ಬೆಂಗಳೂರು: ನೈರುತ್ಯ ರೈಲ್ವೆ ಬೆಂಗಳೂರು ವಿಭಾಗದ ದೊಡ್ಡಬೆಲೆ-ನಿಡವಂದ ನಿಲ್ದಾಣಗಳ ನಡುವೆ ನಿರ್ವಹಣೆ ಮತ್ತು ಮೂಲಸೌಕರ್ಯ ನವೀಕರಣದ ಕಾಮಗಾರಿ ಹಮ್ಮಿಕೊಂಡಿರುವುದರಿಂದ ರೈಲು ಸಂಚಾರದಲ್ಲಿ ಬದಲಾವಣೆ ಉಂಟಾಗಲಿದೆ.
ನವೆಂಬರ್ 10ರಂದು ಹುಬ್ಬಳ್ಳಿಯಿಂದ ಹೊರಡುವ ಎಸ್ಎಸ್ಎಸ್ ಹುಬ್ಬಳ್ಳಿ-ಕೆಎಸ್ಆರ್ ಬೆಂಗಳೂರು ಎಕ್ಸ್‌ಪ್ರೆಸ್ ರೈಲನ್ನು ಮಾರ್ಗ ಮಧ್ಯದಲ್ಲಿ 40 ನಿಮಿಷ ನಿಯಂತ್ರಿಸಲಾಗುತ್ತದೆ. ಕೆಎಸ್ಆರ್ ಬೆಂಗಳೂರು-ಎಸ್ಎಸ್ಎಸ್ ಹುಬ್ಬಳ್ಳಿ ವಿಶೇಷ ಎಕ್ಸ್‌ಪ್ರೆಸ್ ರೈಲು 2 ಗಂಟೆ ತಡವಾಗಿ ಹೊರಡಲಿದೆ. ಮಾರ್ಗ ಮಧ್ಯೆ 40 ನಿಮಿಷ ನಿಯಂತ್ರಿಸಲಾಗುತ್ತದೆ.
ನ. 8 ಮತ್ತು 11ರಂದು ಕೆಎಸ್ಆರ್ ಬೆಂಗಳೂರು-ಎಸ್ಎಸ್ಎಸ್ ಹುಬ್ಬಳ್ಳಿ ಎಕ್ಸ್‌ಪ್ರೆಸ್ ರೈಲು ಬೆಂಗಳೂರಿನಿಂದ 90 ನಿಮಿಷ ತಡವಾಗಿ ಹೊರಡಲಿದೆ. ಮಾರ್ಗ ಮಧ್ಯೆ 40 ನಿಮಿಷ ನಿಯಂತ್ರಿಸಲಾಗುತ್ತದೆ ಎಂದು ನೈರುತ್ಯ ರೈಲ್ವೆ ಅಧಿಕಾರಿಗಳು ತಿಳಿಸಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.