ADVERTISEMENT

ನಿಲಮನಳ್ಳಿ: ಡಿಜಿಟಲ್ ಸಖಿಯರ ಕಾರ್ಯಾಗಾರ

​ಪ್ರಜಾವಾಣಿ ವಾರ್ತೆ
Published 17 ಜೂನ್ 2024, 16:10 IST
Last Updated 17 ಜೂನ್ 2024, 16:10 IST
ಖಟಕಚಿಂಚೋಳಿ ನೀಲಮನಳ್ಳಿ ಗ್ರಾಮದಲ್ಲಿ ಡಿಜಿಟಲ್ ಸಖಿಯರಿಗೆ ಒಂದು ದಿನದ ಕಾರ್ಯಾಗಾರ ನಡೆಯಿತು
ಖಟಕಚಿಂಚೋಳಿ ನೀಲಮನಳ್ಳಿ ಗ್ರಾಮದಲ್ಲಿ ಡಿಜಿಟಲ್ ಸಖಿಯರಿಗೆ ಒಂದು ದಿನದ ಕಾರ್ಯಾಗಾರ ನಡೆಯಿತು   

ಖಟಕಚಿಂಚೋಳಿ: ನೀಲಮನಳ್ಳಿ ಗ್ರಾಮದಲ್ಲಿ ಎಲ್‌ ಅಂಡ್ ಟಿ ಫೈನಾನ್ಸ್-ಎಕ್ಸಿಸ್‌ ಲೈವ್‌ಲೀ ಹೂಡ್ಸ್ ವತಿಯಿಂದ ಸೋಮವಾರ ಡಿಜಿಟಲ್ ಸಖಿಯರಿಗೆ ಒಂದು ದಿನದ ಕಾರ್ಯಗಾರ ನಡೆಯಿತು.

ಸಂಪನ್ಮೂಲ ವ್ಯಕ್ತಿ ರೇವಣಸಿದ್ದ ಜಾಡರ್ ಮಾತನಾಡಿ, ’ಪ್ರಸ್ತುತ ದಿನಗಳಲ್ಲಿ ಮಹಿಳೆಯರು ಎಲ್ಲ ರಂಗಗಳಲ್ಲೂ ತಮ್ಮನ್ನು ತಾವು ತೊಡಗಿಸಿಕೊಂಡು ತಮ್ಮದೇ ಛಾಪು ಮೂಡಿಸುತ್ತಿದ್ದಾರೆ. ಹೀಗೆ ಸಮಾಜದ ಸರ್ವಾಂಗೀಣ ಅಭಿವೃದ್ಧಿಯಲ್ಲಿ ಮಹಿಳೆಯರ ಪಾತ್ರ ಅತ್ಯಂತ ಮಹತ್ವದ್ದಾಗಿದೆ' ಎಂದು ತಿಳಿಸಿದರು.

’ಡಿಜಿಟಲ್ ತಂತ್ರಜ್ಞಾನ ಇಂದು ಎಲ್ಲೆಡೆ ಬಳಕೆಯಲ್ಲಿದೆ. ಗ್ರಾಮೀಣ ಭಾಗದ ಮಹಿಳೆಯರಿಗೆ ಡಿಜಿಟಲ್ ತಂತ್ರಜ್ಞಾನದ ಬಗ್ಗೆ ತಿಳಿಹೇಳುವಲ್ಲಿ ಡಿಜಿಟಲ್ ಸಖಿಯರು ಉತ್ತಮ ಪಾತ್ರ ನಿರ್ವಹಿಸುತ್ತಿದ್ದಾರೆ' ಎಂದು ತಿಳಿಸಿದರು.

ADVERTISEMENT

ಡಿಜಿಟಲ್ ಸಖಿಯರ ತಾಲ್ಲೂಕು ಸಂಯೋಜಕ ಶ್ರೀಧರ ಚಿನ್ಮಯಿ ಮಾತನಾಡಿ,' ಡಿಜಿಟಲ್ ಸಖಿಯರು ಗ್ರಾಮದ ಪ್ರತಿ ಮನೆ ಮನೆಗೆ ತೆರಳಿ ಡಿಜಿಟಲ್ ಸಾಕ್ಷರತೆ ಸೇರಿದಂತೆ ಮಹಿಳಾ ಸ್ವಾವಲಂಬಿ ಬದುಕು ಕಟ್ಟಿಕೊಳ್ಳುವಲ್ಲಿ ಜೀವನೋಪಾಯ ಚಟುವಟಿಕೆಗಳ ಕುರಿತು ಗ್ರಾಮದ ಮಹಿಳೆಯರಲ್ಲಿ ಜಾಗೃತಿ ಮೂಡಿಸುವರು ' ಎಂದು ಹೇಳಿದರು.

ಮುಖಂಡ ಸಂತೋಷ ಸೆಡೋಳೆ ಮಾತನಾಡಿ, ’ಡಿಜಿಟಲ್ ಸಖಿ ಯೋಜನೆ ಪರಿಣಾಮಕಾರಿಯಾಗಿ ನಡೆಯಲು ಎಲ್ಲ ರೀತಿಯ ಸಹಕಾರ ನೀಡುವುದಾಗಿ ಭರವಸೆ ನೀಡಿದರು.

ಪ್ರಮುಖರಾದ ದಯಾನಂದ ಬೀರಗೊಂಡ, ವೀರಶೆಟ್ಟಿ ದೇಶಟ್ಟಿ, ಪಂಚಾಯಿತಿ ಸದಸ್ಯರಾದ ಧನ್ನೂರೆ, ಶರಣಪ್ಪ ಪಾಟೀಲ, ಬಾಲಾಜಿ ನರಸಗೊಂಡ, ನೀಲಕಂಠ ಪಾಟೀಲ, ಗುಣವಂತರಾವ್ ಪಾಟೀಲ, ನಿಜಲಿಂಗಯ್ಯ ಮಠಪತಿ, ಡಿಜಿಟಲ್ ಸಖಿಯರಾದ ಜಗದೇವಿ ರುದ್ರಾ, ಕನ್ಯಾಕುಮಾರಿ ತರನಳ್ಳಿ, ಶಾಂತಮ್ಮ ಮಠಪತಿ, ವಚನಸುಧಾ ಭಂಡೆ, ಝರೆಮ್ಮ ಸೇರಿದಂತೆ ಗ್ರಾಮದ ಆಶಾ ಹಾಗೂ ಅಂಗನವಾಡಿ ಕಾರ್ಯಕರ್ತೆಯರು, ಸ್ವಸಹಾಯ ಸಂಘಗಳ ಮಹಿಳೆಯರು ಭಾಗವಹಿಸಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.