ಭಾಲ್ಕಿ: ‘ಮನುಷ್ಯನ ಸಾರ್ಥಕ ಜೀವನಕ್ಕಾಗಿ ಶರಣರ ವಾಣಿ ಆಲಿಸಬೇಕು’ ಎಂದು ಹಿರೇಮಠ ಸಂಸ್ಥಾನದ ಪೀಠಾಧಿಪತಿ ಗುರುಬಸವ ಪಟ್ಟದ್ದೇವರು ಹೇಳಿದರು.
ತಾಲ್ಲೂಕಿನ ಕದಲಾಬಾದ ಗ್ರಾಮದ ಬಸವ ಮಂಟಪದಲ್ಲಿ ಶ್ರಾವಣ ಮಾಸದ ನಿಮಿತ್ತ ಆಯೋಜಿಸಿದ್ದ ಬಸವ ದರ್ಶನ ಪ್ರವಚನ ಕಾರ್ಯಕ್ರಮದ ಸಾನ್ನಿಧ್ಯ ವಹಿಸಿ ಅವರು ಮಾತನಾಡಿದರು.
‘ಬಸವಾದಿ ಶರಣರು ವಚನಗಳ ರೂಪದಲ್ಲಿ ಮನುಕುಲದ ಒಳಿತಿಗೆ ಅದ್ಭುತ ಕೊಡುಗೆ ನೀಡಿದ್ದಾರೆ. ಶಾಂತಿ, ನೆಮ್ಮದಿ ಕಂಡುಕೊಳ್ಳಲು ಸದಾಕಾಲ ಶರಣರ, ಮಹಾತ್ಮರ ಚಿಂತನೆಗಳು ಆಲಿಸಬೇಕು’ ಎಂದರು.
ಗ್ರಾಮದ ಪ್ರಮುಖರಾದ ಕಾಶಪ್ಪ ಪಾಟೀಲ, ಚಂದ್ರಕಾಂತ ಬಿರಾದಾರ, ರಾಮಶೆಟ್ಟಿ ಬಿರಾದಾರ, ಬಮಶೆಟ್ಟಿ ಬಿರಾದಾರ, ಅಶೋಕ ಬಿರಾದಾರ, ಶಿವಶರಣಪ್ಪ ಮಣಂಗೇಪೂರೆ, ಕಿರಣ ಬಿರಾದಾರ, ಸುಧಾಕರ ಬಿರಾದಾರ, ರೂಪೇಶ ಬಿರಾದಾರ ಉಪಸ್ಥಿತರಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.