ADVERTISEMENT

ಪಾಳು ಬಿದ್ದಿರುವ ಇತಿಹಾಸ ಸಾರುವ ಭಾಲ್ಕಿ, ಭಾತಂಬ್ರಾ ಕೋಟೆ

​ಪ್ರಜಾವಾಣಿ ವಾರ್ತೆ
Published 28 ಅಕ್ಟೋಬರ್ 2024, 4:42 IST
Last Updated 28 ಅಕ್ಟೋಬರ್ 2024, 4:42 IST
ಭಾಲ್ಕಿ ಕೋಟೆ ಆವರಣದಲ್ಲಿ ಬೆಳೆದು ನಿಂತಿರುವ ಪೊದೆ ನಡುವೆಯೇ ಕೋಟೆ ಗೋಡೆಯ ದುರಸ್ತಿ ನಡೆದಿದೆ
ಭಾಲ್ಕಿ ಕೋಟೆ ಆವರಣದಲ್ಲಿ ಬೆಳೆದು ನಿಂತಿರುವ ಪೊದೆ ನಡುವೆಯೇ ಕೋಟೆ ಗೋಡೆಯ ದುರಸ್ತಿ ನಡೆದಿದೆ   

ಭಾಲ್ಕಿ: ಇತಿಹಾಸ, ವೈಭವ ಸಾರಿ ಹೇಳಬೇಕಾದ ಪಟ್ಟಣದ ಕೋಟೆ ಸೂಕ್ತ ನಿರ್ವಹಣೆ ಇಲ್ಲದೆ ಪಾಳು ಬಿದ್ದಿದೆ.

ಕೋಟೆ ಒಳಭಾಗದಲ್ಲಿ ಮುಳ್ಳು ಕಂಟಿ, ದಟ್ಟ ಪೊದೆ ಬೆಳೆದು ನಿಂತಿದೆ. ಜನ ಓಡಾಡುತ್ತ ಕೋಟೆ ನೋಡಲಾರದಂಥ ಪರಿಸ್ಥಿತಿ ಇದೆ. ದುರಂತವೆಂದರೆ ಸೂಕ್ತ ಭದ್ರತಾ ವ್ಯವಸ್ಥೆಯಿರದ ಕಾರಣ ಅನೇಕರು ಕೋಟೆಯ ಒಳಗೆ ಹೋಗಿ ದೈನಂದಿನ ಕರ್ಮ ಮಾಡುತ್ತಿದ್ದಾರೆ. ಇನ್ನೊಂದೆಡೆ, ಕೋಟೆ ಕಟ್ಟಡದ ದುರಸ್ತಿ ಕಾರ್ಯ ನಡೆದಿದೆ. ಆದರೆ, ಮೂಲ ಮೂತ್ರ ವಿಸರ್ಜನೆಗೆ ಹೋಗುತ್ತಿರುವವರನ್ನು ಯಾರೂ ತಡೆಯುವವರು ಇಲ್ಲದಂತಾಗಿದೆ.

ಕೋಟೆಯ ಮಹತ್ವ ಅರಿಯದ ಜನ ಕೋಟೆಯ ಒಳಭಾಗವನ್ನು ಶೌಚಕ್ಕೆ ಬಳಸುತ್ತಿರುವುದು ಶೋಚನೀಯ ಸಂಗತಿ. ಇನ್ನೂ ಕುಸಿತಕ್ಕೆ, ಬಿರುಕಿಗೆ ಒಳಗಾಗಿದ್ದ ಕೋಟೆಯ ಒಳಭಾಗದ ದುರಸ್ತಿ ಕಾರ್ಯ ಸುಮಾರು ನಾಲ್ಕು ತಿಂಗಳುಗಳಿಂದ ನಡೆದಿದೆ.

ADVERTISEMENT

ತಾಲ್ಲೂಕು ಕೇಂದ್ರದಿಂದ 6 ಕಿ.ಮೀ. ದೂರದಲ್ಲಿರುವ ಐತಿಹಾಸಿಕ ಭಾತಂಬ್ರಾ ಕೋಟೆಯ ಪರಿಸ್ಥಿತಿಯೂ ಭಿನ್ನವಾಗಿಲ್ಲ. ಈ ಕೋಟೆಗೂ ರಕ್ಷಣೆ ಇಲ್ಲದರಿಂದ ಅನೈತಿಕ ಚಟುವಟಿಕೆಗಳ ತಾಣವಾಗಿ ಮಾರ್ಪಟ್ಟಿದೆ ಎಂದು ಸ್ಥಳೀಯರು ಆರೋಪಿಸುತ್ತಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.