ಬೀದರ್: ಭಾರತೀಯ ರೆಡ್ ಕ್ರಾಸ್ ಸಂಸ್ಥೆ ವತಿಯಿಂದ ವಿಶ್ವಶಾಂತಿ ದಿನಾಚರಣೆ ಅಂಗವಾಗಿ ಶನಿವಾರ ನಗರದಲ್ಲಿ ಮಾನವೀಯತೆಗಾಗಿ ನಡಿಗೆ ರ‍್ಯಾಲಿ ನಡೆಯಿತು.
ನಗರದ ಬಿ.ವಿ.ಬಿ ಮಹಾವಿದ್ಯಾಲಯದದಿಂದ ಹೊರಟ ರ‍್ಯಲಿ ಬೊಮ್ಮಗೊಂಡೇಶ್ವರ ವೃತ್ತದ ಮೂಲಕ ವಿ.ಕೆ. ಇಂಟರನ್ಯಾಷನಲ್ ಶಾಲೆ ವರೆಗೆ ನಡೆಯಿತು.
ನಗರದ ವಿವಿಧ ಶಾಲಾ-ಕಾಲೇಜುಗಳ ಎನ್‌ಸಿಸಿ, ಎನ್ಎಸ್ಎಸ್ ಸ್ವಯಂಸೇವಕರು, ವಾದ್ಯ ತಂಡದವರು ಸೇರಿದಂತೆ ಒಂದು ಸಾವಿರಕ್ಕೂ ಹೆಚ್ಚು ವಿದ್ಯಾರ್ಥಿಗಳು ಪಾಲ್ಗೊಂಡಿದ್ದರು. ರ‍್ಯಾಲಿಯುದ್ದಕೂ ‘ಭಾರತ ಮಾತೆಗೆ ಜಯವಾಗಲಿ’, ‘ವಿಶ್ವ ಶಾಂತಿಗಾಗಿ ನಮ್ಮ ನಡೆ’, ‘ಭಾರತೀಯ ರೆಡ್ ಕ್ರಾಸ್ ಸಂಸ್ಥೆಗೆ ಜಯವಾಗಲಿ’, ’ಮಾನವಿಯತೆ ಬೆಳೆಯಲಿ ವಿಶ್ವ ಬೆಳಗಲಿ’ ಜಯಘೋಷಗಳು ಮೊಳಗಿದವು.
ಪ್ರಾಂಶುಪಾಲ ಡಾ.ವಿಠಲರೆಡ್ಡಿ ಅವರು ರ‍್ಯಾಲಿ ಉದ್ಘಾಟಿಸಿ, ‘ಇಂದು ಮನುಷ್ಯನ ಅಧಿಕಾರದ ದಾಹ ಹಾಗೂ ಸ್ವಾರ್ಥದಿಂದ ಯುದ್ಧಗಳು, ಭಯೋತ್ಪಾದಕ ದಾಳಿಗಳು, ಅತ್ಯಾಚಾರಗಳು ನಡೆಯುತ್ತಿವೆ. ಇವುಗಳನ್ನು ತಡೆಯಬೇಕಾದರೆ ವಿಶ್ವಶಾಂತಿ, ಮಾನವೀಯ ಮೌಲ್ಯಗಳನ್ನು ಹೆಚ್ಚಿಸಬೇಕು’ ಎಂದರು.
ಭಾರತೀಯ ರೆಡ್ ಕ್ರಾಸ್ ಸಂಸ್ಥೆಯ ಜಿಲ್ಲಾ ಶಾಖೆಯ ಅಧ್ಯಕ್ಷೆ ವಿದ್ಯಾ ಪಾಟೀಲ ಮಾತನಾಡಿ, ‘ರೆಡ್ ಕ್ರಾಸ್ ಸಂಸ್ಥೆ ಪ್ರೌಡ ಶಾಲೆಗಳಲ್ಲಿ ಮತ್ತು ಪದವಿ-ಪೂರ್ವ ಕಾಲೇಜುಗಳಲ್ಲಿ ಜೂನಿಯರ್ ರೆಡ್ ಕ್ರಾಸ್ ಸಂಸ್ಥೆಗಳ ಮೂಲಕ ಹಾಗೂ ಪದವಿ ಕಾಲೇಜುಗಳಿಲ್ಲಿ ಯೂತ್ ರೆಡ್ ಕ್ರಾಸ್ ವಿಂಗ್ ಮೂಲಕ ಸಮಾಜದಲ್ಲಿ ಶಾಂತಿ, ಸಾಮರಸ್ಯ, ಸೌಹರ್ದತೆಯ ಅರಿವು ಮೂಡಿಸುವ ಕಾರ್ಯ ಮಾಡುತ್ತಿದೆ’ ಎಂದರು.
ಜಿಲ್ಲಾ ಕಾರ್ಯದರ್ಶಿ ವೀರಶೆಟ್ಟಿ ಮೈಲೂರಕರ್, ಭಾರತೀಯ ರೆಡ್ ಕ್ರಾಸ್ ಸಂಸ್ಥೆಯ ಜೆಲ್ಲೆಯ ರಾಜ್ಯ ಪ್ರತಿನಿಧಿ ವೈಜಿನಾಥ ಕಮಠಾಣೆ ಮಾತನಾಡಿದರು.
ದಿಲೀಪ ಕಮಠಾಣೆ, ಸುಮನ ಸಿಂಧೆ, ಕಾಮಶೆಟ್ಟಿ ಚಿಕಬಸೆ, ಪ್ರೊ. ಅನೀಲಕುಮಾರ ಆಣದೂರೆ, ಧನರಾಜ ಪಾಟೀಲ, ಯುನುಸ್, ಸಂಗಮೇಶ ನೇಳಗೆ, ವೈಜಿನಾಥ ಪಾಟೀಲ, ಶಾಂತಲಾ ಮೈಲೂರಕರ್, ಪರಮೇಶ್ವರ ಬಿರಾದಾರ, ಸಂತೋಷಕುಮಾರ ಮಂಗಳೂರೆ, ಪ್ರೊ. ದೀಪಾ ರಾಗಾ, ಪೂಜಾ ಸಂಗಮದ, ಶಿವಲೀಲಾ ಮಠಪತಿ, ಬಸವರಾಜ ಬಿರಾದರ ಭಾಗಿಯಾಗಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.