂದ ಗೌಡ ಅವರು ಸಹಾಯಧನ ವಿತರಿಸಿದರು. ಚಿತ್ರದುರ್ಗದ ಶ್ರೀ ಗುರು ಪೀಠದ ಪೀಠಾಧ್ಯಕ್ಷರಾದ ಶ್ರೀ ಮಾದಾರ ಚನ್ನಯ್ಯ ಸ್ವಾಮೀಜಿ, ಮಾಜಿ ಶಾಸಕ ಎಸ್. ಮುನಿರಾಜು, ದಾಸರಹಳ್ಳಿ ಮಂಡಲ ಬಿಜೆಪಿ ಅಧ್ಯಕ್ಷ ಎನ್. ಲೋಕೇಶ್ ಮುಂತಾದವರಿದ್ದರು.

ಪೀಣ್ಯ ದಾಸರಹಳ್ಳಿ: 'ಮಹಿಳೆಯರ ಸಬಲೀಕರಣದಿಂದ ಸಾಮಾಜಿಕ ಬದಲಾವಣೆಯ ಜತೆಗೆ ದೇಶದ ಪ್ರಗತಿ ಸಾಧ್ಯವಾಗಲಿದೆ' ಎಂದು ಸಂಸದ ಡಿ.ವಿ ಸದಾನಂದ ಗೌಡ ತಿಳಿಸಿದರು.

ಬಾಗಲಗುಂಟೆಯ ಎಂಇಐ ಆಟದ ಮೈದಾನದಲ್ಲಿ ಎನ್. ಲೋಕೇಶ್ ಗೌಡ ಆಯೋಜಿಸಿದ್ದ ಪ್ರಧಾನಿ ನರೇಂದ್ರ ಮೋದಿ ಅವರ ಮಾತೃಶ್ರೀ ದಿ. ಹೀರಾಬೆನ್ ಮೋದಿ ಅವರ ಸ್ಮರಣಾರ್ಥವಾಗಿ ಮಹಿಳಾ ಸಬಲೀಕರಣ ಕಾರ್ಯಕ್ರಮದಲ್ಲಿ ಸ್ತ್ರೀ ಶಕ್ತಿ ಸ್ವಸಹಾಯ ಗುಂಪುಗಳಿಗೆ ಸಹಾಯಧನ ವಿತರಿಸಿ ಮಾತನಾಡಿದರು.

'ರಾಷ್ಟ್ರ-ರಾಜ್ಯಗಳಲ್ಲಿ ಬಿಜೆಪಿ ನೇತೃತ್ವದ ಸರ್ಕಾರಗಳ ಅಧಿಕಾರದಲ್ಲಿ ಮಹಿಳಾ ಸಬಲೀಕರಣಕ್ಕೆ ವಿಶೇಷ ಆದ್ಯತೆ ನೀಡಲಾಗಿದೆ. ಮುಂದುವರಿದ ಭಾಗವಾಗಿ ಮಹಿಳೆಯರ ಜೀವನ, ಆರ್ಥಿಕ ಮಟ್ಟ ಸುಧಾರಣೆ ನಿಟ್ಟಿನಲ್ಲಿ ಲೋಕೇಶ್ ಗೌಡ ಮಹಿಳಾ ಸ್ವಸಹಾಯ ಸಂಘಗಳಿಗೆ ಆರ್ಥಿಕ ನೆರವು ನೀಡಿ ಮನೆ–ಮನ, ಮಹಿಳೆಯರನ್ನು ಮುಟ್ಟುವಂಥ ಅರ್ಥಪೂರ್ಣ ಸಮಾಜಮುಖಿ ಕಾರ್ಯ ಮಾಡಿ ಇತರರಿಗೂ ಮಾದರಿಯಾಗಿದ್ದಾರೆ' ಎಂದು ಶ್ಲಾಘಿಸಿದರು.

ADVERTISEMENT

ಚಿತ್ರದುರ್ಗದ ಶ್ರೀ ಗುರು ಪೀಠದ ಪೀಠಾಧ್ಯಕ್ಷ ರಾದ ಶ್ರೀ ಮಾದಾರ ಚನ್ನಯ್ಯ ಸ್ವಾಮೀಜಿ ಆಶೀರ್ವಚನ ನೀಡಿ, 'ಯಾವುದೇ ಸಮುದಾಯ, ದೇಶ ಅಭಿವೃದ್ಧಿ ಹೊಂದಬೇಕಾದರೆ ಮಹಿಳೆಯರ ಆರ್ಥಿಕ ಸಬಲೀಕರಣ ಅತ್ಯಂತ ಮಹತ್ವದ ಪಾತ್ರ ವಹಿಸುತ್ತದೆ. ಇದನ್ನು ಮನಗಂಡು ಲೋಕೇಶ್ ಗೌಡ ಅವರು ನೂರಾರು ಮಹಿಳಾ ಸಂಘಗಳ ಸಾವಿರಾರು ಮಹಿಳೆಯರಿಗೆ ಸಹಾಯಧನ ನೀಡುವ ಜತೆಗೆ ಶ್ರಮಿಕ ವರ್ಗ ಚಾಲಕರಿಗೆ ಉಚಿತ ಅಪಘಾತ ವಿಮೆ ಮಾಡಿಸಿ ಸಮವಸ್ತ್ರ ವಿತರಿಸಿದ್ದಾರೆ' ಎಂದರು.

ಮಾಜಿ ಶಾಸಕ ಎಸ್. ಮುನಿರಾಜು ಮಾತನಾಡಿದರು. ದಾಸರಹಳ್ಳಿ ಮಂಡಲ ಬಿಜೆಪಿ ಅಧ್ಯಕ್ಷ ಎನ್. ಲೋಕೇಶ್ ಗೌಡ, 'ರಾಜ್ಯದಾದ್ಯಂತ
ವೀರೇಂದ್ರ ಹೆಗ್ಗಡೆ ಅವರ ಶ್ರೀ ಧರ್ಮಸ್ಥಳ ಗ್ರಾಮಾಭಿವೃದ್ಧಿ ಸ್ವಸಹಾಯ ಸಂಘಗಳ ಪ್ರೇರಣೆಯಿಂದ ಮಹಿಳಾ ಸಂಘಗಳನ್ನು ನೋಂದಣಿ ಮಾಡಿಸಲಾಗಿದೆ. ಪ್ರಾರಂಭಿಕ ಕಾರ್ಯಚಟುವಟಿಕೆಗಳಿಗಾಗಿ ಆರ್ಥಿಕ ನೆರವು ನೀಡಲಾಗಿದ್ದು, ಸಂಘಗಳು ಸದ್ಬಳಕೆ ಮಾಡಿಕೊಂಡು ಜೀವನೋಪಾಯಕ್ಕೆ ದಾರಿ ಮಾಡಿಕೊಳ್ಳಬೇಕು' ಎಂದು ಮನವಿ ಮಾಡಿದರು.

ಬಿಜೆಪಿ ಮುಖಂಡರಾದ ಜಿ.ಮರಿಸ್ವಾಮಿ,ಟಿ.ಎಸ್ ಗಂಗರಾಜು, ರವಿಗೌಡ ಎಂ.ಎಸ್, ಗಿರೀಶ್, ಭರತ್ ಸೌಂದರ್ಯ, ಹನಶ್ರೀ ಮಂಜಣ್ಣ ಹಾಗೂ ಸಹಸ್ರಾರು ಮಹಿಳಾ ಸಂಘಗಳ ಸದಸ್ಯರು, ಸಾರ್ವಜನಿಕರು ಇದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.