ADVERTISEMENT

‘ಪರಿಸರ ಸಂರಕ್ಷಣೆಯಿಂದ ಜೀವರಾಶಿಗಳ ರಕ್ಷಣೆʼ

​ಪ್ರಜಾವಾಣಿ ವಾರ್ತೆ
Published 21 ಜೂನ್ 2024, 16:23 IST
Last Updated 21 ಜೂನ್ 2024, 16:23 IST
ಚಿಟಗುಪ್ಪದ ಸರ್ಕಾರಿ ಪದವಿ ಕಾಲೇಜಿನಲ್ಲಿ ಮಂಗಳವಾರ ಶಾಸಕ ಡಾ.ಸಿದ್ದಲಿಂಗಪ್ಪ ಪಾಟೀಲ  ಸಸಿಗೆ ನೀರುಣಿಸಿ ಪರಿಸರ ಜಾಗೃತಿ ಹಾಗೂ ಸಮಾಜ ಸೇವೆ ಕಾರ್ಯಕ್ರಮ ಉದ್ಘಾಟಿಸಿದರು
ಚಿಟಗುಪ್ಪದ ಸರ್ಕಾರಿ ಪದವಿ ಕಾಲೇಜಿನಲ್ಲಿ ಮಂಗಳವಾರ ಶಾಸಕ ಡಾ.ಸಿದ್ದಲಿಂಗಪ್ಪ ಪಾಟೀಲ  ಸಸಿಗೆ ನೀರುಣಿಸಿ ಪರಿಸರ ಜಾಗೃತಿ ಹಾಗೂ ಸಮಾಜ ಸೇವೆ ಕಾರ್ಯಕ್ರಮ ಉದ್ಘಾಟಿಸಿದರು   

ಚಿಟಗುಪ್ಪ: ಪರಿಸರ ಸಂರಕ್ಷಣೆಯಿಂದ ಜೀವರಾಶಿಗಳ ರಕ್ಷಣೆಯಾಗುತ್ತದೆ ಎಂದು ಶಾಸಕ ಡಾ.ಸಿದ್ದಲಿಂಗಪ್ಪ ಪಾಟೀಲ ಹೇಳಿದರು.

ಸರ್ಕಾರಿ ಪದವಿ ಕಾಜೇಜಿನಲ್ಲಿ ರಾಷ್ಟ್ರೀಯ ಸೇವಾ ಯೋಜನೆ ನಡೆದ ಪರಿಸರ ಜಾಗೃತಿ ಹಾಗೂ ಸಮಾಜ ಸೇವೆ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.

ವಿದ್ಯಾರ್ಥಿ ಜೀವನದಲ್ಲಿ ಸೇವಾಬದ್ಧತೆ ಮುಖ್ಯವಿದ್ದು, ಜೀವನದಲ್ಲಿ ಪರಿಪೂರ್ಣವಾದ ವ್ಯಕ್ತಿತ್ವ ರೂಪಿಸಲು ಸೇವಾ ಯೋಜನೆ ಸಹಕಾರಿಯಾಗಿದೆ ಎಂದರು.

ADVERTISEMENT

ಪ್ರಾಚಾರ್ಯ ಸುರೇಂದ್ರಸಿಂಗ್‌, ಪ್ರಾಧ್ಯಾಪಕರಾದ ಶಿವಕುಮಾರ್‌, ಶಾಂತಕುಮಾರ ವೀರಶೆಟ್ಟಿ ಮೂಲೂರಕರ್‌, ಜಯದೇವಿ ಗಾಯಕವಾಡ್‌, ಬೀದರ್‌ ಸಹಕಾರಿ ಸಕ್ಕರೆಕಾರ್ಖಾನೆ ನಿರ್ದೇಶಕ ಮಲ್ಲಿಕಾರ್ಜುನ ಪಾಟೀಲ, ಬಿಜೆಪಿ ಮುಖಂಡರಾದ ರೇವಣಪ್ಪ ಹೂಗಾರ, ಅನೀಲ ಜೋಶಿ, ಇಸ್ಮಾಯಲ್‌ ರಾಠೋಡಿ, ರಾಜಕುಮಾರ ಗುತ್ತೆದಾರ್‌, ಸಚಿನ ಮಠಪತಿ, ಅಮಿತ ತೊಗಲೂರ್‌, ಶುಭಂ ರಂಗದಾಳ, ರಾಜಗೋಪಾಲ್‌ ಐನಾಪೂರ್‌, ಗೋಪಾಲಕೃಷ್ಣ ಮೋಹಳೆ, ನಾಗಭುಷಣ ಮೊಹಳೆ, ಅಮಿತ ಮೊಹಳ, ಸಂಗಮ ಪಪ್ಪರಾಜ್‌ ಇತರರು ಇದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.