ADVERTISEMENT

ಅಕ್ಕಮಹಾದೇವಿ ಜಯಂತಿ ಆಚರಣೆ ಇಂದು

​ಪ್ರಜಾವಾಣಿ ವಾರ್ತೆ
Published 17 ಏಪ್ರಿಲ್ 2022, 4:11 IST
Last Updated 17 ಏಪ್ರಿಲ್ 2022, 4:11 IST

ಗೋರ್ಟಾ( ಹುಲಸೂರ): ಗೋರ್ಟಾ(ಬಿ) ಗ್ರಾಮದ ಲಿಂಗಾಯತ ಮಠದಲ್ಲಿ ಭಾನುವಾರ (ಏ.17) ನಡೆಯುವ ಶರಣ ಸಂಗಮ ಕಾರ್ಯಕ್ರಮದಲ್ಲಿ ಅಕ್ಕಮಹಾದೇವಿ ಜಯಂತಿ ಆಚರಿಸಲಾಗುವುದು ಎಂದು ಮಠದ ಪ್ರಭುದೇವರು ತಿಳಿಸಿದ್ದಾರೆ.

ಸಂಜೆ 6ಕ್ಕೆ ನಡೆಯುವ ಕಾರ್ಯಕ್ರಮದ ಸಾನಿಧ್ಯವನ್ನು ಬೀದರ್‌ನ ಬಸವಗಿರಿ ಲಿಂಗಾಯತ ಮಠದ ಅನ್ನಪೂರ್ಣತಾಯಿ ವಹಿಸುವರು. ಧನ್ನೂರ ಗ್ರಾಮದ ಪ್ರಾಥಮಿಕ ಆರೋಗ್ಯ ಕೇಂದ್ರದ ವೈದ್ಯಾಧಿಕಾರಿ ದೇವಕಿ ನಾಗೂರೆ ಅವರು ಉದ್ಘಾಟಿಸುವರು. ಅತಿಥಿಗಳಾಗಿ ತಹಶೀಲ್ದಾರ್‌ ಶಿವಾನಂದ ಮೇತ್ರೆ, ಕಾರ್ಯನಿರ್ವಾಹಕ ಅಧಿಕಾರಿ ಮಹಾದೇವ ಜಮ್ಮು,ಪ್ರಗತಿಪರ ರೈತ ಶರಣಗೌಡ ಪಾಟೀಲ, ಗಂಗೋತ್ರಿ ಅಕ್ಕನಾಗಮನ ಬಳಗದ ಅಧ್ಯಕ್ಷೆ ಸುಮಿತ್ರ ಆರ್‌.ಡಾವಣಗಾವೆ, ಗ್ರಾ.ಪಂ ಅಧ್ಯಕ್ಷೆ ಸರಸ್ವತಿ ಮಹಾದೇವ ಪಟ್ನೆ, ಉಪಾಧ್ಯಕ್ಷೆ ಸೀತಾ ಸಂಜೀವಕುಮಾರ ಕೈಕಡಿ, ಉದ್ಯಮಿ ಕುಪೇಂದ್ರ ಕಾದೆಪುರೆ, ಆಶಾರಾಣಿ ಮಹಾದೇವ ಮಾಶೆಟ್ಟೆಸೇರಿದಂತೆ ಹಲವರುಭಾಗವಹಿಸುವರು.

ಶಿವಕುಮಾರ ಸಿದ್ರಾಮಪ್ಪ ಮಾಶೆಟ್ಟಿ ಅವರು ದಾಸೋಹ ನೆರವೇರಿಸಲಿದ್ದು, ಅಶ್ವಿನಿ ರಾಜಕುಮಾರ ಹಿರೇಮಠ ಅವರುಸಂಗೀತ ಕಾರ್ಯಕ್ರಮ ನಡೆಸಿಕೊಡುವರು ಎಂದು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ADVERTISEMENT

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.