ADVERTISEMENT

ಬಸವಕಲ್ಯಾಣ: ಗೊ.ರು.ಚ.ಗೆ ‘ಬಸವಭಾನು’ ಪ್ರಶಸ್ತಿ

ಹಾರಕೂಡಶ್ರೀ ಸಾಹಿತ್ಯ ಸೇವೆ ಅನನ್ಯ

​ಪ್ರಜಾವಾಣಿ ವಾರ್ತೆ
Published 6 ಜುಲೈ 2024, 16:17 IST
Last Updated 6 ಜುಲೈ 2024, 16:17 IST
<div class="paragraphs"><p>ಬೀದರ್‌ ಜಿಲ್ಲೆಯ ಬಸವಕಲ್ಯಾಣ ತಾಲ್ಲೂಕಿನ ಹಾರಕೂಡ ಹಿರೇಮಠ ಸಂಸ್ಥಾನದಲ್ಲಿ ಶನಿವಾರ ನಡೆದ ಕಾರ್ಯಕ್ರಮದಲ್ಲಿ ಸಾಹಿತಿ ಗೊ.ರು.ಚನ್ನಬಸಪ್ಪ ಅವರಿಗೆ ₹1 ಲಕ್ಷ ನಗದು ಮತ್ತು ಫಲಕ ಒಳಗೊಂಡಿರುವ ‘ಬಸವಭಾನು’ ಪ್ರಶಸ್ತಿ ಪ್ರದಾನ ಮಾಡಲಾಯಿತು.</p></div>

ಬೀದರ್‌ ಜಿಲ್ಲೆಯ ಬಸವಕಲ್ಯಾಣ ತಾಲ್ಲೂಕಿನ ಹಾರಕೂಡ ಹಿರೇಮಠ ಸಂಸ್ಥಾನದಲ್ಲಿ ಶನಿವಾರ ನಡೆದ ಕಾರ್ಯಕ್ರಮದಲ್ಲಿ ಸಾಹಿತಿ ಗೊ.ರು.ಚನ್ನಬಸಪ್ಪ ಅವರಿಗೆ ₹1 ಲಕ್ಷ ನಗದು ಮತ್ತು ಫಲಕ ಒಳಗೊಂಡಿರುವ ‘ಬಸವಭಾನು’ ಪ್ರಶಸ್ತಿ ಪ್ರದಾನ ಮಾಡಲಾಯಿತು.

   

ಬಸವಕಲ್ಯಾಣ (ಬೀದರ್): `ಹಾರಕೂಡ ಚನ್ನವೀರ ಶಿವಾಚಾರ್ಯರು ಸ್ವಯಂ ಸಾಹಿತಿ ಆಗಿದ್ದು ಬೇರೆಯವರ 100 ಕ್ಕೂ ಅಧಿಕ ಗ್ರಂಥಗಳನ್ನು ಸಹ ಪ್ರಕಟಿಸಿದ್ದಾರೆ. ಧರ್ಮ, ಸಮಾಜ ಹಾಗೂ ಸಾಂಸ್ಕೃತಿಕ ಕ್ಷೇತ್ರದಲ್ಲಿ ಅನನ್ಯ ಸೇವೆ ಸಲ್ಲಿಸುತ್ತಿರುವ ಕಾರಣ ಇಲ್ಲಿ ನೀಡಿದ ಪ್ರಶಸ್ತಿಗೆ ಎಲ್ಲಿಲ್ಲದ ಪಾವಿತ್ರ್ಯತೆ ಇದೆ' ಎಂದು ಅನುಭವ ಮಂಟಪ ರೂಪುರೇಷೆ ಸಿದ್ಧತಾ ಸಮಿತಿ ಅಧ್ಯಕ್ಷ ಗೋ.ರು.ಚನ್ನಬಸಪ್ಪ ಹೇಳಿದ್ದಾರೆ.

ತಾಲ್ಲೂಕಿನ ಹಾರಕೂಡ ಹಿರೇಮಠದಲ್ಲಿ ಶನಿವಾರ ರಾತ್ರಿ ಹಮ್ಮಿಕೊಂಡಿದ್ದ ಕಾರ್ಯಕ್ರಮದಲ್ಲಿ ರೂ. 1 ಲಕ್ಷ ನಗದು ಒಳಗೊಂಡಿರುವ ಬಸವಭಾನು ಪ್ರಶಸ್ತಿ ಪಡೆದು ಅವರು ಮಾತನಾಡಿದರು.

ADVERTISEMENT

`ಜೀವನ ಕ್ಷಣಿಕ ಆಗಿರುವುದರಿಂದ ಉತ್ತಮ ಕೆಲಸ ಈಗಲೇ ಮಾಡಬೇಕೆಂಬ ಭಾವನೆ ಎಲ್ಲರದ್ದಾಗಬೇಕು. ಹಿರಿತನವೆಂದು ನನ್ನನ್ನು ಗೌರವಿಸಿದ್ದಾರೆ. ಆದರೆ ಬಸವಾದಿ ಶರಣರ ದೃಷ್ಟಿಯಲ್ಲಿ ಸಾಧಕರು, ಜ್ಞಾನಿಗಳು ಹಿರಿಯರಾಗಿದ್ದಾರೆ. ನಾನು ಎಂದೂ ಸಣ್ಣನವರನ್ನು ಸಣ್ಣವರೆಂದು ಹೇಳಿಲ್ಲ. ಏಕೆಂದರೆ ಅವರು ಎಂದಾದರೂ ದೊಡ್ಡವರು ಆಗಿಯೇ ಆಗುತ್ತಾರೆ' ಎಂದರು.

`ನಾನು ವಯಸ್ಸಾದರೂ ಬಸವಕಲ್ಯಾಣದಲ್ಲಿನ ಅನುಭವ ಮಂಟಪ ಪೂರ್ಣಗೊಳ್ಳುವವರೆಗೆ ನಿನ್ನೊಡನೆ ಬರುವುದಿಲ್ಲ ಎಂದು ಕಾಲನಿಗೆ ಹೇಳಿದ್ದೇನೆ. ಆದರೆ ಮಂಟಪದ ಕೆಲಸ ಹೇಗಾಗಲಿದೆಯೆಂದರೆ ಅಲ್ಲಿ ಶರಣ ಸಂಸ್ಕೃತಿ ಅವತರಿಸುವ ಜೊತೆಗೆ ವಚನ ವಿಶ್ವವಿದ್ಯಾಲಯವೂ ಇರಲಿದೆ. ಒಂದುವೇಳೆ ಕಾಲನು ಅಲ್ಲಿ ಬಂದು ಕುಳಿತುಕೊಂಡರೆ ನಾನು ಇಲ್ಲಿಯೇ ಇರುತ್ತೇನೆ ಎನ್ನುತ್ತಾನೋ ಏನೋ' ಎಂದು ಹಾಸ್ಯ ಚಟಾಕಿ ಸಹ ಹಾರಿಸಿದರು.

ಚನ್ನವೀರ ಶಿವಾಚಾರ್ಯರು ಪ್ರಶಸ್ತಿ ಪತ್ರ ಓದಿ ಗೋ.ರು.ಚನ್ನಬಸಪ್ಪ ಅವರಿಗೆ ಪ್ರದಾನ ಮಾಡಿದರು. ಭಾಲ್ಕಿ ಗುರುಬಸವ ಪಟ್ಟದ್ದೇವರು ಮಾತನಾಡಿದರು. ಮುಖಂಡರಾದ ಮೇಘರಾಜ್ ನಾಗರಾಳೆ, ಬಿ.ಕೆ.ಹಿರೇಮಠ, ಸಿದ್ರಾಮ ಗುದಗೆ, ಮಲ್ಲಿನಾಥ ಹಿರೇಮಠ, ಸೂರ್ಯಕಾಂತ ಸಂಗೋಳಗೆ, ರಾಜಕುಮಾರ ದೇಗಾಂವ, ಅಪ್ಪಣ್ಣ ಜನವಾಡಾ, ನವಲಿಂಗಕುಮಾರ ಪಾಟೀಲ ಉಪಸ್ಥಿತರಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.