ADVERTISEMENT

ಬಸವಣ್ಣನವರ ವಿಚಾರಧಾರೆ ಸರ್ವಶ್ರೇಷ್ಠ: ಡಿವೈಎಸ್ಪಿ ಪೃಥ್ವಿಕ್‌ ಶಂಕರ್

​ಪ್ರಜಾವಾಣಿ ವಾರ್ತೆ
Published 7 ಮೇ 2022, 2:48 IST
Last Updated 7 ಮೇ 2022, 2:48 IST
ಭಾಲ್ಕಿಯ ಬಸವೇಶ್ವರ ಪತ್ತಿನ ಸಹಕಾರ ಸಂಘದ ಕಚೇರಿಯಲ್ಲಿ ಡಿವೈಎಸ್ಪಿ ಪೃಥ್ವಿಕ್‌ ಶಂಕರ್ ಬಸವಣ್ಣನವರ ಭಾವಚಿತ್ರ ಬಿಡುಗಡೆ ಮಾಡಿದರು. ಸಂಘದ ಅಧ್ಯಕ್ಷ ಶಶಿಧರ ಕೋಸಂಬೆ ಸೇರಿ ಹಲವರು ಇದ್ದರು
ಭಾಲ್ಕಿಯ ಬಸವೇಶ್ವರ ಪತ್ತಿನ ಸಹಕಾರ ಸಂಘದ ಕಚೇರಿಯಲ್ಲಿ ಡಿವೈಎಸ್ಪಿ ಪೃಥ್ವಿಕ್‌ ಶಂಕರ್ ಬಸವಣ್ಣನವರ ಭಾವಚಿತ್ರ ಬಿಡುಗಡೆ ಮಾಡಿದರು. ಸಂಘದ ಅಧ್ಯಕ್ಷ ಶಶಿಧರ ಕೋಸಂಬೆ ಸೇರಿ ಹಲವರು ಇದ್ದರು   

ಭಾಲ್ಕಿ: ಇಲ್ಲಿನ ಮಹಾತ್ಮ ಗಾಂಧಿ ವೃತ್ತ ಸಮೀಪದ ಬಸವೇಶ್ವರ ಪತ್ತಿನ ಸಹಕಾರ ಸಂಘದ ಸಭಾಂಗಣದಲ್ಲಿ ಡಿವೈಎಸ್ಪಿ ಪೃಥ್ವಿಕ್‌ ಶಂಕರ್ ಅವರು ಬಸವಣ್ಣನವರ ಭಾವಚಿತ್ರ ಮಾಡಿದರು.

ಸಂಘದ ಹೆಸರಿನಲ್ಲಿ ಹೊರ ತಂದಿರುವ ಬಸವಣ್ಣನವರ ಭಾವಚಿತ್ರ ಲೋಕಾರ್ಪಣೆಗೊಳಿಸಿದ ಡಿವೈಎಸ್ಪಿ ಪೃಥ್ವಿಕ್ ಶಂಕರ್,‘ ಬಸವಣ್ಣನವರ ವಿಚಾರಧಾರೆ ಶ್ರೇಷ್ಠವಾಗಿದೆ. ಅವರು ಬೋಧಿಸಿದ ಕಾಯಕ ದಾಸೋಹ ತತ್ವ ಪ್ರತಿಯೊಬ್ಬರಿಗೂ ಮಾದರಿ’ ಎಂದು ಹೇಳಿದರು.

ಬಸವೇಶ್ವರ ಹೆಸರಿನಲ್ಲಿ ಸಂಘ ಆರಂಭಿಸಿರುವುದು ಸಂತಸದ ಸಂಗತಿ. ಸಂಘ ಆರಂಭಗೊಂಡ ಎರಡು–ಮೂರು ತಿಂಗಳಲ್ಲೇ ಜನರ ವಿಶ್ವಾಸ ಗಳಿಸಿ ಬಡ ಜನರಿಗೆ ನೆರವಾಗುತ್ತಿರುವುದು ಒಳ್ಳೆಯ ಬೆಳವಣಿಗೆ ಎಂದು ತಿಳಿಸಿದರು.

ADVERTISEMENT

ಸಂಘದ ಅಧ್ಯಕ್ಷ ಶಶಿಧರ ಕೋಸಂಬೆ ಮಾತನಾಡಿ,‘ಬಡ ಜನರ ಆರ್ಥಿಕ ಪರಿಸ್ಥಿತಿ ಸುಧಾರಿಸುವ ನಿಟ್ಟಿನಲ್ಲಿ ಸಂಘ ಆರಂಭಿಸಿದ್ದು, ಯಾವುದೇ ಷರತ್ತು ಇಲ್ಲದೇ ಸರಳ ಮತ್ತು ಸುಲಭವಾಗಿ ಸಾಲ ನೀಡಲಾಗುತ್ತಿದೆ’ ಎಂದು ತಿಳಿಸಿದರು.

ಸಂಘದ ಉಪಾಧ್ಯಕ್ಷ ಸಂಗಮೇಶ ಹುಣಜೆ ಮದಕಟ್ಟಿ, ನಿರ್ದೇಶಕರಾದ ಪ್ರಭು ಡಿಗ್ಗೆ, ರವೀಂದ್ರ ಚಿಡಗುಪ್ಪೆ, ರಾಜಕುಮಾರ ಬಿರಾದಾರ, ಶೈಲೇಶ ಚಳಕಾಪೂರೆ, ಸಂಗಮೇಶ ಗುಮ್ಮೆ, ಸಹಾದೇವ ಮಡಿವಾಳ, ಡಿಗಂಬರ ಹಡಪದ ಹಾಗೂ ವ್ಯವಸ್ಥಾಪಕ ಶಿವಾನಂದ ದಾಬಶೆಟ್ಟೆ ಅವರು
ಇದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.