ADVERTISEMENT

ನಾಳೆ ಯಕ್ಷಗಾನ ತಾಳಮದ್ದಳೆ

​ಪ್ರಜಾವಾಣಿ ವಾರ್ತೆ
Published 28 ಜೂನ್ 2024, 23:22 IST
Last Updated 28 ಜೂನ್ 2024, 23:22 IST
   

ಸಪ್ತಕವು ಪಾರ್ತಿಸುಬ್ಬ ವಿರಚಿತ ‘ವಾಲಿವಧೆ’ ಯಕ್ಷಗಾನ ತಾಳಮದ್ದಳೆಯನ್ನು ಜೂನ್‌ 30ರಂದು  ಹಮ್ಮಿಕೊಂಡಿದೆ. 

ಹಿಮ್ಮೇಳದಲ್ಲಿ ಭಾಗವತರು: ಗೋಪಾಲಕೃಷ್ಣ ಭಾಗವತ  ಜೋಗಿಮನೆ, ಸತೀಶ ಉಪಾಧ್ಯ, ಮೃದಂಗ: ಪಿ.ಕೆ.ಹೆಗಡೆ, ಮಯೂರ ಹೆಗಡೆ. ಮುಮ್ಮೇಳದಲ್ಲಿ ಸುಗ್ರೀವ: ಶ್ರೀಧರ ಡಿ.ಎಸ್‌. ಕಿನ್ನಿಗೋಳಿ. ವಾಲಿ: ನಾರಾಯಣ ಯಾಜಿ ಸಾಲೇಬೈಲು, ರಾಮ: ಮೋಹನ ಹೆಗಡೆ ಹೆರವಟ್ಟಾ, ಹನುಮಂತ: ಡಾ. ಶ್ರೀಪಾದ ಹೆಗಡೆ ಹುಕ್ಲಮಕ್ಕಿ. 

ಕಾರ್ಯಕ್ರಮ ನಡೆಯುವ ಸ್ಥಳ: ಸುಭಾಷ ಭವನ, ನೇತಾಜಿ, ಸುಭಾಷಚಂದ್ರ ಬೋಸ್‌ ಮುಖ್ಯರಸ್ತೆ, ಐಡಿಯಲ್ ಹೋಮ್‌ ಟೌನ್‌ಶಿಪ್‌, ರಾಜರಾಜೇಶ್ವರಿ ನಗರ. ಸಂಜೆ 5 ಗಂಟೆಗೆ 

ADVERTISEMENT

ಯಕ್ಷ ಪಕ್ಷ

ಫಾಟಕ್‌ ಯಕ್ಷ ಸಂಸ್ಕೃತಿ ಟ್ರಸ್ಟ್‌ ಹಮ್ಮಿಕೊಂಡಿರುವ ‘ಯಕ್ಷ ಪಕ್ಷ’ ಪ್ರಯುಕ್ತ  ಜೂನ್‌ 29ರಂದು  ಹಲಸಿನಹಳ್ಳಿ ನರಸಿಂಹ ಶಾಸ್ತ್ರಿ ವಿರಚಿತ ‘ಜಾಂಬವತೀ ಕಲ್ಯಾಣ’ ಪ್ರಸಂಗ ನಡೆಯಲಿದೆ.

ಕಾರ್ಯಕ್ರಮ ನಡೆಯುವ ಸ್ಥಳ: ಮಹಾಗಣಪತಿ ದೇವಸ್ಥಾನ, ಪ್ಯಾರಾಮೌಂಟ್‌ ಗಾರ್ಡನ್‌, ತಲಘಟ್ಟಪುರ ಮೆಟ್ರೊ ನಿಲ್ದಾಣದ ಹತ್ತಿರ, ಕನಕಪುರ ರಸ್ತೆ. ಸಂಜೆ 5.30ಕ್ಕೆ 

ಜೂನ್‌ 30ರಂದು ಬವಲಾಡಿ ಹಿರಿಯಣ್ಣ ಹೆಬ್ಬಾರ್‌ ವಿರಚಿತ ‘ವಿಶ್ವಾಮಿತ್ರ ಮೇನಕೆ’ ಪ್ರಸಂಗ ಪ್ರದರ್ಶನ.

ಸ್ಥಳ: ಪದ್ಮಾಲಯ, ನಂ 2, 17ನೇ ಅಡ್ಡರಸ್ತೆ, 11ನೇ ಮುಖ್ಯರಸ್ತೆ, ಪದ್ಮನಾಭನಗರ. ಬೆಳಿಗ್ಗೆ 10ಕ್ಕೆ

ಹಿಮ್ಮೇಳದಲ್ಲಿ: ಅನಂತ ಹೆಗಡೆ ದಂತಳಿಗೆ, ಎ.ಪಿ.ಫಾಟಕ್‌, ಕಾರ್ಕಳ, ಭಾವನಾ ಹೆಗಡೆ. ಅರ್ಥಧಾರಿಗಳು: ರಾಧಾಕೃಷ್ಣ ಕಲ್ಚಾರ್‌, ಹರೀಶ್‌ ಬೋಳಂತಿಮೊಗರು, ಸುಬ್ರಹ್ಮಣ್ಯ ಭಟ್‌ ಗುರ್ತೇಗದ್ದೆ, ಮಾಗೋಡು ಪ್ರಸನ್ನ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.