ADVERTISEMENT

ಜೆಇಇ ಮೇನ್ಸ್| ಭಾಲ್ಕಿಯ ನಾಗರಾಜಗೆ ಶೇ 99.11 ಅಂಕ

ಜೆಇಇ ಮೇನ್ಸ್‌ನಲ್ಲಿ ಗುರುಕುಲ ವಿದ್ಯಾರ್ಥಿಗಳ ಸಾಧನೆ

​ಪ್ರಜಾವಾಣಿ ವಾರ್ತೆ
Published 26 ಮಾರ್ಚ್ 2021, 3:05 IST
Last Updated 26 ಮಾರ್ಚ್ 2021, 3:05 IST
ನಾಗರಾಜ
ನಾಗರಾಜ   

ಭಾಲ್ಕಿ: ತಾಲ್ಲೂಕಿನ ಕರಡ್ಯಾಳದ ಚನ್ನಬಸವೇಶ್ವರ ಗುರುಕುಲ ವಿಜ್ಞಾನ ಕಾಲೇಜಿನ ವಿದ್ಯಾರ್ಥಿಗಳು ಜೆಇಇ ಮೇನ್ಸ್ ಪರೀಕ್ಷೆಯ ಎರಡನೇ ಹಂತದಲ್ಲಿ ಅದ್ವೀತಿಯ ಸಾಧನೆಗೈದಿದ್ದು, ರಾಷ್ಟ್ರಮಟ್ಟದ ಎನ್‍ಐಟಿ, ಐಐಟಿ ಕಾಲೇಜುಗಳಲ್ಲಿ ಪ್ರವೇಶ ಪಡೆಯಲು ಅರ್ಹತೆ ಪಡೆದಿದ್ದಾರೆ.

ವಿದ್ಯಾರ್ಥಿ ನಾಗರಾಜ ಶೇ 99.11ರಷ್ಟು ಅಂಕ ಪಡೆದು ಕಲ್ಯಾಣ ಕರ್ನಾಟಕ ವಿಭಾಗಕ್ಕೆ ಪ್ರಥಮ ಸ್ಥಾನ ಪಡೆದಿದ್ದಾನೆ ಎಂದು ಪ್ರಾಚಾಯ ಬಸವರಾಜ ಮೊಳಕೀರೆ ತಿಳಿಸಿದ್ದಾರೆ.

ಸಾಧಕ ವಿದ್ಯಾರ್ಥಿಗಳ ವಿವರ: ಚೇತನ ಶೇ 98.34, ಕೇದಾರ ಶೇ 97.66, ಶ್ರೀಧರ ಶೇ 97.65, ಪ್ರೇಮಕುಮಾರ ಶೇ 97.51, ರೋನಕ್ ಶೇ 96.76, ಮಂಜುನಾಥ ಶೇ 96.28, ತಿಲಕ್ ಶೇ 95.72, ವಿಕಿಲೇಶ ಶೇ 94.89, ಭೀಮಾಶಂಕರ ಶೇ 94.36, ಅಂಬಿಕಾ ಶೇ 94.22, ಚಂದ್ರಕಾಂತ ಶೇ 94.12, ಪೂರಂ ವಂಶಿ ಶೇ 92.06, ವಿನೋದ ಸಜ್ಜನ್ ಶೇ 91.84, ಅಹ್ಮದ್ ಮುಸಾಫ್ ಶೇ 91.51, ಅಭಿಷೇಕ ಶೇ 90.95, ಶಶಾಂಕ ಶೇ 90.07 ಸೇರಿದಂತೆ ಒಟ್ಟು 110 ಕ್ಕಿಂತ ಹೆಚ್ಚು ವಿದ್ಯಾರ್ಥಿಗಳು ಎನ್‍ಐಟಿ, ಐಐಟಿ ಕಾಲೇಜುಗಳಲ್ಲಿ ಪ್ರವೇಶ ಪಡೆಯಲು ಅರ್ಹತೆ ಪಡೆದಿದ್ದಾರೆ.

ADVERTISEMENT

ವಿದ್ಯಾರ್ಥಿಗಳ ಸಾಧನೆಗೆ ಸಂಸ್ಥೆಯ ಸಂಸ್ಥಾಪಕ ಅಧ್ಯಕ್ಷರಾದ ಡಾ.ಬಸವಲಿಂಗ ಪಟ್ಟದ್ದೇವರು, ಪೀಠಾಧಿಪತಿ ಗುರುಬಸವ ಪಟ್ಟದ್ದೇವರು, ಹಿರೇಮಠದ ಸಂಸ್ಥಾನದ ಕಾರ್ಯದರ್ಶಿ ಮಹಾಲಿಂಗ ಸ್ವಾಮೀಜಿ, ಆಡಳಿತಾಧಿಕಾರಿ ಮೋಹನರೆಡ್ಡಿ, ಪ್ರಾಚಾರ್ಯ ಬಸವರಾಜ ಮೊಳಕೀರೆ ಹಾಗೂ ಸಿಬ್ಬಂದಿ ವರ್ಗ ಹರ್ಷ ವ್ಯಕ್ತಪಡಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.