ಬೀದರ್: ರಾಷ್ಟ್ರೀಯ ಕೈಬರಹ ಅಕಾಡೆಮಿ ವತಿಯಿಂದ ಹೈದರಾಬಾದ್‍ನಲ್ಲಿ ನಡೆದ ಡಾ. ಯಂಡಮೂರಿ ವೀರೇಂದ್ರನಾಥ ಕೈಬರಹ ಸ್ಪರ್ಧೆಯಲ್ಲಿ ಇಲ್ಲಿಯ ಜ್ಞಾನಸುಧಾ ವಿದ್ಯಾಲಯದ ವಿದ್ಯಾರ್ಥಿಗಳು ಸಾಧನೆಗೈದಿದ್ದಾರೆ.
ರಾಷ್ಟ್ರಮಟ್ಟದ ಸ್ಪರ್ಧೆಯಲ್ಲಿ ವಿವಿಧ ರಾಜ್ಯಗಳ 168 ಕ್ಕೂ ಹೆಚ್ಚು ಶಾಲೆಗಳ 13,500 ವಿದ್ಯಾರ್ಥಿಗಳು ಭಾಗವಹಿಸಿದ್ದರು. 47 ವಿದ್ಯಾರ್ಥಿಗಳು ಬಹುಮಾನಕ್ಕೆ ಭಾಜನರಾಗಿದ್ದರು. ಇವರಲ್ಲಿ ಜ್ಞಾನಸುಧಾ ವಿದ್ಯಾಲಯದ 12 ವಿದ್ಯಾರ್ಥಿಗಳು ಬಹುಮಾನ ಗಿಟ್ಟಿಸಿದ್ದಾರೆ.
ಸ್ಪರ್ಧೆ ವಿಜೇತರಲ್ಲಿ ವಿದ್ಯಾಲಯದ 4ನೇ ತರಗತಿಯ ಕೆನೆಥ್ ಪೌಲ್, ಐಮಾಂಶು ನಂದಾ, ಆರೋನ್, ಸುದೀಕ್ಷಾ, 5ನೇ ತರಗತಿಯ ತನ್ವಿ ಬಿರಾದಾರ, ಸಾಕ್ಷಿ ಪ್ರಹ್ಲಾದ್, 7ನೇ ತರಗತಿಯ ಶ್ರೇಯಾ, ಶ್ರುತಿ, ಮಧುಶ್ರೀ, ಶಿವಪ್ರಸಾದ ಮತ್ತು 8ನೇ ತರಗತಿಯ ಪ್ರತಿಷ್ಠಾ ಹಾಗೂ ಶೀತಲ್ ಸೇರಿದ್ದಾರೆ ಎಂದು ಜ್ಞಾನಸುಧಾ ಶಿಕ್ಷಣ ಸಂಸ್ಥೆಯ ಅಧ್ಯಕ್ಷೆ ಪೂರ್ಣಿಮಾ ಜಿ. ಹಾಗೂ ನಿರ್ದೇಶಕ ಮುನೇಶ್ವರ ಲಾಖಾ ತಿಳಿಸಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.