ಬೀದರ್: ಜ. 7 ರಿಂದ 9 ರ ವರೆಗೆ ಜರುಗಲಿರುವ ಬೀದರ್ ಉತ್ಸವ ಪ್ರಯುಕ್ತ ನಗರದಲ್ಲಿ ಫುಟ್‍ಬಾಲ್, ಶೆಟಲ್ ಬ್ಯಾಡ್ಮಿಂಟನ್, ಹಾಕಿ, ಸೈಕ್ಲಿಂಗ್, ಟೇಬಲ್ ಟೆನಿಸ್, ಈಜು, ಅಥ್ಲೆಟಿಕ್ಸ್, ವಾಲಿಬಾಲ್, ಕೊಕ್ಕೊ, ಕಬಡ್ಡಿ, ಕರಾಟೆ, ಫೀನ್ನಿಂಗ್, ಕ್ರಿಕೆಟ್, ಜಂಪ್‍ರೋಪ್, ಸಿಲಂಬಮ್ (ದೊಣ್ಣೆ ವರಸೆ) ಹಾಗೂ ಕುಸ್ತಿ ಕ್ರೀಡಾಕೂಟಗಳನ್ನು ಆಯೋಜಿಸಲಾಗಿದೆ.
ಡಿ. 30 ಮತ್ತು 31 ರಂದು ನೆಹರೂ ಕ್ರೀಡಾಂಗಣದಲ್ಲಿ ಫುಟಬಾಲ್ ಕ್ರೀಡಾಕೂಟ ನಡೆಯಲಿದೆ. ಆಸಕ್ತರು ಹೆಸರು ನೋಂದಣಿಗೆ ಮೊಬೈಲ್ ಸಂಖ್ಯೆ 7019424506ಗೆ ಸಂಪರ್ಕಿಸಬಹುದು.
ಡಿ. 31 ರಿಂದ ಜನವರಿ 1 ರ ವರೆಗೆ ನೆಹರೂ ಕ್ರೀಡಾಂಗಣದಲ್ಲಿ ಶೆಟಲ್ ಬ್ಯಾಡ್ಮಿಂಟನ್ ಕ್ರೀಡಾಕೂಟ ಜರುಗಲಿದೆ. ಹೆಸರು ನೋಂದಣಿಗೆ 9449034923ಗೆ ಸಂಪರ್ಕಿಸಬಹುದು.
ಜ. 1 ರಿಂದ 2 ರ ವರೆಗೆ ನೆಹರೂ ಕ್ರೀಡಾಂಗಣದಲ್ಲಿ ಹಾಕಿ ಕ್ರೀಡಾಕೂಟ ನಡೆಯಲಿದೆ. ಹೆಸರು ನೋಂದಣಿಗೆ 7975643023ಗೆ ಸಂಪರ್ಕಿಸಬಹುದು.
ಜ. 1 ರಂದು ಅಂಬೇಡ್ಕರ್ ವೃತ್ತದಿಂದ ನೌಬಾದ್‍ವರೆಗೆ ಸೈಕ್ಲಿಂಗ್ ಕ್ರೀಡಾಕೂಟ ಜರುಗಲಿದೆ. ಹೆಸರು ನೋಂದಣಿಗೆ 7411428070ಗೆ ಸಂಪರ್ಕಿಸಬಹುದು.
ಡಿ. 31 ರಿಂದ ಜ. 1 ರ ವರೆಗೆ ಒಳಾಂಗಣ ಕ್ರೀಡಾಂಗಣದಲ್ಲಿ ಟೇಬಲ್ ಟೆನಿಸ್ ಕ್ರೀಡಾಕೂಟ ನಡೆಯಲಿದೆ. ಹೆಸರು ನೋಂದಣಿಗೆ 9341110234ಗೆ ಸಂಪರ್ಕಿಸಬಹುದು.
ಜ. 2 ರಿಂದ 3 ರ ವರೆಗೆ ಬಾಲ ಭವನದ ಈಜು ಕೊಳದಲ್ಲಿ ಈಜು ಸ್ಪರ್ಧೆ ಜರುಗಲಿದೆ. ಹೆಸರು ನೋಂದಣಿಗೆ 9901109942ಗೆ ಸಂಪರ್ಕಿಸಬಹುದು.
ಜ. 2 ರಿಂದ 3 ರ ವರೆಗೆ ನೆಹರೂ ಕ್ರೀಡಾಂಗಣದಲ್ಲಿ ಅಥ್ಲೆಟಿಕ್ಸ್ ಕ್ರೀಡಾಕೂಟ ನಡೆಯಲಿದೆ. ಹೆಸರು ನೋಂದಣಿಗೆ 9880315461ಗೆ ಸಂಪರ್ಕಿಸಬಹುದು.
ಜ. 3 ರಂದು ನೆಹರೂ ಕ್ರೀಡಾಂಗಣದಲ್ಲಿ ವಾಲಿಬಾಲ್ ಕ್ರೀಡಾಕೂಟ ಜರುಗಲಿದೆ. ಹೆಸರು ನೋಂದಣಿಗೆ 9449185412ಗೆ ಸಂಪರ್ಕಿಸಬಹುದು.
ಜ. 3 ರಂದು ನೆಹರೂ ಕ್ರೀಡಾಂಗಣದಲ್ಲಿ ಕೊಕ್ಕೋ ಕ್ರೀಡಾಕೂಟ ನಡೆಯಲಿದೆ. ಹೆಸರು ನೋಂದಣಿಗೆ 6363598527ಗೆ ಸಂಪರ್ಕಿಸಬಹುದು.
ಜ. 3 ರಂದು ನೆಹರೂ ಕ್ರೀಡಾಂಗಣದಲ್ಲಿ ಕಬಡ್ಡಿ ಕ್ರೀಡಾಕೂಟ ಜರುಗಲಿದೆ. ಹೆಸರು ನೋಂದಣಿಗೆ 9242440356ಗೆ ಸಂಪರ್ಕಿಸಬಹುದು.
ಜ. 3 ರಂದು ಬಾಲಭವನದಲ್ಲಿ ಕರಾಟೆ ಕ್ರೀಡಾಕೂಟ ನಡೆಯಲಿದೆ. ಹೆಸರು ನೋಂದಣಿಗೆ 9113906525ಗೆ ಸಂಪರ್ಕಿಸಬಹುದು.
ಜ. 4 ರಂದು ಬಾಲ ಭವನದಲ್ಲಿ ಫೀನ್ನಿಂಗ್ ಕ್ರೀಡಾಕೂಟ ಜರುಗಲಿದೆ. ಹೆಸರು ನೋಂದಣಿಗೆ 9113906525ಗೆ ಸಂಪರ್ಕಿಸಬಹುದು.
ಜ. 4 ರಿಂದ 6 ರವರೆಗೆ ನೆಹರೂ ಕ್ರೀಡಾಂಗಣದಲ್ಲಿ ಕ್ರಿಕೆಟ್ ಟೂರ್ನಿ ನಡೆಯಲಿದೆ. ಹೆಸರು ನೋಂದಣಿಗೆ 8277764066ಗೆ ಸಂಪರ್ಕಿಸಬಹುದು.
ಜ. 4 ರಂದು ನೆಹರೂ ಕ್ರೀಡಾಂಗಣದಲ್ಲಿ ಜಂಪ್‍ರೋಪ್ ಮತ್ತು ಸಿಲಂಬಮ್ (ದೊಣ್ಣೆವರಸೆ) ಕ್ರೀಡಾಕೂಟ ಜರುಗಲಿದೆ. ಹೆಸರು ನೋಂದಣಿಗೆ 8217014315ಗೆ ಸಂಪರ್ಕಿಸಬಹುದು.
ಜ. 8 ರಂದು ಕೋಟೆಯಲ್ಲಿ ಕುಸ್ತಿ ಕ್ರೀಡಾಕೂಟ ನಡೆಯಲಿದೆ. ಹೆಸರು ನೋಂದಣಿಗೆ 9448109482ಗೆ ಸಂಪರ್ಕಿಸಬಹುದು.
ಜಿಲ್ಲೆಯ ಆಸಕ್ತ ಆಟಗಾರರು ಹೆಸರು ನೋಂದಾಯಿಸಿ ಕ್ರೀಡಾಕೂಟಗಳಲ್ಲಿ ಭಾಗವಹಿಸಬಹುದು ಎಂದು ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆಯ ಸಹಾಯಕ ನಿರ್ದೇಶಕ ತಿಳಿಸಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.