ಬೀದರ್: ಔರಾದ್ ತಾಲ್ಲೂಕಿನ ತುಳಜಾಪುರದಲ್ಲಿ ಭವಾನಿ ಮಾತೆ ಜಾತ್ರಾ ಮಹೋತ್ಸವ ಏಪ್ರಿಲ್ 16 ಹಾಗೂ 17 ರಂದು ನಡೆಯಲಿದೆ.
ಜಾತ್ರೆ ನಿಮಿತ್ತ ಗ್ರಾಮದ ಭವಾನಿ ಮಾತೆ ಮಂದಿರದಲ್ಲಿ ವಿಶೇಷ ಪೂಜೆ, ಮಹಾ ಅಭಿಷೇಕ, ಪ್ರಸಾದ ವಿತರಣೆ, ಪಲ್ಲಕ್ಕಿ ಮೆರವಣಿಗೆ ಸೇರಿದಂತೆ ವಿವಿಧ ಧಾರ್ಮಿಕ ಕಾರ್ಯಕ್ರಮಗಳು ನಡೆಯಲಿವೆ.
16 ರಂದು ಬೆಳಿಗ್ಗೆ 7ಕ್ಕೆ ಮಹಾ ಅಭಿಷೇಕ, ಬೆಳಿಗ್ಗೆ 9 ರಿಂದ ಪ್ರಸಾದ ವಿತರಣೆ, ಸಂಜೆ 7ಕ್ಕೆ ಪಲ್ಲಕ್ಕಿ ಮೆರವಣಿಗೆ ಜರುಗಲಿದೆ.
ಭವಾನಿ ಮಾತೆ ಜಾತ್ರೆಯು ಸರ್ವ ಧರ್ಮ ಸಮನ್ವಯಕ್ಕೆ ಹೆಸರಾಗಿದೆ. ಗ್ರಾಮ, ಸುತ್ತಮುತ್ತಲಿನ ಗ್ರಾಮಗಳು ಸೇರಿದಂತೆ ವಿವಿಧೆಡೆಯ ಸರ್ವ ಧರ್ಮಗಳ ಭಕ್ತರು ಜಾತ್ರೆಗೆ ಬಂದು ಭವಾನಿ ಮಾತೆಗೆ ಪೂಜೆ ಸಲ್ಲಿಸುತ್ತಾರೆ. ಉದ್ಯೋಗ ಹಾಗೂ ಇತರ ಕಾರಣಗಳಿಂದಾಗಿ ಬೇರೆ ಊರು, ಪಟ್ಟಣ, ನಗರಗಳಲ್ಲಿ ನೆಲೆಸಿರುವ ಗ್ರಾಮದ ಜನ ತಪ್ಪದೇ ಜಾತ್ರಾ ಮಹೋತ್ಸವದಲ್ಲಿ ಪಾಲ್ಗೊಳ್ಳುತ್ತಾರೆ.
ಭವಾನಿ ಮಾತೆ ಜಾತ್ರೆಗೆ ಭರದ ಸಿದ್ಧತೆಗಳು ನಡೆದಿವೆ. ಜಾತ್ರೆಯಲ್ಲಿ ಭಕ್ತರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಬೇಕು ಎಂದು ಗ್ರಾಮದ ಆರಿಫ್ ಮುಲ್ಲಾ, ಹಿರಿಯ ಮುಖಂಡರಾದ ಅರವಿಂದ ಪಾರಾ, ಸುಭಾಷ ಪೊಲೀಸ್ ಪಾಟೀಲ, ತಿಪ್ಪೇಶ ವಲ್ಲಾಪುರೆ ಮನವಿ ಮಾಡಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.