ADVERTISEMENT

ಔರಾದ್ | ಅಂಗನವಾಡಿ ನೇಮಕ: ವಂಚನೆ ತಡೆಯಲು ಆಗ್ರಹ

​ಪ್ರಜಾವಾಣಿ ವಾರ್ತೆ
Published 6 ಜುಲೈ 2024, 6:01 IST
Last Updated 6 ಜುಲೈ 2024, 6:01 IST

ಔರಾದ್: ‘ತಾಲ್ಲೂಕಿನಲ್ಲಿ ಅಂಗನವಾಡಿ ಕಾರ್ಯಕರ್ತೆ ಹಾಗೂ ಸಹಾಯಕಿಯರ ನೇಮಕದಲ್ಲಿ ಆಗಿರುವ ವಂಚನೆ ಸರಿಪಡಿಸಬೇಕು’ ಎಂದು ದಲಿತ ಸಂಘರ್ಷ ಸಮಿತಿ ಆಗ್ರಹಿಸಿದೆ.

ಸಮಿತಿಯ ಜಿಲ್ಲಾ ಸಂಚಾಲಕ ಧನರಾಜ ಮುಸ್ತಾಪುರ, ತಾಲ್ಲೂಕು ಸಂಚಾಲಕ ಸಂಜೀವಕುಮಾರ ಲಾಧಾ, ಧನರಾಜ ಶರ್ಮಾ ಅವರು ಗುರುವಾರ ತಹಶೀಲ್ದಾರ್ ಮೂಲಕ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಸಚಿವರಿಗೆ ಮನವಿಪತ್ರ ಸಲ್ಲಿಸಿದರು.

‘ಅಂಗನವಾಡಿ ಕಾರ್ಯಕರ್ತೆಯರು ಹಾಗೂ ಸಹಾಯಕಿಯರ ನೇಮಕಾತಿ ಮಾಡಿಕೊಳ್ಳಲು ಜನವರಿ 2024ರಲ್ಲಿ ಆನ್‍ಲೈನ್ ಅರ್ಜಿ ಕರೆದಿದ್ದಾರೆ. ಈ ನೇಮಕಾತಿಯಲ್ಲಿ ತಾಂಡಾಗಳಲ್ಲಿರುವ ಅಂಗನವಾಡಿಗಳಿಗೆ ಮಾತ್ರ ಅರ್ಜಿ ಕರೆದಿದ್ದಾರೆ. ಇದರಿಂದ ಪರಿಶಿಷ್ಟ ಜಾತಿಯ ಬಲ ಹಾಗೂ ಎಡ ಸಮುದಾಯಗಳಗೆ ವಂಚನೆಯಾಗಿದೆ. ಹೀಗಾಗಿ ಈ ನೇಮಕಾತಿ ರದ್ದು ಮಾಡಬೇಕು. ಹೊಸದಾಗಿ ಆದೇಶ ಹೊರಡಿಸಿ ಪರಿಶಿಷ್ಟ ಜಾತಿಯಲ್ಲಿ ಬರುವ ಎಲ್ಲ ಸಮುದಾಯ ಜನರಿಗೆ ನ್ಯಾಯ ಸಿಗುವ ನಿಟ್ಟಿನಲ್ಲಿ ಕ್ರಮ ಕೈಗೊಳ್ಳಬೇಕು’ ಎಂದು ಆಗ್ರಹಿಸಿದ್ದಾರೆ.

ADVERTISEMENT

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.