ಕಮಲನಗರ: ’ತಾಲ್ಲೂಕಿನ ಡಿಗ್ಗಿ ಗ್ರಾಮದ ಮಡಿವಾಳೇಶ್ವರ ದೇವಸ್ಥಾನವು 300 ವರ್ಷಕಿಂತ ಹಳೆಯದಾಗಿದೆ. ದೇವಸ್ಥಾನದ ಜತೆಗೆ ಗ್ರಾಮ ಅಭಿವೃದ್ಧಿಗೆ ಕ್ರಮಕೈಗೊಳ್ಳಲಾಗುವುದು’ ಎಂದು ಜಿಲ್ಲಾ ಉಸ್ತುವಾರು ಸಚಿವ ಈಶ್ವರ ಬಿ. ಖಂಡ್ರೆ ತಿಳಿಸಿದರು.
ಕಮಲನಗರ ತಾಲ್ಲೂಕಿನ ಡಿಗ್ಗಿ ಗ್ರಾಮದಲ್ಲಿ ಮಡಿವಾಳೇಶ್ವರ ದೇವಸ್ಥಾನದಲ್ಲಿ ಮಂಗಳವಾರ ಆಯೋಜಿಸಿದ್ದ ರುದ್ರಾಭಿಷೇಕ ಕಾರ್ಯಕ್ರಮದಲ್ಲಿ ಮಾತನಾಡಿದರು.
ಡಿಗ್ಗಿ ಗ್ರಾಮದಲ್ಲಿ ರಸ್ತೆ, ಚರಂಡಿ, ಕುಡಿಯುವ ನೀರು ಒದಗಿಸುವ ಸಲುವಾಗಿ ₹50 ಲಕ್ಷ ಹಾಗೂ ಹೊರಂಡಿ ಗ್ರಾಮದ ರಸ್ತೆಗೆ ₹1 ಕೊಟಿ ನೀಡಲಾಗುವುದು ಎಂದರು.
ಬೀದರ್ ಜಿಲ್ಲೆಯ ಜನತೆ ನಮ್ಮ ತಂದೆ, ನನಗೆ ಮತ್ತು ಮಗ ಸಾಗರ ಖಂಡ್ರೆ ಅವರಿಗೆ ಆಶಿರ್ವಾದ ಮಾಡಿದ್ದೀರಿ. ಹೀಗಾಗಿ ಬೀದರ್ ಜಿಲ್ಲೆಯ ಸರ್ವಾಂಗೀಣ ಅಭಿವೃದ್ಧಿ ಮಾಡಲಾಗುಉದು. ಯಾವುದೇ ಸಮಸ್ಯೆಗಳಿದ್ದರೂ ಪರಿಹಾರ ಮಾಡಲು ಯತ್ನಿಸಲಾಗುವುದು ಎಂದರು.
ಈಶ್ವರ ಖಂಡ್ರೆ ಹಾಗೂ ಪತ್ನಿ ಡಾ.ಗಿತಾ ಈಶ್ವರ ಖಂಡ್ರೆ ದಂಪತಿಗಳಿಗೆ ಡಿಗ್ಗಿ ಬಸ್ ನಿಲ್ದಾಣದಿಂದ ಮಡಿವಾಳೇಶ್ವರ ಮಂದಿರದವರೆಗೆ ಸಾರೋಟಿನಲ್ಲಿ ಬಾಜಾ ಭಜಂತ್ರಿಯೊಂದಿಗೆ ಕರೆತರಲಾಯಿತು.
ಬೀಮ ಸೇನರಾವ ಶಿಂಧೆ, ಪ್ರಕಾಶಟೊಣ್ಣೆ, ಭೀಮರಾವ ಪಾಟಿಲ್, ಲಿಂಗಾನಂದ ಮಹಾಜನ, ಶಿವಾನಂದ ವಡ್ಡೆ, ಸುಭಾಷ ಮಿರ್ಚೆ, ದೇವಿಂದ್ರ ಪಾಟಿಲ್, ಹಣಮಂತ ಚವಾಣ್, ಬಾಬುರಾವ ಸಿರಗಿರೆ, ಆನಂದ ಚವಾಣ್, ರೇಣುಕಾ ಪ್ರವೀಣ ಪಾಟಿಲ್, ಬಾಬುರಾವ ಪಾಟೀಲ್ ಹೊರಂಡಿ, ಸಂತೋಷ ಪಾಟಿಲ್ ಪಾಲ್ಗೊಂಡಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.