ರಂಜೋಳಖೇಣಿ (ಬೀದರ್ ತಾಲ್ಲೂಕು): ಎರಡು ಅವಧಿಗೆ ವಿಧಾನ ಪರಿಷತ್ ಸದಸ್ಯರಾಗಿದ್ದ ರಂಜೋಳಖೇಣಿ ಗ್ರಾಮದ ನರೇಂದ್ರ ಮಡಿವಾಳಪ್ಪ ಖೇಣಿ (90) ಬೆಂಗಳೂರಿನ ಖಾಸಗಿ ಆಸ್ಪತ್ರೆಯಲ್ಲಿ ಬುಧವಾರ ನಿಧನರಾದರು.
1935 ರ ಸೆಪ್ಟೆಂಬರ್ 1 ರಂದು ಜನಿಸಿದ್ದ ಖೇಣಿ ಅವರು ಪ್ರಾಥಮಿಕ ಶಿಕ್ಷಣ ಪಡೆದದ್ದು ಹೈದರಾಬಾದ್‍ನಲ್ಲಿ. ಶಿಕ್ಷಣದ ನಂತರ ಸಾಮಾಜಿಕ ಚಟುವಟಿಕೆಗಳಲ್ಲಿ ಸಕ್ರಿಯರಾದರು. ರಾಜಕೀಯ ಕ್ಷೇತ್ರಕ್ಕೂ ಧುಮುಕಿದರು.
1961 ರಲ್ಲಿ ರಂಜೋಳಖೇಣಿ ಗ್ರಾಮ ಪಂಚಾಯಿತಿ ಅಧ್ಯಕ್ಷರಾಗಿದ್ದರು. 1963 ರಿಂದ 1964 ರ ವರೆಗೆ ಹುಮನಾಬಾದ್ ತಾಲ್ಲೂಕು ಅಭಿವೃದ್ಧಿ ಮಂಡಳಿಯ ಅಧ್ಯಕ್ಷರಾಗಿ ಕಾರ್ಯ ನಿರ್ವಹಿಸಿದ್ದರು.
1968 ಹಾಗೂ 1980 ರಲ್ಲಿ ವಿಧಾನ ಪರಿಷತ್ ಸದಸ್ಯರಾಗಿ ಆಯ್ಕೆಯಾಗಿದ್ದರು. ಮಾಜಿ ಮುಖ್ಯಮಂತ್ರಿಗಳಾದ ಡಿ. ದೇವರಾಜ ಅರಸು ಹಾಗೂ ವೀರೇಂದ್ರ ಪಾಟೀಲ ಅವರೊಂದಿಗೆ ಒಡನಾಟ ಹೊಂದಿದ್ದರು.
ಖೇಣಿ ಅವರಿಗೆ ಪುತ್ರರಾದ ರಾಜೇಶ್, ಮಹೇಶ್, ಶರ್ಮಿಳಾ ಇದ್ದಾರೆ. ಸ್ವಗ್ರಾಮದಲ್ಲಿ ಗುರುವಾರ (ಅ.10) ಮಧ್ಯಾಹ್ನ 2ಕ್ಕೆ ಅಂತ್ಯಕ್ರಿಯೆ ನಡೆಯಲಿದೆ ಎಂದು ಕುಟುಂಬದ ಮೂಲಗಳು ತಿಳಿಸಿವೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.