ADVERTISEMENT

ಬಸವತತ್ವ ಮನುಕುಲಕ್ಕೆ ದಾರಿದೀಪ: ಸಾಹಿತಿ ರಜಿಯಾ ಬಳಬಟ್ಟಿ

​ಪ್ರಜಾವಾಣಿ ವಾರ್ತೆ
Published 8 ಜುಲೈ 2024, 16:23 IST
Last Updated 8 ಜುಲೈ 2024, 16:23 IST
ಬೀದರ್‌ನಲ್ಲಿ ಏರ್ಪಡಿಸಿದ್ದ ಕವಿಗೋಷ್ಠಿಯನ್ನು ಸಾಹಿತಿ ರಜಿಯಾ ಬಳಬಟ್ಟಿ ಸಸಿಗೆ ನೀರೆರೆದು ಉದ್ಘಾಟಿಸಿದರು
ಬೀದರ್‌ನಲ್ಲಿ ಏರ್ಪಡಿಸಿದ್ದ ಕವಿಗೋಷ್ಠಿಯನ್ನು ಸಾಹಿತಿ ರಜಿಯಾ ಬಳಬಟ್ಟಿ ಸಸಿಗೆ ನೀರೆರೆದು ಉದ್ಘಾಟಿಸಿದರು   

ಬೀದರ್‌: ‘ಬಸವಣ್ಣನವರು ಮನುಕುಲದ ಕಲ್ಯಾಣಕ್ಕೆ ಅವಿರತ ಶ್ರಮಿಸಿದ್ದರು. ಬಸವತತ್ವ ಮನುಕುಲಕ್ಕೆ ದಾರಿದೀಪವಾಗಿದೆ’ ಎಂದು ಸಾಹಿತಿ ರಜಿಯಾ ಬಳಬಟ್ಟಿ ತಿಳಿಸಿದರು.

ವಚನಾಮೃತ ಕನ್ನಡ ಸಂಘದಿಂದ ನಗರದಲ್ಲಿ ಭಾನುವಾರ ಆಯೋಜಿಸಿದ್ದ ‘ಬಸವೇಶ್ವರರು ಪ್ರತಿಪಾದಿಸಿದ ಜೀವನ ಮೌಲ್ಯಗಳು’ ಕುರಿತ ಕವಿಗೋಷ್ಠಿಯನ್ನು ಉದ್ಘಾಟಿಸಿ ಅವರು ಮಾತನಾಡಿದರು.

ಬಸವಣ್ಣನವರು ಸಕಲ ಜೀವಿಗೂ ಲೇಸು ಬಯಸಿದ್ದರು. ಬಸವಣ್ಣ ಮಹಾ ಮಾನವತಾವಾದಿ ಆಗಿದ್ದರು. ಸಮಾನತೆ ತತ್ವ ಪ್ರತಿಪಾದಿಸಿದ್ದರು. ಬಸವಣ್ಣನವರ ತತ್ವಗಳ ಆಚರಣೆ ಇಂದಿನ ಅವಶ್ಯಕತೆಯಾಗಿದೆ ಎಂದರು.

ADVERTISEMENT

ವಚನಾಮೃತ ಕನ್ನಡ ಸಂಘದ ಅಧ್ಯಕ್ಷ ಪ್ರೊ. ಸಿದ್ರಾಮಪ್ಪ ಮಾಸಿಮಾಡೆ ಮಾತನಾಡಿ, ಬಸವಣ್ಣನವರ ವಚನಗಳು ಜೀವನ ಸೂತ್ರವನ್ನು ಒಳಗೊಂಡಿವೆ. ಜಗತ್ತು ಕಟ್ಟುವ, ಜನರ ಜ್ಞಾನದ ಹಸಿವು ನೀಗಿಸುವಂತಹ ಸಾಹಿತ್ಯ ರಚನೆ ಆಗಬೇಕಿದೆ ಎಂದು ಹೇಳಿದರು.

ನಿವೃತ್ತ ಪ್ರಾಚಾರ್ಯ ಸೂರ್ಯಕಾಂತ ಚಿದ್ರೆ, ರಾಜ್ಯ ಸರ್ಕಾರಿ ನೌಕರರ ಸಂಘದ ಜಿಲ್ಲಾ ಘಟಕದ ಪ್ರಧಾನ ಕಾರ್ಯದರ್ಶಿ ರಾಜಶೇಖರ ಮಂಗಲಗಿ, ಶಿಕ್ಷಕ ಶ್ರೀಕಾಂತ ಪಾಟೀಲ, ಜಯದೇವಿ ಯದಲಾಪುರೆ, ಜೀಜಾಮಾತಾ ಕನ್ಯಾ ಪ್ರೌಢಶಾಲೆಯ ಮುಖ್ಯಶಿಕ್ಷಕ ಪರಮೇಶ್ವರ ಬಿರಾದಾರ, ಬಸವರಾಜ ಮೂಲಗೆ ಹಾಜರಿದ್ದರು.

ಸೂರ್ಯಕಾಂತ ಹೊಡಮನಿ, ವಿದ್ಯಾವತಿ ಬಲ್ಲೂರ, ಪಾರ್ವತಿ ಸೋನಾರೆ, ಸುನಿತಾ ದಾಡಗೆ, ಜಗದೇವಿ ಮೈನಾಳೆ, ರೇಣುಕಾ ಎನ್.ಬಿ, ಸ್ವರೂಪರಾಣಿ ನಾಗೂರೆ, ರೇಣುಕಾ ಮಳ್ಳಿ, ಶ್ರೇಯಾ ಮಹೇಂದ್ರಕರ್ ಹಾಗೂ ಶ್ರೀದೇವಿ ಸೋಮಶೆಟ್ಟಿ ಸ್ವರಚಿತ ಕವನ ವಾಚಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.