ADVERTISEMENT

ಬೆಂಗಳೂರು: ‘ಬಿದಿರು ಹಬ್ಬ’ ಕಾರ್ಯಾಗಾರ

​ಪ್ರಜಾವಾಣಿ ವಾರ್ತೆ
Published 16 ಸೆಪ್ಟೆಂಬರ್ 2024, 16:10 IST
Last Updated 16 ಸೆಪ್ಟೆಂಬರ್ 2024, 16:10 IST
<div class="paragraphs"><p>‘ಬಿದಿರು ಹಬ್ಬ’ದ ಭಾಗವಾಗಿ ಸಿಜಿಬಿಎಂಟಿ ಆವರಣದಲ್ಲಿ ಕೇರಳ ಅರಣ್ಯ ಸಂಶೋಧನಾ ಸಂಸ್ಥೆಯ ಮಾಜಿ ನಿರ್ದೇಶಕ ಶ್ಯಾಂ ವಿಶ್ವನಾಥ್‌ ಬಿದಿರು ನೆಟ್ಟರು. ಸಿಜಿಬಿಎಂಟಿ ಸಿಇಒ ಪ್ರೊ.ನೀಲಂ ಮಂಜುನಾಥ್ ಮತ್ತು ಇತರರು ಪಾಲ್ಗೊಂಡಿದ್ದರು</p></div>

‘ಬಿದಿರು ಹಬ್ಬ’ದ ಭಾಗವಾಗಿ ಸಿಜಿಬಿಎಂಟಿ ಆವರಣದಲ್ಲಿ ಕೇರಳ ಅರಣ್ಯ ಸಂಶೋಧನಾ ಸಂಸ್ಥೆಯ ಮಾಜಿ ನಿರ್ದೇಶಕ ಶ್ಯಾಂ ವಿಶ್ವನಾಥ್‌ ಬಿದಿರು ನೆಟ್ಟರು. ಸಿಜಿಬಿಎಂಟಿ ಸಿಇಒ ಪ್ರೊ.ನೀಲಂ ಮಂಜುನಾಥ್ ಮತ್ತು ಇತರರು ಪಾಲ್ಗೊಂಡಿದ್ದರು

   

ಬೆಂಗಳೂರು: ವಿಶ್ವ ಬಿದಿರು ದಿನದ ಅಂಗವಾಗಿ ‘ಹಸಿರು ಕಟ್ಟಡ ಸಾಮಗ್ರಿ ಮತ್ತು ತಂತ್ರಜ್ಞಾನ ಕೇಂದ್ರ–ಸಿಜಿಬಿಎಂಟಿ’ಯು ಬಿದಿರಿನಿಂದ ಕರಕುಶಲ ಮತ್ತು ನಿರ್ಮಾಣ ಸಾಮಗ್ರಿಗಳ ವಿನ್ಯಾಸ ಕಾರ್ಯಾಗಾರವನ್ನು ಹಮ್ಮಿಕೊಂಡಿದೆ.

ನಗರದ ಅಮೃತಹಳ್ಳಿ ರೈಲ್ವೆ ಗೇಟ್‌ ಬಳಿ ಇರುವ ಸಿಜಿಬಿಎಂಟಿ ಕ್ಯಾಂಪಸ್‌ನಲ್ಲಿ ಇದೇ 17ರಿಂದ 24ರವರೆಗೆ  ಕಾರ್ಯಾಗಾರ ನಡೆಯಲಿದೆ.

ADVERTISEMENT

ಬಿದಿರು ದಿನದ ಅಂಗವಾಗಿ ಇದೇ 15 ಮತ್ತು 16ರಂದು ಆಯೋಜಿಸಲಾಗಿದ್ದ ‘ಬಿದಿರು ಹಬ್ಬ’ದಲ್ಲಿ, ಸಿಜಿಬಿಎಂಟಿಯ ಆವರಣದಲ್ಲಿ ಬಿದಿರು ನೆಡಲಾಯಿತು. ಹೆಚ್ಚಿನ ಮಾಹಿತಿಗೆ ಸಂಸ್ಥೆಯ ಜಾಲತಾಣವನ್ನು ಸಂಪರ್ಕಿಸಬಹುದು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.