ADVERTISEMENT

ಬೆಂಗಳೂರು | ಆನ್‌ಲೈನ್ ಟ್ರೇಡಿಂಗ್: ₹32 ಲಕ್ಷ ವಂಚನೆ

ಮ್ಯಾಟ್ರಿಮೊನಿ ವೆಬ್‌ಸೈಟ್‌ನಲ್ಲಿ ಯುವತಿ ಪರಿಚಯ

​ಪ್ರಜಾವಾಣಿ ವಾರ್ತೆ
Published 27 ಅಕ್ಟೋಬರ್ 2024, 23:30 IST
Last Updated 27 ಅಕ್ಟೋಬರ್ 2024, 23:30 IST
<div class="paragraphs"><p>ವಂಚನೆ</p></div>

ವಂಚನೆ

   

ಬೆಂಗಳೂರು: ಮ್ಯಾಟ್ರಿಮೊನಿ ವೆಬ್‌ಸೈಟ್‌ನಲ್ಲಿ ಸಂಪರ್ಕಕ್ಕೆ ಬಂದು, ವಿವಾಹ ಆಗುವುದಾಗಿ ನಂಬಿಸಿದ್ದ ಯುವತಿಯೊಬ್ಬಳು ಆನ್‌ಲೈನ್‌ ಟ್ರೇಡಿಂಗ್‌ ಹೆಸರಿನಲ್ಲಿ ಖಾಸಗಿ ಕಂಪನಿ ಉದ್ಯೋಗಿಯೊಬ್ಬರಿಗೆ ₹ 32 ಲಕ್ಷ ವಂಚಿಸಿರುವ ಘಟನೆ ನಡೆದಿದೆ.

ಈ ಸಂಬಂಧ ಲಕ್ಷ್ಮಣ ನಗರದ ನಿವಾಸಿ ಪ್ರವೀಣ್ ಜಾದವ್ ಅವರು ಸೆನ್ ಠಾಣೆಯಲ್ಲಿ ದೂರು ನೀಡಿದ್ದು, ಪ್ರಕರಣ ದಾಖಲಿಸಿಕೊಂಡು ಪೊಲೀಸರು ತನಿಖೆ ಕೈಗೊಂಡಿದ್ದಾರೆ.

ADVERTISEMENT

‘ಪ್ರವೀಣ್ ಜಾದವ್ ಅವರಿಗೆ ಮ್ಯಾಟ್ರಿಮೊನಿ ಸೈಟ್‌ನಲ್ಲಿ ನಿಹಾರಿಕ ಮೆನನ್ ಎಂಬುವರ ಪರಿಚಯವಾಗಿ,  ಇಬ್ಬರೂ ಮೊಬೈಲ್‌ನಲ್ಲಿ ನಿತ್ಯ ಮಾತನಾಡುತ್ತಿದ್ದರು. ಕೊಚ್ಚಿಯಲ್ಲಿ ವಾಸವಿದ್ದು, ರಫ್ತು ವ್ಯವಹಾರ ಮತ್ತು ಟ್ರೇಡಿಂಗ್ ಮಾಡುತ್ತಿರುವುದಾಗಿ ಯುವತಿ ಹೇಳಿಕೊಂಡಿದ್ದಾಳೆ. ತನ್ನ ಫೋಟೊವನ್ನು ಕಳುಹಿಸಿ, ಮದುವೆಯಾಗುವುದಾಗಿ ಯುವಕನಿಗೆ ಭರವಸೆ ನೀಡಿದ್ದಳು’ ಎಂದು ಪೊಲೀಸರು ತಿಳಿಸಿದ್ದಾರೆ.

‘ಆನ್‌ಲೈನ್‌ ಟ್ರೇಡಿಂಗ್‌ನಲ್ಲಿ ಹಣ ಹೂಡಿಕೆ ಮಾಡಿದರೆ ಹೆಚ್ಚು ಲಾಭಾಂಶ ಗಳಿಸಬಹುದು ಎಂಬ ಯುವತಿಯ ಮಾತು ನಂಬಿ, ಆಕೆ ಸೂಚಿಸಿದ ಖಾತೆಗಳಿಗೆ ಯುವಕ ಹಣ ವರ್ಗಾವಣೆ ಮಾಡುತ್ತಿದ್ದ. ಆರಂಭದಲ್ಲಿ ಒಂದು ಲಕ್ಷ ರೂಪಾಯಿಗೆ ₹ 20 ಸಾವಿರ ಲಾಂಭಾಂಶ ತೋರಿಸಿದ್ದಾರೆ. ನಂತರ ವಿವಿಧ ಬ್ಯಾಂಕ್ ಖಾತೆಗಳಿಗೆ ಆರ್‌ಟಿಜಿಎಸ್, ನೆಫ್ಟ್‌ ಮೂಲಕ ಹಂತ ಹಂತವಾಗಿ ₹ 32 ಲಕ್ಷ ವರ್ಗಾವಣೆ ಮಾಡಿದ್ದಾರೆ. ನಂತರ ಹಣ ವಾಪಸ್ ನೀಡದೆ ಯುವತಿ ವಂಚನೆ ಮಾಡಿದ್ದಾಳೆ’ ಎಂದು ತಿಳಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.