ಗುಂಡು ಅತಿವಾಳ
ಹುಮನಾಬಾದ್: ಸುತ್ತಲಿನ ಗುಡ್ಡಗಾಡು ಮತ್ತು ನಿಸರ್ಗದ ಹಸಿರಿನ ಸೊಬಗಿನಿಂದ ಕೂಡಿರುವ ತಾಲ್ಲೂಕಿನ ಹಳ್ಳಿಖೇಡ್(ಕೆ) ಗ್ರಾಮವು ತನ್ನದೇ ವಿಶೇಷತೆ ಹೊಂದಿದೆ.
ಗಡಿಭಾಗದಲ್ಲಿ ಬೀದರ್ ಕಲಬುರಗಿ ರಸ್ತೆಗೆ ಹೊಂದಿಕೊಂಡಿರುವ ಹಳ್ಳಿಖೇಡ್ ಕೆ. ಗ್ರಾಮದಲ್ಲಿ ಬೃಹತ್ ಕೈಲಾಸನಾಥೇಶ್ವರ(ಶಿವನ) ಮೂರ್ತಿ ಇದೆ. ಗ್ರಾಮದ ಹೊರವಲಯದ ಕೆರೆ, ಗ್ರಾಮಕ್ಕೆ ಹೊಂದಿಕೊಂಡಂತಿರುವ ಬೆಟ್ಟದ ಮೇಲಿನ 12ನೇ ಶತಮಾನದ ಶರಣ ಕಿನ್ನರಿ ಬೊಮ್ಮಯ್ಯನವರ ದೇವಸ್ಥಾನ ಮರಗು ಹೆಚ್ಚಿಸಿವೆ. ಗುಡ್ಡಗಾಡು ಅವರಿಸಿಕೊಂಡಿರುವ ಈ ಗ್ರಾಮದಲ್ಲಿ ಸುಂದರ ಮನೆಗಳು, ಸರ್ಕಾರಿ ಶಾಲೆ ಸೇರಿದಂತೆ ಸೇರಿದಂತೆ ಸೌಲಭ್ಯಗಳನ್ನು ಹೊಂದಿದೆ.
ಪ್ರತಿ ಶ್ರಾವಣ ಮಾಸದ ಮಧ್ಯೆ ಸೋಮವಾರ ಶರಣ ಬೊಮ್ಮಯ್ಯನವರ ಜಾತ್ರಾ ಮಹೋತ್ಸವ ಸಂಭ್ರಮದಿಂದ ಜರುಗುತ್ತದೆ. ಅದ್ಧೂರಿ ರಥೋತ್ಸವ ಸೇರಿದಂತೆ ಇತರ ಧಾರ್ಮಿಕ ಕಾರ್ಯಕ್ರಮಗಳು ವಿಶೇಷವಾಗಿ ನಡೆಯುತ್ತವೆ. ಅಲ್ಲದೆ ಪ್ರತಿ ಮಹಾಶಿವರಾತ್ರಿಯಂದು ಭಕ್ತರು ನಡೆಯುವ ಕೈಲಾಸನಾಥೇಶ್ವರ ಜಾತ್ರಾ ಮಹೋತ್ಸವದಲ್ಲಿ ನಾನಾ ಧಾರ್ಮಿಕ ಕಾರ್ಯಕ್ರಮಗಳ ಜತೆಗೆ ಹಲವು ಸಾಂಸ್ಕೃತಿಕ ಕಲಾ ತಂಡಗಳ ಕಲರವ ಇರುತ್ತದೆ. 2 ಜಾತ್ರೆಗಳಲ್ಲಿ ಸುತ್ತಲಿನ ಗ್ರಾಮಗಳ ಜತೆಗೆ ಬೀದರ್ ಕಲಬುರಗಿ ಜಿಲ್ಲೆಯ ಅಪಾರ ಭಕ್ತರು ಪಾಲ್ಗೊಂಡು ದೇವರ ದರ್ಶನ ಪಡೆದುಕೊಳ್ಳುತ್ತಾರೆ. ಗ್ರಾಮದ ಸ್ವಲ್ಪ ದೂರದಲ್ಲಿಯೇ ಬೀದರ್ ಕಲಬುರಗಿ ರಸ್ತೆಗೆ ಹೊಂದಿಕೊಂಡಿರುವ ಕೆರೆ ಅಭಿವೃದ್ಧಿ ಜತೆಗೆ ಪ್ರವಾಸಿಗರನ್ನು ಆಕರ್ಷಿಸುವ ನಿಟ್ಟಿನಲ್ಲಿ ಕೆರೆಯಲ್ಲಿ ಬೋಟಿಂಗ್ ವ್ಯವಸ್ಥೆ ಮಾಡಬೇಕು ಎಂಬುವುದು ಗ್ರಾಮಸ್ಥರ ಒತ್ತಾಯವಿದೆ.
ಬರುವ ದಿನಗಳಲ್ಲಿ ಗ್ರಾಮದ ಸೊಬಗು ಮತ್ತಷ್ಟು ಹೆಚ್ಚಿಸಲಿದೆ. ಬೀದರ್–ಕಲಬುರಗಿ ನೆರೆ ರಾಜ್ಯಗಳಾದ ಮಹಾರಾಷ್ಟ್ರ ತೆಲಂಗಾಣಕ್ಕೆ ಸಂಪರ್ಕಿಸುವ ಗ್ರಾಮದಿಂದ ಹಾದು ಹೋಗಿರುವ ಈ ಪ್ರಮುಖ ರಸ್ತೆಯಲ್ಲಿ ಸಂಚರಿಸುವ ಪ್ರಯಾಣಿಕರಿಗೆ ದೇವರ ದರ್ಶನ ಜೊತೆಗೆ ಕೆರೆಯ ಸುತ್ತಮುತ್ತಲಿನ ಹಸಿರಿನ ನಿಸರ್ಗದಿಂದ ಕೂಡಿರುವ ಬೆಟ್ಟ ಗುಡ್ಡಗಳು ಕಣ್ಣಿಗೆ ಮುದ ನೀಡುತ್ತವೆ.
ಬೀದರ್ ಜಿಲ್ಲೆಯಲ್ಲೇ ಹಳ್ಳಿಖೇಡ್ ಕೆ. ಗ್ರಾಮಕ್ಕೆ ತನ್ನದೆ ವೈಶಿಷ್ಟ್ಯವಿದೆ ಪ್ರವಾಸಿಗರನ್ನು ಸೆಳೆಯಲು ಆಕರ್ಷಣೀಯ ತಾಣಗಳಿವೆ. ಗ್ರಾಮವನ್ನು ಪ್ರವಾಸೋದ್ಯ ಇಲಾಖೆಯಿಂದ ಅಭಿವೃದ್ಧಿಗೊಳಿಸಬೇಕುಪ್ರಕಾಶ ಗ್ರಾಮಸ್ಥ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.