ಯಲಹಂಕ: ವೆಂಕಟಾಲದಲ್ಲಿರುವ ಅಭಯ ಮಹಾಗಣಪತಿ ದೇವಾಲಯದ 12ನೇ ವಾರ್ಷಿಕೋತ್ಸವದ ಪ್ರಯುಕ್ತ ನವೆಂಬರ್ 9 ಮತ್ತು 10ರಂದು ಕಡಲೇಕಾಯಿ ಪರಿಷೆಯನ್ನು ಆಯೋಜಿಸಲಾಗಿದೆ.
ಪರಿಷೆಯಲ್ಲಿ ಕಡಲೇಕಾಯಿಯನ್ನು ರಾಶಿ ಹಾಕಿ ವ್ಯಾಪಾರ ಮಾಡುವ ಪ್ರತಿಯೊಬ್ಬರಿಗೂ ದೇವಸ್ಥಾನದ ವತಿಯಿಂದ ₹500 ವಿತರಿಸಲಾಗುವುದು. ಅಲ್ಲದೆ ವ್ಯಾಪಾರಿಗಳಿಗೆ ಕಾಫಿ, ತಿಂಡಿ ಹಾಗೂ ಊಟದ ವ್ಯವಸ್ಥೆ ಮಾಡಲಾಗುವುದು ಎಂದು ದೇವಸ್ಥಾನದ ಆಡಳಿತ ಮಂಡಳಿ ಅಧ್ಯಕ್ಷ ಕೆಂಪೇಗೌಡ ತಿಳಿಸಿದ್ದಾರೆ.
ಕಡಲೇಕಾಯಿ ಪರಿಷೆಯಲ್ಲಿ ಗೃಹೋಪಯೋಗಿ ವಸ್ತುಗಳು, ಕೃತಕ ಆಭರಣಗಳು, ಮಕ್ಕಳ ಆಟಿಕೆಗಳು, ಮಣ್ಣಿನಿಂದ ತಯಾರಿಸಿದ ಮಡಕೆ-ಕುಡಿಕೆಗಳು, ಆಲಂಕಾರಿಕ ವಸ್ತುಗಳು, ತಿಂಡಿ-ತಿನಿಸುಗಳ ಮಾರಾಟವೂ ನಡೆಯಲಿದೆ. ಮಕ್ಕಳು ಮತ್ತು ಪೋಷಕರ ಮನರಂಜನೆಗಾಗಿ, ಜಾಯಿಂಟ್ ವೀಲ್, ಡ್ಯಾಶಿಂಗ್ ಕಾರ್, ಪುಟಾಣಿ ರೈಲು ಮತ್ತಿತರ ಆಟಗಳಿಗೆ ವ್ಯವಸ್ಥೆ ಕಲ್ಪಿಸಲಾಗುವುದು ಎಂದು ಅವರು ಮಾಹಿತಿ ನೀಡಿದರು.
ಹೆಚ್ಚಿನ ಮಾಹಿತಿಗಾಗಿ-9980196440, 9632365956 ಸಂಪರ್ಕಿಸಬಹುದು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.