ADVERTISEMENT

ಬಸವಕಲ್ಯಾಣ| ಅಧಿವೇಶನ: ಕಲ್ಯಾಣಕ್ಕೆ ಗತವೈಭವದ ಕಳೆ

ಲಿಂಗಾಯತ ಧರ್ಮ ಹುಟ್ಟಿದ ಸ್ಥಳದಲ್ಲಿ 9 ಶತಮಾನಗಳ ನಂತರ ಸಮಾವೇಶ

ಮಾಣಿಕ ಆರ್ ಭುರೆ
Published 22 ಫೆಬ್ರುವರಿ 2023, 4:46 IST
Last Updated 22 ಫೆಬ್ರುವರಿ 2023, 4:46 IST
ಬಸವಕಲ್ಯಾಣದ ರಥ ಮೈದಾನದಲ್ಲಿನ ರಾಷ್ಟ್ರೀಯ ಲಿಂಗಾಯತ ಮಹಾ ಅಧಿವೇಶನ ನಡೆಯುವ ಸ್ಥಳವನ್ನು ಬಸವರಾಜ ಧನ್ನೂರ, ಜಿಲ್ಲಾಧಿಕಾರಿ ಗೋವಿಂದರೆಡ್ಡಿ ಮೊದಲಾದವರು ಸೋಮವಾರ ಪರಿಶೀಲಿಸಿದರು
ಬಸವಕಲ್ಯಾಣದ ರಥ ಮೈದಾನದಲ್ಲಿನ ರಾಷ್ಟ್ರೀಯ ಲಿಂಗಾಯತ ಮಹಾ ಅಧಿವೇಶನ ನಡೆಯುವ ಸ್ಥಳವನ್ನು ಬಸವರಾಜ ಧನ್ನೂರ, ಜಿಲ್ಲಾಧಿಕಾರಿ ಗೋವಿಂದರೆಡ್ಡಿ ಮೊದಲಾದವರು ಸೋಮವಾರ ಪರಿಶೀಲಿಸಿದರು   

ಬಸವಕಲ್ಯಾಣ: ಮಾರ್ಚ್ 4 ಮತ್ತು 5 ರಂದು ನಗರದಲ್ಲಿ ನಡೆಯುವ ಪ್ರಥಮ ರಾಷ್ಟ್ರೀಯ ಲಿಂಗಾಯತ ಅಧಿವೇಶನಕ್ಕಾಗಿ ಭರದ ಸಿದ್ಧತೆ ಕೈಗೊಳ್ಳಲಾಗುತ್ತಿದೆ. ಸಮಾನತೆಯ ಹರಿಕಾರ ಗುರು ಬಸವಣ್ಣನವರು ಲಿಂಗಾಯತ ಧರ್ಮ ಸ್ಥಾಪಿಸಿದ ಈ ಪುಣ್ಯ ನೆಲ ಈಗ ಗತವೈಭವದ ಕಳೆ ಪಡೆದುಕೊಳ್ಳುತ್ತಿದೆ.

ರಥ ಮೈದಾನದಲ್ಲಿ ಅಧಿವೇಶನ ನಡೆಯುತ್ತಿದ್ದು, ಸೋಮವಾರ ಜಾಗತಿಕ ಲಿಂಗಾಯತ ಮಹಾಸಭಾದ ಜಿಲ್ಲಾ ಘಟಕದ ಅಧ್ಯಕ್ಷ ಬಸವರಾಜ ಧನ್ನೂರ, ಜಿಲ್ಲಾಧಿಕಾರಿ ಗೋವಿಂದರೆಡ್ಡಿ ಹಾಗೂ ಪೊಲೀಸ್ ಇಲಾಖೆಯವರು ಕಾರ್ಯಕ್ರಮದ ಸ್ಥಳ ಪರಿಶೀಲಿಸಿದ್ದಾರೆ.

ಅಕ್ಕಮಹಾದೇವಿ ಕಾಲೇಜಿನ ಆವರಣದ ಭಾಂಡೆ ಬಜಾರ್‌ನಲ್ಲಿ ಕಾರ್ಯಕ್ರಮದ ಸಂಪರ್ಕ ಕಚೇರಿ ಆರಂಭಿಸಲಾಗಿದೆ. ಅನೇಕ ಬಸವಾನುಯಾಯಿಗಳು ವಾಹನಗಳ ಮೇಲೆ ಅಧಿವೇಶನದ ಸ್ಟಿಕರ್, ಪೋಸ್ಟರ್ ಅಂಟಿಸಿಕೊಂಡು, ಧ್ವಜ ಅಳವಡಿಸಿ ಓಡಾಡುತ್ತಿದ್ದಾರೆ. ಪ್ರಮುಖ ಸ್ಥಳಗಳಲ್ಲಿ ಷಟಸ್ಥಲ ಧ್ವಜ, ಶರಣರ ಭಾವಚಿತ್ರ, ಸ್ವಾಗತ ಕಮಾನು, ಕಟೌಟ್ ಅಳವಡಿಸುವ ಕಾರ್ಯ ನಡೆದಿದೆ.

ADVERTISEMENT

‘ಈಗಾಗಲೇ ರಾಜ್ಯದ ಪ್ರಮುಖ ಸ್ಥಳಗಳಲ್ಲಿ ಡಾ.ಎಸ್.ಎಂ.ಜಾಮದಾರ ನೇತೃತ್ವದಲ್ಲಿ ಈ ಸಂಬಂಧ ಸಭೆಗಳು ನಡೆದಿವೆ. ಪ್ರತಿ ಜಿಲ್ಲಾ ಕೇಂದ್ರ ಹಾಗೂ ಆಂಧ್ರಪ್ರದೇಶ, ತೆಲಂಗಾಣ ಮತ್ತು ಮಹಾರಾಷ್ಟ್ರದಲ್ಲಿಯೂ ಅಲ್ಲಿನ ಪ್ರಮುಖರು ಪ್ರಚಾರ ಸಭೆ ನಡೆಸಿದ್ದಾರೆ. ಬೀದರ್ ಜಿಲ್ಲಾ ಕೇಂದ್ರ ಮತ್ತು ಬಸವಕಲ್ಯಾಣದಲ್ಲಿ ಜಾಗತಿಕ ಲಿಂಗಾಯತ ಮಹಾಸಭಾದ ಕಚೇರಿ ಗಳನ್ನು ಆರಂಭಿಸಲಾಗಿದೆ. ವಸತಿಗಾಗಿ ಸಂಪರ್ಕಿಸಲು ಸಮಿತಿ ರಚಿ ಸಲಾಗಿದೆ’ ಎಂದು ಜಾಗತಿಕ ಲಿಂಗಾಯತ ಮಹಾಸಭಾದ ಜಿಲ್ಲಾ ಘಟಕದ ಅಧ್ಯಕ್ಷ ಬಸವರಾಜ ಧನ್ನೂರ ತಿಳಿಸಿದ್ದಾರೆ. ವಸತಿ ಹಾಗೂ ಇತರೆ ವ್ಯವಸ್ಥೆಗಾಗಿ ರವೀಂದ್ರ ಮೊ.ಸಂ: 9880282331, ಶಿವಕುಮಾರ-9916111167, ಸುನಿಲ-7760680999, ಮಹೇಶ- 9035669950, ಶ್ರೀಕಾಂತ ಬಡದಾಳೆ- 9880451929, ಜಗನ್ನಾಥ ಪಾಟೀಲ-9741974133 ಮತ್ತು ಶಂಕರ ಮದರಗೈ-8123913207 ಗೆ ಸಂಪರ್ಕಿ ಸಲು ಕೋರಲಾಗಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.