ADVERTISEMENT

ಬೀದರ್‌ | ಸನ್ನಡತೆ; 100 ಜನ ರೌಡಿಶೀಟರ್‌ನಿಂದ ಹೊರಕ್ಕೆ

​ಪ್ರಜಾವಾಣಿ ವಾರ್ತೆ
Published 19 ಫೆಬ್ರುವರಿ 2024, 4:50 IST
Last Updated 19 ಫೆಬ್ರುವರಿ 2024, 4:50 IST
ಬೀದರ್‌ ಜಿಲ್ಲಾ ಪೊಲೀಸ್‌ ಕಚೇರಿಯಲ್ಲಿ ಏರ್ಪಡಿಸಿದ್ದ ಕಾರ್ಯಕ್ರಮದಲ್ಲಿ ಬೆಲ್ದಾಳ ಸಿದ್ದರಾಮ ಶರಣರು ಮಾತನಾಡಿದರು
ಬೀದರ್‌ ಜಿಲ್ಲಾ ಪೊಲೀಸ್‌ ಕಚೇರಿಯಲ್ಲಿ ಏರ್ಪಡಿಸಿದ್ದ ಕಾರ್ಯಕ್ರಮದಲ್ಲಿ ಬೆಲ್ದಾಳ ಸಿದ್ದರಾಮ ಶರಣರು ಮಾತನಾಡಿದರು   

ಬೀದರ್‌: ಸನ್ನಢತೆ ಆಧರಿಸಿ 100 ಜನರ ಹೆಸರುಗಳನ್ನು ರೌಡಿಶೀಟರ್‌ ಪಟ್ಟಿಯಿಂದ ಕೈಬಿಡಲಾಗಿದೆ ಎಂದು ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ಚನ್ನಬಸವಣ್ಣ ಎಸ್‌.ಎಲ್‌. ತಿಳಿಸಿದ್ದಾರೆ.

ಜಿಲ್ಲಾ ಪೊಲೀಸ್‌ ಇಲಾಖೆಯಿಂದ ನಗರದ ಜಿಲ್ಲಾ ಪೊಲೀಸ್‌ ಕಚೇರಿ ಆವರಣದಲ್ಲಿ ಶನಿವಾರ ಸಂಜೆ ಏರ್ಪಡಿಸಿದ್ದ ‘ಸಮಾಜಮುಖಿ ಮನಪರಿವರ್ತನೆ’ ಹಾಗೂ ಸರ್ವಧರ್ಮ ಗುರುಗಳಿಂದ ಹಿತವಚನ, ಸದ್ವರ್ತನೆ ಶಪಥ’ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

ಬೀದರ್‌ ಜಿಲ್ಲಾ ಪೊಲೀಸರು ಕಾನೂನು ಸುವ್ಯವಸ್ಥೆ ಕಾಪಾಡಲು ಸಮಾಜಘಾತುಕ ಶಕ್ತಿಗಳ ಮೇಲೆ, ಅಪರಾಧಿಕ ಹಿನ್ನೆಲೆ ಹೊಂದಿದವರ ಮೇಲೆ ನಿಗಾ ಇಡಲು ರೌಡಿಶೀಟರ್‌ ಪಟ್ಟಿಯಲ್ಲಿ ಹೆಸರು ಸೇರಿಸಿದ್ದರು. ಯಾರು ಮನಃಪರಿವರ್ತನೆಗೊಂಡು ಅವರ ವ್ಯಕ್ತಿತ್ವ ಬದಲಿಸಿಕೊಂಡಿದ್ದಾರೋ ಅಂತಹವರು ಹಾಗೂ ಉನ್ನತ ಶಿಕ್ಷಣ ಪಡೆದು ಖಾಸಗಿ ಕಂಪನಿಗಳಲ್ಲಿ ನೌಕರಿಯಿಂದ ವಂಚಿತರಾಗುತ್ತಿರುವವರ ಉತ್ತಮ ನಡತೆ ನೋಡಿಕೊಂಡು ಒಟ್ಟು 100 ಜನರ ಹೆಸರು ರೌಡಿಶೀಟರ್‌ನಿಂದ ಕೈಬಿಡಲಾಗಿದೆ. ಸಮಾಜದಲ್ಲಿ ಉತ್ತಮ ವ್ಯಕ್ತಿಯಾಗಿ ಬದುಕಲು ಇದೊಂದು ಉತ್ತಮ ಅವಕಾಶವಿದ್ದು, ಅದರ ಪ್ರಯೋಜನ ಪಡೆಯಬೇಕು ಎಂದು ಹೇಳಿದರು.

ADVERTISEMENT

ಬೆಲ್ದಾಳ ಸಿದ್ದರಾಮ ಶರಣರು, ರಾಜಯೋಗಿನಿ ಪ್ರತಿಮಾ ಬಹೇನಜಿ, ಭಂತೆ ಜ್ಞಾನಸಾಗರ, ಗ್ಯಾನಿ ದರಬಾರ ಸಿಂಗ್, ಆಸಿಫೋದ್ದಿನ್‌, ನೆಲ್ಸನ್ ಸುಮಿತ್ರ ಅವರು ಸರ್ವ ಧರ್ಮಗಳ ಮಹತ್ವ, ಶಾಂತಿ, ದಯೆ ಮಹತ್ವ ತಿಳಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.