ಕಮಲನಗರ: ಮಲೇರಿಯಾ ವಿರೋಧಿ ಮಾಸಾಚರಣೆ ಅಂಗವಾಗಿ ತಾಲ್ಲೂಕಿನ ಸೋನಾಳದಲ್ಲಿ ಜನಜಾಗೃತಿ ಜಾಥಾ ನಡೆಯಿತು.
ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಅಧಿಕಾರಿಗಳ ಕಚೇರಿಯು ಜಿಲ್ಲಾ ರೋಗವಾಹಕ ಆಶ್ರಿತ ರೋಗಗಳ ನಿಯಂತ್ರಣಾಧಿಕಾರಿ ಕಚೇರಿ ಸಹಯೋಗದಲ್ಲಿ ನಡೆದ ಜಾಥಾಕ್ಕೆ ಸೋನಾಳ ಪ್ರೌಢಶಾಲೆ ಮುಖ್ಯಶಿಕ್ಷಕಿ ಶೋಭಾ ಚಾಲನೆ ನೀಡಿದರು.
ಸರ್ಕಾರಿ ಪ್ರೌಢ ಶಾಲೆಯಿಂದ ಆರಂಭವಾದ ಜಾಥಾ ಗ್ರಾಮ ಪಂಚಾಯಿತಿ ಕಚೇರಿ, ಪಶು ಸಂಗೋಪನೆ ಆಸ್ಪತ್ರೆ, ನಿರಂಜನ ಸ್ವಾಮೀಜಿ ವೃತ್ತ, ಹನುಮಾನ ಕಟ್ಟೆ, ಬಸವೇಶ್ವರ ವೃತ್ತದ ಮೂಲಕ ಸಾಗಿ ಕಮಲನಗರ–ಲಖಣಗಾಂವ ಮುಖ್ಯ ರಸ್ತೆ ಮೂಲಕ ಮರಳಿ ಶಾಲೆ ತಲುಪಿತು.
ಮಲೇರಿಯಾ ಕುರಿತು ಜಾಗೃತಿ ಮೂಡಿಸಲಾಯಿತು. ಆರೋಗ್ಯ ನಿರೀಕ್ಷಣಾಧಿಕಾರಿ ಕಪಿಲ ಸಿಂಧೆ, ಜಗದೀಶ, ಚಂದ್ರಮಣಿ ಗೋಖಲೆ, ನಾಗನಾಥ ಉದಗೀರೆ, ಮನೋಹರ ಖರಾಬೆ, ಪ್ರಕಾಶ ಸ್ವಾಮಿ, ಅತಿಥಿ ಶಿಕ್ಷಕ ಬಂಟಿ ರಾಂಪುರೆ, ಆಶಾ ಕಾರ್ಯಕರ್ತೆ ದಾಕ್ಷಾಯಣಿ ಹಾಗೂ ಶಾಲೆ ವಿದ್ಯಾರ್ಥಿ–ವಿದ್ಯಾರ್ಥಿನಿಯರು ಇದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.