ADVERTISEMENT

ಸಿಕ್ಕಿಂನಲ್ಲಿ ಬೀದರ್‌ ಯೋಧನ ಸಾವು

​ಪ್ರಜಾವಾಣಿ ವಾರ್ತೆ
Published 26 ಜುಲೈ 2024, 14:33 IST
Last Updated 26 ಜುಲೈ 2024, 14:33 IST
<div class="paragraphs"><p>ಯೋಧ ಅನಿಲ್‌ ಕುಮಾರ್‌ ಉಮಾಕಾಂತರಾವ್‌ ನವಾಡೆ</p></div>

ಯೋಧ ಅನಿಲ್‌ ಕುಮಾರ್‌ ಉಮಾಕಾಂತರಾವ್‌ ನವಾಡೆ

   

ಕಮಲನಗರ (ಬೀದರ್‌ ಜಿಲ್ಲೆ): ಸಿಕ್ಕಿಂ ಗಡಿ ಭಾಗದ ಹಿಮ ಪ್ರದೇಶದಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದಾಗ ಆರೋಗ್ಯದಲ್ಲಿ ಏರುಪೇರಾಗಿ ತಾಲ್ಲೂಕಿನ ಕೊರ‍್ಯಾಳ್ ಗ್ರಾಮದ ಯೋಧ ಅನಿಲ್‌ ಕುಮಾರ್‌ ಉಮಾಕಾಂತರಾವ್‌ ನವಾಡೆ (40) ಶುಕ್ರವಾರ ಬೆಳಗಿನ ಜಾವ ಮೃತಪಟ್ಟಿದ್ದಾರೆ.

ಮೃತ ಯೋಧನ ಪಾರ್ಥೀವ ಶರೀರ ಭಾನುವಾರ (ಜು.28) ಸ್ವಗ್ರಾಮಕ್ಕೆ ಬರುವ ಸಾಧ್ಯತೆ ಇದೆ ಎಂದು ತಹಶೀಲ್ದಾರ್ ಅಮೀತಕುಮಾರ ಕುಲಕರ್ಣಿ ‘ಪ್ರಜಾವಾಣಿ’ಗೆ ತಿಳಿಸಿದ್ದಾರೆ. ಮೃತ ಯೋಧನಿಗೆ ತಂದೆ-ತಾಯಿ, ನಾಲ್ವರು ಸಹೋದರರು, ಪತ್ನಿ, ಪುತ್ರ ಹಾಗೂ ಪುತ್ರಿ ಇದ್ದಾರೆ. ತಹಶೀಲ್ದಾರ್‌ ಅಮೀತಕುಮಾರ ಕುಲಕರ್ಣಿ ಅವರು ಗ್ರಾಮಕ್ಕೆ ತೆರಳಿ ಕುಟುಂಬ ಸದಸ್ಯರನ್ನು ಶುಕ್ರವಾರ ಭೇಟಿ ಮಾಡಿ ಸಾಂತ್ವನ ಹೇಳಿದ್ದಾರೆ. 

ADVERTISEMENT

ಅನಿಲ್‌ ಕುಮಾರ್‌ ಅವರು 2004ರಲ್ಲಿ ಭಾರತೀಯ ಸೇನೆಗೆ ಸೇರಿದ್ದರು. ಹವಾಲ್ದಾರರಾಗಿ ಸಿಕ್ಕಿಂ ಗಡಿಯಲ್ಲಿ ಕೆಲಸ ನಿರ್ವಹಿಸುತ್ತಿದ್ದರು ಎಂದು ತಿಳಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.