ಬೆಂಗಳೂರು: ನೇಪಾಳದ ಕಠ್ಮಂಡುದಲ್ಲಿ ಜುಲೈ 27ರಿಂದ 31ರವರೆಗೆ ನಡೆಯುವ ‘ಯಂಗ್ ಪ್ರೊಫೆಷನಲ್ ಫೆಲೋಶಿಪ್ ನೇಪಾಳ–2023’ಕ್ಕೆ ಬೆಂಗಳೂರಿನ ಕೃಪಾನಿಧಿ ಸ್ಕೂಲ್ ಆಫ್ ಮ್ಯಾನೇಜ್‌ಮಂಟ್‌ನ ಅಧ್ಯಾಪಕಿ ಪ್ರೊ. ಉರ್ಮಿ ಚಕ್ರವರ್ತಿ ಭಾರತವನ್ನು ಪ್ರತಿನಿಧಿಸಲಿದ್ದಾರೆ.
ಯಂಗ್ ಪ್ರೊಫೆಷನಲ್ ಫೆಲೋಶಿಪ್ ನೇಪಾಳವು ವಿವಿಧ ಸಂಸ್ಥೆಗಳ ಸಹಯೋಗದಲ್ಲಿ ರಾಜತಾಂತ್ರಿಕ ಕೌಶಲಗಳನ್ನು ಪ್ರದರ್ಶಿಸುವ ವೇದಿಕೆಯಾಗಿದೆ. ಈ ಫೆಲೋಶಿಪ್‌ನಲ್ಲಿ ಪ್ರೊ. ಉರ್ಮಿ ಚಕ್ರವರ್ತಿ ಅವರು ಅಭಿವೃದ್ಧಿಯಲ್ಲಿ ಯುವಕರು ಮತ್ತು ಮಹಿಳೆಯರ ಪಾತ್ರದ ಬಗ್ಗೆ ಮಾತನಾಡಲಿದ್ದಾರೆ ಎಂದು ಪ್ರಕಟಣೆ ತಿಳಿಸಿದೆ.
ಸುಸ್ಥಿರ ಅಭಿವೃದ್ಧಿಯ ಗುರಿಗಳನ್ನು ಉತ್ತೇಜಿಸಲು ಮತ್ತು ಶಾಂತಿ ನೆಲೆಸಲು ವಿವಿಧ ದೇಶಗಳ ರಾಜತಾಂತ್ರಿಕರು, ಯುವಕರು ಈ ಕಾರ್ಯಕ್ರಮದಲ್ಲಿ ಭಾಗವಹಿಸಲಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.