ಬೀದರ್: ‘ಬೌದ್ಧಿಕ ಆಸ್ತಿ ಹಕ್ಕುಗಳನ್ನು ಎಲ್ಲರೂ ಅರಿಯಬೇಕು’ ಎಂದು ಪ್ರಾಚಾರ್ಯ ಪ್ರೊ.ಎಸ್.ಜಿ. ಹುಗ್ಗಿ ಪಾಟೀಲ ಹೇಳಿದರು.
ಇಲ್ಲಿಯ ಅಕ್ಕಮಹಾದೇವಿ ಮಹಿಳಾ ಮಹಾವಿದ್ಯಾಲಯದಲ್ಲಿ ನಡೆದ ಬೌದ್ಧಿಕ ಆಸ್ತಿ ಹಕ್ಕುಗಳು ಕುರಿತ ಕಾರ್ಯಾಗಾರದ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
ಯಾವುದೇ ವಸ್ತುವನ್ನು ಕಂಡು ಹಿಡಿದ, ಸಂಶೋಧನೆ ಮಾಡಿದ ವ್ಯಕ್ತಿಗೆ ನಿರ್ದಿಷ್ಟ ಅವಧಿಯವರೆಗೆ ಅದರ ರಕ್ಷಣೆ ಹಾಗೂ ಬಳಕೆಗೆ ನೀಡುವ ಅಧಿಕಾರವೇ ಬೌದ್ಧಿಕ ಆಸ್ತಿ ಹಕ್ಕು ಎಂದು ತಿಳಿಸಿದರು.
ಸಂಪನ್ಮೂಲ ವ್ಯಕ್ತಿಗಳಾದ ಡಾ. ಸಂಗಶೆಟ್ಟಿ ಶೇರಿಕಾರ್, ಎಂ. ಶ್ರೀಲತಾ ಬಸವೇಶ್ವರ ಅವರು, ಬೌದ್ಧಿಕ ಆಸ್ತಿ ಹಕ್ಕುಗಳು ಸಂಶೋಧಕನ ವಸ್ತು, ಉತ್ಪನ್ನಗಳನ್ನು ರಕ್ಷಿಸಿಕೊಳ್ಳಲು ಹೇಗೆ ನೆರವಾಗುತ್ತವೆ ಎನ್ನುವ ಕುರಿತು ಸಮಗ್ರ ಮಾಹಿತಿ ನೀಡಿದರು.
ಭೌತವಿಜ್ಞಾನ ವಿಭಾಗದ ಮುಖ್ಯಸ್ಥ ಡಾ. ವಿಜಯಕುಮಾರ ಬಿರಾದಾರ, ಪ್ರಾಣಿವಿಜ್ಞಾನ ವಿಭಾಗದ ಮುಖ್ಯಸ್ಥೆ ಡಾ. ವೀಣಾಕುಮಾರಿ ಉಪಸ್ಥಿತರಿದ್ದರು.
ಡಾ. ಶೈಲಶ್ರೀ ಸ್ವಾಗತಿಸಿದರು. ಡಾ. ಮೀನಾ ಗಾಯಕವಾಡ್ ನಿರೂಪಿಸಿದರು. ಡಾ. ಪ್ರವೀಣಕುಮಾರ ವಂದಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.