ಜನವರಿ 18: ಕೊಳಾರ ಕೈಗಾರಿಕೆ ಪ್ರದೇಶದಲ್ಲಿ ಸ್ಫೋಟವಾಗಿ ವ್ಯಕ್ತಿಯೊಬ್ಬರು ಗಂಭೀರ ಗಾಯಗೊಂಡರು.
ಜನವರಿ 28: ರೈಲು ನಿಲ್ದಾಣದಲ್ಲಿ ಸಂಸದರು ವೈಫೈ ಉದ್ಘಾಟಿಸಿದರು.
ಫೆಬ್ರುವರಿ 04: ಜಿಲ್ಲಾ ಕನ್ನಡ ಸಾಹಿತ್ಯ ಸಮ್ಮೇಳನ ಅದ್ದೂರಿಯಾಗಿ ನಡೆಯಿತು.
ಮಾರ್ಚ್ 31: ಜಿಲ್ಲೆಯಲ್ಲಿ ಗರಿಷ್ಠ ತಾಪಮಾನ 40 ಡಿಗ್ರಿ ಸೆಲ್ಸಿಯಸ್ ದಾಖಲು.
ಏಪ್ರಿಲ್ 09: ನಗರಕ್ಕೆ ಪ್ರಧಾನಮಂತ್ರಿ ನರೇಂದ್ರ ಮೋದಿ ಭೇಟಿ.
ಮೇ 13: ಬಸವಕಲ್ಯಾಣ ತಾಲ್ಲೂಕಿನ ಹಿರೇನಾಗಾಂವ ಗ್ರಾಮದ ಹೊರವಲಯದಲ್ಲಿರುವ ತೆರೆದ ಬಾವಿಗೆ ಟ್ಯಾಂಕರ್ ನೀರು ಸುರಿದು ಹೋದ ನಂತರ ಮಹಿಳೆಯರು ಸುಡು ಬಿಸಿಲಲ್ಲೇ ನೀರು ಸೇದಿಕೊಂಡ ಪರಿಸ್ಥಿತಿ ನಿರ್ಮಾಣವಾಗಿತ್ತು.
ಜೂನ್ 26: ಬಸವಕಲ್ಯಾಣದಲ್ಲಿ ಮನೆಯ ಮಾಳಿಗೆ ಕುಸಿದು ಒಂದೇ ಕುಟುಂಬದ ಐವರು ಸ್ಥಳದಲ್ಲೇ ಮೃತಪಟ್ಟರು.
ಜೂನ್ 27: ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಅವರು ಬಸವಕಲ್ಯಾಣ ತಾಲ್ಲೂಕಿನ ಉಜಳಂಬದಲ್ಲಿ ಜನತಾ ದರ್ಶನದಲ್ಲಿ ಪಾಲ್ಗೊಂಡು ಗ್ರಾಮ ವಾಸ್ತವ್ಯ ಮಾಡಿ ಗಡಿಭಾಗದ ಜನರ ಸಮಸ್ಯೆಗಳನ್ನು ಆಲಿಸಿದರು.
ಜುಲೈ 02: ಭಾಲ್ಕಿ ತಾಲ್ಲೂಕಿನ ಕಣಜಿ ಗ್ರಾಮದಲ್ಲಿ ಯುವಕನೊಬ್ಬ ಹಣಕ್ಕಾಗಿ ತನ್ನ ಅಜ್ಜಿಯನ್ನೇ ಚಾಕುವಿನಿಂದ ಇರಿದು ಕೊಲೆ ಮಾಡಿದ.
ಜುಲೈ 16: ಗುಂಪಾದ ಸಿದ್ಧಾರೂಢ ಮಠದ ಶಿವಕುಮಾರ ಸ್ವಾಮೀಜಿ ಅಮೃತ ಮಹೋತ್ಸವ ಅಚರಿಸಲಾಯಿತು.
ಆಗಸ್ಟ್ 17: ಕರ್ನಾಟಕ ಭೂ ಕಂದಾಯ ಕಾಯ್ದೆ ಉಲ್ಲಂಘಿಸಿ ಅನಧಿಕೃತವಾಗಿ ಲೇಔಟ್ ಸೃಷ್ಟಿಸಿ ನಿವೇಶನಗಳನ್ನಾಗಿ ಮಾಡಿ ಮಾರಾಟ ಮಾಡುತ್ತಿರುವ ಬೀದರ್ ತಾಲ್ಲೂಕಿನ 157 ಜಮೀನುಗಳ ಮಾಲೀಕರಿಗೆ ಜಿಲ್ಲಾಧಿಕಾರಿ ನೋಟಿಸ್ ಜಾರಿ.
ಸೆಪ್ಟೆಂಬರ್ 24: ಹೈದರಾಬಾದ್‌ನಲ್ಲಿ ಕದ್ದ ಕಾರ್‌ನಲ್ಲಿ ಬಂದು ಹುಮನಾಬಾದ್ ತಾಲ್ಲೂಕಿನ ಗ್ರಾಮವೊಂದರ ಬಳಿ ಲಾರಿ ಚಾಲಕನ ಮೇಲೆ ಚಾಕುವಿನಿಂದ ಹಲ್ಲೆ ನಡೆಸಿ, ಹಣ ಲೂಟಿ ಮಾಡಿ ಇನ್ನೊಂದು ದರೋಡೆಗೆ ಸಜ್ಜಾಗುತ್ತಿದ್ದ ದರೋಡೆಕೋರರ ತಂಡದ ಮೇಲೆ ಪೊಲೀಸರು ಎರಡು ಸುತ್ತು ಗುಂಡು ಹಾರಿಸಿದರು.
ಸೆಪ್ಟೆಂಬರ್ 30: ಬೀದರ್ ತಾಲ್ಲೂಕಿನ ವಿಳಾಸಪುರ ಬಳಿ ಲಾರಿ ಡಿಕ್ಕಿ ಹೊಡೆದು ಆರು ಆಕಳುಗಳು ಮೃತಪಟ್ಟವು.
ಅಕ್ಟೋಬರ್ 04: ಜಿಲ್ಲೆಯಲ್ಲಿ ಬೆಳ್ಳುಳ್ಳಿ ಬೆಲೆ ₹200ಕ್ಕೆ ತಲುಪಿ ಗ್ರಾಹಕರು ಹುಬ್ಬೇರಿಸುವಂತೆ ಮಾಡಿತು.
ಅಕ್ಟೋಬರ್ 18: ಮಾರಕ ಗ್ಲ್ಯಾಂಡರ್ಸ್ ರೋಗದಿಂದ ನಗರದ ಚಿದ್ರಿಯಲ್ಲಿ ಎರಡು ಕುದುರೆಗಳು ಮೃತಪಟ್ಟ ಕಾರಣ ಕುದುರೆ ಹಾಗೂ ಕತ್ತೆಗಳ ಅಂತರರಾಜ್ಯ ಸಂಚಾರಕ್ಕೆ ನಿಷೇಧ ಹೇರಲಾಯಿತು.
ಅಕ್ಟೋಬರ್ 22: ಬೀದರ್‌ನ ಗುರುನಾನಕ ದೇವ ಎಂಜಿನಿಯರಿಂಗ್ ಕಾಲೇಜಿನ ಆವರಣದಲ್ಲಿ ವಿಶ್ವೇಶ್ವರಯ್ಯ ತಾಂತ್ರಿಕ ವಿಶ್ವವಿದ್ಯಾಲಯದ ಅಂತರ ಕಾಲೇಜುಗಳ ಅಥ್ಲೆಟಿಕ್ಸ್ ಕ್ರೀಡಾಕೂಟದ ಎತ್ತರ ಜಿಗಿತದಲ್ಲಿ ಪುರುಷ ವಿಭಾಗದಲ್ಲಿ ಮಹಮ್ಮದ್ ಹಾಗೂ ಮಹಿಳೆಯರ ವಿಭಾಗದಲ್ಲಿ ಲಾವಣ್ಯ ಮೊದಲ ಬಹುಮಾನ ಗೆದ್ದುಕೊಂಡರು.
ನವೆಂಬರ್ 19: ಇಂಡೊನೇಷ್ಯಾದಲ್ಲಿ ನಡೆದ ಸ್ಪರ್ಧೆಯಲ್ಲಿ ಜಿಲ್ಲೆಯ ಹುಮನಾಬಾದ್ ತಾಲ್ಲೂಕಿನ ಧುಮ್ಮನಸೂರು ಗ್ರಾಮದ ನಿಶಾ ತಾಳಂಪಳ್ಳಿ ‘ಮಿಸ್ ಇಂಡಿಯಾ ಇಂಟರ್‌ನ್ಯಾಷನಲ್’ ಕಿರೀಟವನ್ನು ಗೆದ್ದುಕೊಂಡರು.
ನವೆಂಬರ್ 25: ಜೈ ಕರ್ನಾಟಕ ರಕ್ಷಣಾ ವೇದಿಕೆಯ ಜಿಲ್ಲಾ ಘಟಕದ ವತಿಯಿಂದ ಕನ್ನಡ ರಾಜ್ಯೋತ್ಸವ ಅಂಗವಾಗಿ ನಗರದಲ್ಲಿ ಒಂದು ಕಿ.ಮೀ.ಉದ್ದದ ನಾಡ ಬಾವುಟದ ಮೆರವಣಿಗೆ ನಡೆಸಲಾಯಿತು.
ನವೆಂಬರ್ 30: ಹೈದರಾಬಾದ್–ಸೋಲಾಪುರ ರಾಷ್ಟ್ರೀಯ ಹೆದ್ದಾರಿ (ಸಂಖ್ಯೆ 65)ಯಲ್ಲಿ ಚಿಟಗುಪ್ಪ ತಾಲ್ಲೂಕಿನ ಮಂಗಲಗಿ ಗ್ರಾಮದ ಬಳಿ ನಿರ್ಮಿಸಿರುವ ಎಲ್ ಆ್ಯಂಡ್ ಟಿ ಡೆಕ್ಕನ್ ಟೋಲ್ ಪ್ಲಾಜಾ ಬಳಿ ಫಾಸ್ಟ್‌ಟ್ಯಾಗ್ ಮೂಲಕ ಶುಲ್ಕ ಆಕರಣೆ ಕಾರ್ಯ ಆರಂಭವಾಯಿತು.
ಡಿಸೆಂಬರ್ 05: ಚಿಟಗುಪ್ಪ ತಾಲ್ಲೂಕಿನ ಮನ್ನಾಎಖ್ಖೆಳ್ಳಿ ಹೊರವಲಯದಲ್ಲಿ ಮಹಾರಾಷ್ಟ್ರದಿಂದ ತೆಲಂಗಾಣಕ್ಕೆ ತೆರಳುತ್ತಿದ್ದ ಕಾರಿಗೆ ಬೆಂಕಿ ಹೊತ್ತಿಕೊಂಡು, ಕಾರಿನಲ್ಲಿದ್ದ ಮಹಿಳೆಯೊಬ್ಬರು ಸಜೀವ ದಹನಗೊಂಡರು.
ಡಿಸೆಂಬರ್ 26: ಚಿಟಗುಪ್ಪದಲ್ಲಿ ಸೂರ್ಯಗ್ರಹಣ ಪೂರ್ಣಗೊಳ್ಳುವವರೆಗೂ ದೈಹಿಕ ಅಂಗವಿಕಲ ಮಕ್ಕಳನ್ನು ಕುರಿ ಹಿಕ್ಕೆಯ ತಿಪ್ಪೆಯಲ್ಲಿ ಹೂತಿಟ್ಟು ಪಾಲಕರು ಮೌಢ್ಯ ಮೆರೆದರು
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.