ADVERTISEMENT

ಭಾಲ್ಕಿ: ಮಲ್ಲಣ್ಣ ದೇವರ ದರ್ಶನಕ್ಕೆ ಹರಿದು ಬಂದ ಭಕ್ತ ಸಮೂಹ

​ಪ್ರಜಾವಾಣಿ ವಾರ್ತೆ
Published 24 ಡಿಸೆಂಬರ್ 2023, 16:13 IST
Last Updated 24 ಡಿಸೆಂಬರ್ 2023, 16:13 IST
ಭಾಲ್ಕಿ ತಾಲ್ಲೂಕಿನ ಖಾನಾಪುರ ಗ್ರಾಮದಲ್ಲಿ ಮಲ್ಲಣ್ಣ ದೇವರ ದರುಶನಕ್ಕೆ ಹರಿದು ಬಂದ ಭಕ್ತ ಸಾಗರ
ಭಾಲ್ಕಿ ತಾಲ್ಲೂಕಿನ ಖಾನಾಪುರ ಗ್ರಾಮದಲ್ಲಿ ಮಲ್ಲಣ್ಣ ದೇವರ ದರುಶನಕ್ಕೆ ಹರಿದು ಬಂದ ಭಕ್ತ ಸಾಗರ   

ಭಾಲ್ಕಿ: ತಾಲ್ಲೂಕಿನ ಖಾನಾಪುರ ಗ್ರಾಮದಲ್ಲಿ ನಡೆಯುತ್ತಿರುವ ಮಲ್ಲಣ್ಣ ದೇವರ ಜಾತ್ರೆಗೆ ಭಾನುವಾರ ಮಲ್ಲಣ್ಣ ದೇವಸ್ಥಾನಕ್ಕೆ ಭಕ್ತ ಸಮೂಹ ಹರಿದು ಬಂತು.

ನಸುಕಿನ ಜಾವದಿಂದಲೇ ಆಂಧ್ರಪ್ರದೇಶ, ತೆಲಂಗಾಣ, ಮಹಾರಾಷ್ಟ್ರ ಸೇರಿ ರಾಜ್ಯದ ವಿವಿಧ ಜಿಲ್ಲೆಗಳ ಭಕ್ತರು ದೇವಸ್ಥಾನದತ್ತ ಮುಖ ಮಾಡಿದರು. ಮಧ್ಯಾಹ್ನ ಭಕ್ತರ ಸಂಖ್ಯೆ ಹೆಚ್ಚಾಯಿತು. ಮಲ್ಲಣ್ಣ ದೇವರ ದರುಶನಕ್ಕೆ ಮುನ್ನ ದೇವಸ್ಥಾನ ಪಕ್ಕದ ಪುಷ್ಕರಣಿಯಲ್ಲಿ ಸ್ನಾನ, ಮುಖ ಮಾರ್ಜನೆ ಮಾಡಿಕೊಂಡು ಸರತಿ ಸಾಲಿನಲ್ಲಿ ನಿಂತು ಮಲ್ಲಣ್ಣ ದೇವರ ದರುಶನ ಪಡೆದರು.

‘ಏಳು ಕೋಟಿ, ಏಳು ಕೋಟಿಗೊ’ ಘೋಷಣೆ ಕೂಗುತ್ತಾ ದೇವಸ್ಥಾನ ಪ್ರದಕ್ಷಿಣೆ ಹಾಕಿದರು.

ADVERTISEMENT

ಪ್ರತಿ ಭಾನುವಾರ ದನಗಳ ಸಂತೆಯೂ ನಡೆಯುವುದರಿಂದ ದೇವಸ್ಥಾನಕ್ಕೆ ಆಗಮಿಸುವವರ ಸಂಖ್ಯೆ ಅಧಿಕವಾಗಿತ್ತು. ದೇವಸ್ಥಾನ ಅಕ್ಕಪಕ್ಕ ತಲೆಯೆತ್ತಿದ ಹೋಟೆಲ್ ಹಾಗೂ ವಿವಿಧ ಪ್ರಕಾರದ ಅಂಗಡಿಗಳಲ್ಲಿ ಭರ್ಜರಿ ವ್ಯಾಪಾರ–ವಹಿವಾಟು ನಡೆಯಿತು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.