ADVERTISEMENT

ಬೀದರ್: ಜನವರಿಯಲ್ಲಿ ಜಾನುವಾರು, ಕುಕ್ಕುಟ, ಮತ್ಸ್ಯ ಮೇಳ

​ಪ್ರಜಾವಾಣಿ ವಾರ್ತೆ
Published 16 ನವೆಂಬರ್ 2024, 13:00 IST
Last Updated 16 ನವೆಂಬರ್ 2024, 13:00 IST
ಬೀದರ್ ತಾಲ್ಲೂಕಿನ ಕಮಠಾಣ ಸಮೀಪದ ಕರ್ನಾಟಕ ಪಶು ವೈದ್ಯಕೀಯ ವಿಶ್ವವಿದ್ಯಾಲಯದಲ್ಲಿ ಶುಕ್ರವಾರ ಕುಲಪತಿ ಪ್ರೊ. ಕೆ.ಸಿ. ವೀರಣ್ಣ ಅವರು ಜಾನುವಾರು, ಕುಕ್ಕುಟ ಹಾಗೂ ಮತ್ಸ್ಯ ಮೇಳದ ಭಿತ್ತಿ ಪತ್ರ ಬಿಡುಗಡೆ ಮಾಡಿದರು
ಬೀದರ್ ತಾಲ್ಲೂಕಿನ ಕಮಠಾಣ ಸಮೀಪದ ಕರ್ನಾಟಕ ಪಶು ವೈದ್ಯಕೀಯ ವಿಶ್ವವಿದ್ಯಾಲಯದಲ್ಲಿ ಶುಕ್ರವಾರ ಕುಲಪತಿ ಪ್ರೊ. ಕೆ.ಸಿ. ವೀರಣ್ಣ ಅವರು ಜಾನುವಾರು, ಕುಕ್ಕುಟ ಹಾಗೂ ಮತ್ಸ್ಯ ಮೇಳದ ಭಿತ್ತಿ ಪತ್ರ ಬಿಡುಗಡೆ ಮಾಡಿದರು   

ಬೀದರ್: ಕರ್ನಾಟಕ ಪಶುವೈದ್ಯಕೀಯ, ಪಶು ಹಾಗೂ ಮೀನುಗಾರಿಕೆ ವಿಜ್ಞಾನಗಳ ವಿಶ್ವವಿದ್ಯಾಲಯದಲ್ಲಿ 2025ರ ಜನವರಿ 17ರಿಂದ 19ರವರೆಗೆ ಜಾನುವಾರು, ಕುಕ್ಕುಟ ಹಾಗೂ ಮತ್ಸ್ಯ ಮೇಳ ಹಮ್ಮಿಕೊಳ್ಳಲಾಗಿದೆ ಎಂದು ವಿಶ್ವವಿದ್ಯಾಲಯದ ಕುಲಪತಿ ಪ್ರೊ. ಕೆ.ಸಿ. ವೀರಣ್ಣ ಹೇಳಿದರು.

ಬೀದರ್ ತಾಲ್ಲೂಕಿನ ಕಮಠಾಣ ಸಮೀಪದ ಕರ್ನಾಟಕ ಪಶು ವೈದ್ಯಕೀಯ ವಿಶ್ವವಿದ್ಯಾಲಯದಲ್ಲಿ ಶುಕ್ರವಾರ ಮೇಳದ ಭಿತ್ತಿ ಪತ್ರ ಬಿಡುಗಡೆಗೊಳಿಸಿ ಅವರು ಮಾತನಾಡಿದರು.

‘ಮೇಳದಲ್ಲಿ ವೈಜ್ಞಾನಿಕ ಜಾನುವಾರು, ಮೀನು ಸಾಕಣೆ ಪದ್ಧತಿ, ವೈಜ್ಞಾನಿಕ ಆಹಾರ ಪದ್ಧತಿ, ಸಮಗ್ರ ಕೃಷಿ ಪದ್ಧತಿ, ಸಾವಯವ ಕೃಷಿ, ಜೈವಿಕ ಗೊಬ್ಬರ, ಮೇವಿನ ಸಂಸ್ಕರಣೆ, ಸಂರಕ್ಷಣೆ ತಂತ್ರಜ್ಞಾನ, ರೋಗ ನಿರ್ಣಯ, ಔಷಧಿ, ಲಸಿಕೆ, ಜಾನುವಾರು, ಕುಕ್ಕುಟ, ಮೀನು ತಂತ್ರಜ್ಞಾನ, ಕೃಷಿ ಉಪಕರಣ, ಯಂತ್ರೋಪಕರಣ, ಸರ್ಕಾರದ ಯೋಜನೆಗಳ ಕುರಿತು ರೈತರಿಗೆ ಮಾಹಿತಿ ಒದಗಿಸಲಾಗುವುದು. ರೈತ-ವಿಜ್ಞಾನಿ, ರೈತ- ರೈತರ ಸಂವಾದ ಏರ್ಪಡಿಸಲಾಗುವುದು. 180ರಿಂದ 200 ಮಳಿಗೆಗಳನ್ನು ಹಾಕಲಾಗುವುದು. ಪಶುಪಾಲನೆ ಮತ್ತು ಮೀನುಗಾರಿಕೆಗೆ ಉತ್ತೇಜನ ನೀಡುವ ದಿಸೆಯಲ್ಲಿ ಪ್ರತಿ ಜಿಲ್ಲೆಗೆ ಶೇಷ್ಠ ರೈತ, ರೈತ ಮಹಿಳೆ ಪ್ರಶಸ್ತಿ ನೀಡಲಾಗುವುದು’ ಎಂದು ಹೇಳಿದರು.

ADVERTISEMENT

ವಿಶ್ವವಿದ್ಯಾಲಯದ ವ್ಯವಸ್ಥಾಪಕ ಮಂಡಳಿ ಸದಸ್ಯರಾದ ಎಚ್.ಎಂ. ಜಯಪ್ರಕಾಶ, ವೆಂಕಟಾಚಲ ವಿ.ಎಸ್, ಲತಾ ಡಿ.ಎಚ್. ಬಸವರಾಜ ಭತಮುರ್ಗೆ, ಸಂಗಪ್ಪ ವಾಲಿಕರ್, ವಿಶ್ವವಿದ್ಯಾಲಯದ ವಿಸ್ತರಣಾ ನಿರ್ದೇಶಕ ಡಾ. ಬಸವರಾಜ ಅವಟಿ ಹಾಜರಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.