ADVERTISEMENT

ಬೆಂಗಳೂರು: ‘ಸಲಾನ್‌’ ಛಾಯಾಚಿತ್ರಗಳ ಪ್ರದರ್ಶನ ಇದೇ 29ರಿಂದ

​ಪ್ರಜಾವಾಣಿ ವಾರ್ತೆ
Published 26 ಜೂನ್ 2024, 16:32 IST
Last Updated 26 ಜೂನ್ 2024, 16:32 IST
ಶಾರಿಕಾ ವಿ ಅವರು ಸೆರೆ ಹಿಡಿದ ಛಾಯಾಚಿತ್ರ.
ಶಾರಿಕಾ ವಿ ಅವರು ಸೆರೆ ಹಿಡಿದ ಛಾಯಾಚಿತ್ರ.   

ಬೆಂಗಳೂರು: ಯೂತ್ ಫೋಟೊಗ್ರಫಿಕ್ ಸೊಸೈಟಿ(ವೈಪಿಎಸ್‌) ಈಚೆಗೆ ನಡೆಸಿದ್ದ 42ನೇ ವಾರ್ಷಿಕ ಅಖಿಲ ಭಾರತ ಕಲಾತ್ಮಕ ಛಾಯಾಚಿತ್ರ ಸ್ಪರ್ಧೆ–2024ರ (ಸಲಾನ್‌) ವಿಜೇತ ಛಾಯಾಚಿತ್ರಗಳ ಪ್ರದರ್ಶನವನ್ನು ಕುಮಾರ ಕೃಪಾ ರಸ್ತೆಯ ಚಿತ್ರಕಲಾ ಪರಿಷತ್‌ನಲ್ಲಿ ಜೂನ್‌ 29ರಿಂದ 30ರವರೆಗೆ ನಡೆಯಲಿದೆ.

ಪ್ರದರ್ಶನ ಎರಡು ದಿನ ಇರುತ್ತದೆ. ಪ್ರತಿದಿನ ಬೆಳಿಗ್ಗೆ 10.30ರಿಂದ ಸಂಜೆ 6ರವರೆಗೆ ಸಾರ್ವಜನಿಕರು ವೀಕ್ಷಿಸಬಹುದು. ಈ ಸ್ಪರ್ಧೆಯಲ್ಲಿ ದೇಶದ ವಿವಿಧ ಭಾಗಗಳ 206 ಛಾಯಾಗ್ರಾಹಕರು ಭಾಗವಹಿಸಿದ್ದರು. 2,753 ಚಿತ್ರಗಳನ್ನು ಪರಿಶೀಲನೆ ಮಾಡಿದ ಅನುಭವಿ ನಿರ್ಣಾಯಕ ಮಂಡಳಿ 563 ಚಿತ್ರಗಳನ್ನು ಆಯ್ಕೆ ಮಾಡಿದ್ದು, ಅವುಗಳಲ್ಲಿ 60 ಚಿತ್ರಗಳನ್ನು ವಿವಿಧ ಪ್ರಶಸ್ತಿ, ನಗದು ಬಹುಮಾನಗಳಿಗೆ ಪರಿಗಣಿಸಿದೆ.

ಜೂನ್‌ 30ರಂದು ವಿಜೇತರಿಗೆ ಪ್ರಶಸ್ತಿ, ನಗದು ಪುರಸ್ಕಾರ ನೀಡಲಾಗುವುದು. ಕಲಾವಿದೆ ಸುಧಾ ಬೆಳವಾಡಿ, ಯುವಜನ ಸಬಲೀಕರಣ ಮತ್ತು ಕ್ರೀಡಾ ಇಲಾಖೆ ಆಯುಕ್ತ ಎನ್‌. ಶಶಿ ಕುಮಾರ್ ಅವರು ಅತಿಥಿಗಳಾಗಿ ಭಾಗವಹಿಸಲಿದ್ದಾರೆ ಎಂದು ಪ್ರಕಟಣೆ ತಿಳಿಸಿದೆ.

ADVERTISEMENT
ಕಾರ್ತಿಕ್‌ ಎಸ್. ಕಾರ್ಗಲ್‌ ಅವರು ಸೆರೆ ಹಿಡಿದ ಹಛಾಯಾಚಿತ್ರ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.