ADVERTISEMENT

ಅಂಗಾಂಗ ದಾನ: ಕಿರುನಾಟಕ ಪ್ರದರ್ಶನ

​ಪ್ರಜಾವಾಣಿ ವಾರ್ತೆ
Published 13 ಆಗಸ್ಟ್ 2024, 14:38 IST
Last Updated 13 ಆಗಸ್ಟ್ 2024, 14:38 IST
ರಾಜಾಜಿನಗರದ ಇಎಸ್‌ಐಸಿ ವಿದ್ಯಾರ್ಥಿಗಳು ಅಂಗಾಂಗ ದಾನದ ಮಹತ್ವ ಮತ್ತು ಪ್ರಯೋಜನಗಳ ಬಗ್ಗೆ ಕಿರು ನಾಟಕ ಪ್ರದರ್ಶಿಸಿದರು.
ರಾಜಾಜಿನಗರದ ಇಎಸ್‌ಐಸಿ ವಿದ್ಯಾರ್ಥಿಗಳು ಅಂಗಾಂಗ ದಾನದ ಮಹತ್ವ ಮತ್ತು ಪ್ರಯೋಜನಗಳ ಬಗ್ಗೆ ಕಿರು ನಾಟಕ ಪ್ರದರ್ಶಿಸಿದರು.    

ಬೆಂಗಳೂರು: ವಿಶ್ವ ಅಂಗಾಂಗ ದಾನ ದಿನದ ಅಂಗವಾಗಿ ರಾಜಾಜಿನಗರದ ಇಎಸ್ಐಸಿ ಆಸ್ಪತ್ರೆ ಆವರಣದಲ್ಲಿ ಅಂಗಾಂಗ ದಾನದ ಮಹತ್ವ ಮತ್ತು ಪ್ರಯೋಜನಗಳ ಬಗ್ಗೆ ಕಿರು ನಾಟಕ ಮೂಲಕ ಜಾಗೃತಿ ಮೂಡಿಸಲಾಯಿತು.

ವ್ಯಕ್ತಿ ನಿಧನದ ನಂತರ ಮಿದುಳು, ಹೃದಯ, ಮೂತ್ರಪಿಂಡ, ಯಕೃತ್ ಮತ್ತು ಹಲವಾರು ಅಂಗಾಂಗಗಳನ್ನು ದಾನ ಮಾಡಿದರೆ ಮತ್ತೊಬ್ಬ ರೋಗಿಯ ಜೀವನದಲ್ಲಿ ಬೆಳಕು ಮೂಡಲಿದೆ ಎಂಬುದನ್ನು ನಾಟಕದ ಮೂಲಕ ವಿದ್ಯಾರ್ಥಿಗಳು ತೋರಿಸಿದರು.  

ಇಎಸ್ಐಸಿ ಡೀನ್ ಡಾ. ಆರ್‌.ಸಂಧ್ಯಾ, ವೈದ್ಯಕೀಯ ಅಧೀಕ್ಷಕ ಡಾ.ಅಶೋಕ್ ಕುಮಾರ್ ಸಮಂತಾ, ಚರ್ಮರೋಗ ವಿಭಾಗದ ಮುಖ್ಯಸ್ಥ ಡಾ. ಎಂ.ಎಸ್.ಗಿರೀಶ್, ಅಂಗರಚನೆ ವಿಜ್ಞಾನ ವಿಭಾಗದ ಮುಖ್ಯಸ್ಥೆ ಡಾ.ಸೀಮಾ, ಪ್ರಾಧ್ಯಾಪಕ ಡಾ.ಮಲ್ಲಿಕಾರ್ಜುನ್ ಉಪಸ್ಥಿತರಿದ್ದರು.

ADVERTISEMENT

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.