ADVERTISEMENT

ಕಮಲನಗರ: ಜ.2ರಿಂದ ಅಖಂಡ ಹರಿನಾಮ ಸಪ್ತಾಹ

​ಪ್ರಜಾವಾಣಿ ವಾರ್ತೆ
Published 31 ಡಿಸೆಂಬರ್ 2023, 15:19 IST
Last Updated 31 ಡಿಸೆಂಬರ್ 2023, 15:19 IST
ಪೋಟೋಕ್ಯಾಪ್ಷನ್: ದೀಪಕ ಪಾಟೀಲ ಚಾಂದೋರಿ ಗ್ರಾ.ಪಂ.ಮಾಜಿ ಸದಸ್ಯರು.
ಪೋಟೋಕ್ಯಾಪ್ಷನ್: ದೀಪಕ ಪಾಟೀಲ ಚಾಂದೋರಿ ಗ್ರಾ.ಪಂ.ಮಾಜಿ ಸದಸ್ಯರು.   

ಕಮಲನಗರ: ತಾಲ್ಲೂಕಿನ ಚಾಂದೋರಿ ಗ್ರಾಮದ ಮಹಾದೇವ ಮಂದಿರದಲ್ಲಿ ಜ.2ರಿಂದ 9 ರವರೆಗೆ ಅಖಂಡ ಹರಿನಾಮ ಸಪ್ತಾಹ, ಭಾಗವತ ಕಥಾ ಹಾಗೂ ಗ್ರಂಥರಾಜ ಜ್ಞಾನೇಶ್ವರಿ ಪಾರಾಯಣ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ.

ಸಪ್ತಾಹ ಪ್ರಯುಕ್ತ ಪ್ರತಿ ದಿನ ನಸುಕಿನ ಜಾವ 4ರಿಂದ 5 ರವರೆಗೆ ಕಾಕಡ ಆರತಿ, ಬೆಳಿಗ್ಗೆ 7ರಿಂದ 10 ರವರೆಗೆ ಜ್ಞಾನೇಶ್ವರಿ ಪಾರಾಯಣ, ಮಧ್ಯಾಹ್ನ 12 ರಿಂದ 2 ರವರೆಗೆ ಗಾಥಾ ಭಜನೆ, ಮಧ್ಯಾಹ್ನ 3 ರಿಂದ 5 ರವರೆಗೆ ಭಾಗವತ ಕಥಾ, ಸಂಜೆ 6 ರಿಂದ 7 ರವರೆಗೆ ಹರಿ ಪಾಠ, ರಾತ್ರಿ 9 ರಿಂದ 11 ರವರೆಗೆ ಹರಿ ಕೀರ್ತನೆ ಹಾಗೂ ರಾತ್ರಿ 12 ರಿಂದ ನಸುಕಿನ ಜಾವ 4 ರವರೆಗೆ ಹರಿ ಜಾಗರಣೆ ನಡೆಯಲಿದೆ ಎಂದು ಚಾಂದೋರಿ ಗ್ರಾ.ಪಂ ಮಾಜಿ ಅಧ್ಯಕ್ಷ ದೀಪಕ ಪಾಟೀಲ ಚಾಂದೋರಿ ತಿಳಿಸಿದ್ದಾರೆ.

ಪ್ರಸಿದ್ಧ ಕೀರ್ತನೆಕಾರರಾದ ಗಹನಿನಾಥ ಮಹಾರಾಜ ಔಸೇಕರ್, ಭಾಗವತ ಮಹಾರಾಜ ಶಿರೋಳಕರ, ಗೋರಕಗಿರಿ ಮಹಾರಾಜ ಘೋದಿಹಿಪ್ಪರ್ಗಾ, ಸಂತೋಷ ಮಹಾರಾಜ ಭೀಡ್, ರಾಮಾಯಣಾಚಾರ್ಯ ರಾಮರಾಜ ಮಹಾರಾಜ ಢೋಕ, ನಾಮದೇವ ಮಹಾರಾಜ ಪಂಢರಪುರ, ಭಾಗವತ ಮಹಾರಾಜ ಹಂಡೆ, ಏಕನಾಥ ಮಹಾರಾಜ ಹಂಡೆ ಪಾಲ್ಗೊಳ್ಳಲಿದ್ದಾರೆ. ನಾಮದೇವ ಮಹಾರಾಜ ಶಾಸ್ತ್ರಿ ಭಾಗವತ ಕಥಾ ನಡೆಸಿಕೊಡಲಿದ್ದಾರೆ ಎಂದು ಹೇಳಿದ್ದಾರೆ.

ADVERTISEMENT

ಜ. 9ರಂದು ಮಧ್ಯಾಹ್ನ ಮಹಾ ಪ್ರಸಾದ ವ್ಯವಸ್ಥೆ ಇರಲಿದೆ. ಗ್ರಾಮ ಹಾಗೂ ಸುತ್ತಮುತ್ತಲಿನ ಗ್ರಾಮಗಳ ಜನರು ಕಾರ್ಯಕ್ರಮದಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಬೇಕು ಎಂದು ಮನವಿ ಮಾಡಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.