ಬೀದರ್: ಬೀದರ್ ವಿಶ್ವವಿದ್ಯಾಲಯವು 19 ಸ್ನಾತಕೋತ್ತರ ಕೋರ್ಸ್‌ಗಳ (ಪಿಜಿ) ಪ್ರಥಮ ಸೆಮಿಸ್ಟರ್ ಫಲಿತಾಂಶ ಶುಕ್ರವಾರ (ಅ.4) ಘೋಷಿಸಿದೆ.
ವಿಶ್ವವಿದ್ಯಾಲಯದ ಕುಲಪತಿ ಪ್ರೊ. ಬಿ.ಎಸ್. ಬಿರಾದಾರ ಅವರು ಸಂಜೆ 4ಕ್ಕೆ ಫಲಿತಾಂಶ ಘೋಷಿಸಿದರು. ಸ್ನಾತಕೋತ್ತರ ಪದವಿ ಪ್ರಥಮ ಸೆಮಿಸ್ಟರ್‌ನ ಚೊಚ್ಚಲ ಫಲಿತಾಂಶವನ್ನು ಘೋಷಿಸುತ್ತಿರುವುದಕ್ಕೆ ಸಂತೋಷವಾಗಿದೆ. ಇದಕ್ಕಾಗಿ ಶ್ರಮಿಸಿದ ಸಮಸ್ತ ಅಧ್ಯಾಪಕ, ಅಧ್ಯಾಪಕೇತರ ಸಿಬ್ಬಂದಿಯನ್ನು ಅಭಿನಂದಿಸುತ್ತೇನೆ. ಅತ್ಯಂತ ಕಡಿಮೆ ಅವಧಿಯಲ್ಲಿ ಫಲಿತಾಂಶ ಪ್ರಕಟಿಸಲು ಎಲ್ಲರೂ ಅವಿರತವಾಗಿ ಶ್ರಮಿಸಿದ್ದಾರೆ ಎಂದರು.
‘ಈ ಭಾಗದ ನೂತನ ವಿಶ್ವವಿದ್ಯಾಲಯದ ಶ್ರೇಯಸ್ಸಿನಲ್ಲಿ ಇದೇ ರೀತಿ ಎಲ್ಲರ ಸಹಕಾರವನ್ನು ವಿಶ್ವವಿದ್ಯಾಲಯ ಬಯಸುತ್ತದೆ’ ಎಂದರು.
ಕುಲಸಚಿವ (ಮೌಲ್ಯಮಾಪನ) ಪ್ರೊ.ಪರಮೇಶ್ವರ ನಾಯ್ಕ ಟಿ. ಮಾತನಾಡಿ, 19 ಕೋರ್ಸ್‌ಗಳ ಫಲಿತಾಂಶವನ್ನು ಏಕಕಾಲಕ್ಕೆ ಪ್ರಕಟಿಸಿ ವಿಶ್ವವಿದ್ಯಾಲಯ ತನ್ನ ಕ್ರಿಯಾಶೀಲತೆ ತೋರಿಸಿದೆ ಎಂದು ತಿಳಿಸಿದರು.
ಕುಲಸಚಿವ (ಆಡಳಿತ) ರವೀಂದ್ರನಾಥ ವಿ. ಗಬಾಡಿ, ಅಧ್ಯಾಪಕರಾದ ಚನ್ನಕೇಶವ ಮೂರ್ತಿ, ನಾಗೇಶ ಸಾವಳೆ, ಶ್ರೀಪವನ್ ಕಾಂಬಳೆ, ರಾಮಚಂದ್ರ ಗಣಾಪೂರ, ಶಿವರಾಜ ಪಾಟೀಲ ಹಾಜರಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.