ADVERTISEMENT

ಅನುಭವ ಮಂಟಪದ ಸತ್ಯಶೋಧನೆ ಆಗಲಿ: ರಾಜೇಶ್ವರ ಶಿವಾಚಾರ್ಯ

​ಪ್ರಜಾವಾಣಿ ವಾರ್ತೆ
Published 1 ಜೂನ್ 2022, 4:52 IST
Last Updated 1 ಜೂನ್ 2022, 4:52 IST
ರಾಜೇಶ್ವರ ಶಿವಾಚಾರ್ಯ
ರಾಜೇಶ್ವರ ಶಿವಾಚಾರ್ಯ   

ಬೀದರ್‌: ‘ಬಸವಕಲ್ಯಾಣದಲ್ಲಿ ರಾಜ್ಯ ಸರ್ಕಾರ ₹ 615 ಕೋಟಿ ವೆಚ್ಚದಲ್ಲಿ ನೂತನ ಅನುಭವ ಮಂಟಪ ನಿರ್ಮಿಸುವುದಕ್ಕೆ ನಮ್ಮ ವಿರೋಧವಿಲ್ಲ. ಆದರೆ, ಪುರಾತತ್ವ ಇಲಾಖೆಯಿಂದ ಮೂಲ ಅನುಭವ ಮಂಟಪದ ಸತ್ಯಶೋಧನೆ ನಡೆಸಬೇಕು’ ಎಂದು ಅನುಭವ ಮಂಟಪ ಹೋರಾಟ ಸಮಿತಿ ಅಧ್ಯಕ್ಷ ತಡೋಳದ ರಾಜೇಶ್ವರ ಶಿವಾಚಾರ್ಯರು ಆಗ್ರಹಿಸಿದರು.

‘ಚಾಲುಕ್ಯರ ಕಾಲದಲ್ಲಿ ನಿರ್ಮಿಸಿದ ಮಂಟಪದ ಸ್ಥಳದಲ್ಲೇ ಅನುಭವ ಮಂಟಪ ಇತ್ತು. ನಂತರ ಮುಸ್ಲಿಮರ ಆಡಳಿತಕ್ಕೆ ಒಳಪಟ್ಟು ಪೀರ್ ದರ್ಗಾ ನವಾಬರ ಅಧೀನಕ್ಕೆ ಹೋಗಿದೆ. ಅನುಭವ ಮಂಟಪ ಇದ್ದ ಸ್ಥಳದ ಸತ್ಯಾಸತ್ಯತೆ ಅರಿಯಲು ಪುರಾತತ್ವ ಇಲಾಖೆ ತಜ್ಞರಿಂದ ಸಮೀಕ್ಷೆ ನಡೆಸಬೇಕು’ ಎಂದು ನಗರದಲ್ಲಿ ಮಂಗಳವಾರ ಪತ್ರಿಕಾಗೋಷ್ಠಿಯಲ್ಲಿ ಒತ್ತಾಯಿಸಿದರು.

ಪೀರ್ ದರ್ಗಾದಲ್ಲಿ ನಂದಿ ಮೂರ್ತಿ ಮತ್ತಿತರ ಕುರುಹುಗಳು ಇದ್ದವು. ಮಾತೆ ಮಹಾದೇವಿ ಬದುಕಿದ್ದ ಅವಧಿಯಲ್ಲಿ ಅನೇಕರು ಅವುಗಳನ್ನು ನೋಡಿದ್ದಾರೆ. ತಜ್ಞರಿಂದ ಪರಿಶೀಲನೆ ನಡೆಸಿದ ನಂತರ ನಿಜ ಅಂಶ ಬಯಲಿಗೆ ಬರಲಿದೆ ಎಂದು ವೀರಶೈವ ಲಿಂಗಾಯತ ಸಂಘಟನಾ ವೇದಿಕೆ ರಾಷ್ಟ್ರೀಯ ಅಧ್ಯಕ್ಷ ಪ್ರದೀಪ ಕಂಕಣವಾಡಿ, ಬಸವಕಲ್ಯಾಣ ತ್ರಿಪುರಾಂತ ಗವಿಮಠದ ಘನಲಿಂಗ ರುದ್ರಮುನಿ ಶಿವಾಚಾರ್ಯರು, ಭಾಲ್ಕಿ ಬಸವ ಕೇಂದ್ರದ ಅಧ್ಯಕ್ಷ ಲಿಂಗಾಯತ ಹೋರಾಟಗಾರ ಸಮಿತಿಯ ಕಿರಣ ಖಂಡ್ರೆ, ಶಿವರಾಜ ಪಾಟೀಲ ಅತಿವಾಳ ಹೇಳಿದರು.

ADVERTISEMENT

ಚಿದಾನಂದ ಶಿವಾಚಾರ್ಯ, ಶಾಂತವೀರ ಶಿವಾಚಾರ್ಯ, ಶ್ರೀಪತಿ ಪಂಡತಾರಾಧ್ಯ ಶಿವಾಚಾರ್ಯ, ಚನ್ನಮಲ್ಲ ಸ್ವಾಮಿಜಿ ಹುಡಗಿ, ಈಶ್ವರಾನಂದ ಸ್ವಾಮಿಜಿ, ಚಂದ್ರಶೇಖರ ಶಿವಾಚಾರ್ಯ, ಓಂಪ್ರಕಾಶ ರೋಟ್ಟೆ ಇದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.