ADVERTISEMENT

₹2 ಕೋಟಿ ವೆಚ್ಚದಲ್ಲಿ ಅಕ್ಕಮಹಾದೇವಿ ಚಲನಚಿತ್ರ: ನಿರ್ಮಾಪಕ ಬಿ.ಜೆ.ವಿಷ್ಣುಕಾಂತ

​ಪ್ರಜಾವಾಣಿ ವಾರ್ತೆ
Published 6 ಫೆಬ್ರುವರಿ 2024, 15:18 IST
Last Updated 6 ಫೆಬ್ರುವರಿ 2024, 15:18 IST
ಬಿ.ಜೆ. ವಿಷ್ಣುಕಾಂತ
ಬಿ.ಜೆ. ವಿಷ್ಣುಕಾಂತ   

ಬೀದರ್‌: ‘₹2 ಕೋಟಿ ವೆಚ್ಚದಲ್ಲಿ ಹನ್ನೆರಡನೇ ಶತಮಾನದ ಶರಣೆ ವೈರಾಗ್ಯನಿಧಿ ಅಕ್ಕಮಹಾದೇವಿ ಜೀವನ ಆಧರಿಸಿದ ಚಲನಚಿತ್ರ ಮಾಡಲು ನಿರ್ಧರಿಸಲಾಗಿದೆ’ ಎಂದು ನಟ, ನಿರ್ಮಾಪಕ ಬಿ.ಜೆ.ವಿಷ್ಣುಕಾಂತ ತಿಳಿಸಿದರು.

ನನ್ನ ಹುಟ್ಟೂರು ಭಾಲ್ಕಿ ತಾಲ್ಲೂಕಿನ ಧನ್ನೂರ್‌ (ಎಚ್‌) ಗ್ರಾಮದಲ್ಲಿ ಬುಧವಾರ (ಫೆ.7) ಸಂಜೆ 7.30ಕ್ಕೆ ಚಲನಚಿತ್ರದ ಚಿತ್ರೀಕರಣಕ್ಕೆ ಚಾಲನೆ ನೀಡಲಾಗುವುದು. ಈ ಚಿತ್ರವನ್ನು ಲಾಭಕ್ಕಾಗಿ ಮಾಡುತ್ತಿಲ್ಲ. ಬದಲಾಗಿ ಮಹಿಳೆಯರಲ್ಲಿ ಧಾರ್ಮಿಕ ಸ್ವಾತಂತ್ರ್ಯ ಜಾಗೃತಗೊಳಿಸುವುದು ಮುಖ್ಯ ಉದ್ದೇಶ ಎಂದು ನಗರದಲ್ಲಿ ಪತ್ರಿಕಾಗೋಷ್ಠಿಯಲ್ಲಿ ಮಾಹಿತಿ ಹಂಚಿಕೊಂಡರು.

ಒಂದು ತಿಂಗಳಿಂದ ಗ್ರಾಮದಲ್ಲಿ ಉಪ್ಪಿನ ಬೆಟಗೇರಿ ಸ್ವಾಮೀಜಿ ಪ್ರವಚನ ಕಾರ್ಯಕ್ರಮ ನಡೆಸಿಕೊಡುತ್ತಿದ್ದಾರೆ. ಅವರಿಂದಲೇ ಚಿತ್ರೀಕರಣಕ್ಕೆ ಚಾಲನೆ ಕೊಡಿಸಲಾಗುವುದು. ಶ್ರೀಶೈಲದ ಮಾತೆ ಕರುಣಾದೇವಿ ಅಕ್ಕ, ರಾಜಶೇಖರ ಶಿವಾಚಾರ್ಯರು ಉಪಸ್ಥಿತರಿರುವರು ಎಂದು ತಿಳಿಸಿದರು.

ADVERTISEMENT

ನಾನು ಈ ಚಿತ್ರದ ನಿರ್ಮಾಪಕನೂ ಹೌದು, ನಟನೂ ಹೌದು. ಸುಲಕ್ಷಾ ಕೈರಾ ಎಂಬುವರು ಅಕ್ಕಮಹಾದೇವಿ ಪಾತ್ರದಲ್ಲಿ ಕಾಣಿಸಿಕೊಳ್ಳುವರು. ಅಕ್ಕನ ಜನ್ಮಸ್ಥಳ ಉಡುತಡಿ, ಅವರು ಓಡಾಡಿದ ಶಿವಮೊಗ್ಗ, ಬಸವಕಲ್ಯಾಣದ ಅನುಭವ ಮಂಟಪ, ಶ್ರೀಶೈಲದ ಕದಳಿ ವನ ಸೇರಿದಂತೆ ಹಲವೆಡೆ ಚಿತ್ರೀಕರಣ ನಡೆಸಲಾಗುವುದು. ಕೆಲವು ಸನ್ನಿವೇಶಗಳನ್ನು ಹಿಮಾಲಯದಲ್ಲಿ ಚಿತ್ರೀಕರಣ ನಡೆಸುವ ಯೋಜನೆ ಇದೆ ಎಂದು ವಿವರಿಸಿದರು.

‘ಗಂಗಾ ಕಾವೇರಿ’, ‘ಕನ್ನಡದ ಕುವರ’, ‘ಡಾ.ಬಿ.ಆರ್ ಅಂಬೇಡ್ಕರ್’ ಅವರ ಜೀವನಾಧಾರಿತ ಚಲನಚಿತ್ರಗಳಿಗೆ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದೆ. ಡಾ.ಬಿ.ಆರ್ ಅಂಬೇಡ್ಕರ್ ಕುರಿತ ಚಿತ್ರವಂತೂ ಬಾಕ್ಸ್‌ ಆಫೀಸ್‌ನಲ್ಲಿ ಚೆನ್ನಾಗಿ ನಡೆದಿತ್ತು. ಶತಾಯುಷಿ ಚನ್ನಬಸವ ಪಟ್ಟದ್ದೇವರ ಜೀವನಾಧಾರಿತ ‘ಕನ್ನಡದ ಕುವರ’ ಚಿತ್ರದಲ್ಲಿ ಸ್ಥಳೀಯ ಕಲಾವಿದರಿಗೆ ಹೆಚ್ಚಿನ ಆದ್ಯತೆ ನೀಡಲಾಗಿತ್ತು. ಅಕ್ಕನ ಚಿತ್ರದಲ್ಲೂ ಸ್ಥಳೀಯ ಕಲಾವಿದರಿಗೆ ಪ್ರಾಶಸ್ತ್ಯ ನೀಡಲಾಗುವುದು ಎಂದರು.

ಇಂದಿನಿಂದ ಚಿತ್ರೀಕರಣ ಶುರು ಅಕ್ಕ ಮಹಾದೇವಿ ನಡೆದಾಡಿದ ಸ್ಥಳಗಳಲ್ಲಿ ಚಿತ್ರೀಕರಣ ಮಹಿಳಾ ಜಾಗೃತಿಗೆ ಸಿನಿಮಾ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.