ADVERTISEMENT

ಮರಾಠ ಸಮಾಜಕ್ಕೆ ಬಿಜೆಪಿ ಕೊಡುಗೆ ದೊಡ್ಡದಿದೆ: ಎಂ.ಜಿ. ಮುಳೆ

​ಪ್ರಜಾವಾಣಿ ವಾರ್ತೆ
Published 5 ಮೇ 2024, 15:35 IST
Last Updated 5 ಮೇ 2024, 15:35 IST
<div class="paragraphs"><p>ಎಂ.ಜಿ. ಮುಳೆ</p></div>

ಎಂ.ಜಿ. ಮುಳೆ

   

ಬೀದರ್‌: ‘ಮರಾಠ ಸಮಾಜಕ್ಕೆ ಬಿಜೆಪಿ ಕೊಡುಗೆ ಬಹಳ ದೊಡ್ಡದಿದೆ’ ಎಂದು ಮರಾಠ ಅಭಿವೃದ್ಧಿ ನಿಗಮದ ಮಾಜಿ ಅಧ್ಯಕ್ಷ ಹಾಗೂ ಬಿಜೆಪಿ ಮುಖಂಡ ಎಂ.ಜಿ.ಮುಳೆ ತಿಳಿಸಿದರು.

ಮರಾಠ ಸಮಾಜದ ಅಭಿವೃದ್ಧಿಗಾಗಿ ಮರಾಠ ಅಭಿವೃದ್ಧಿ ನಿಗಮ ಸ್ಥಾಪಿಸಿದ್ದು ಹಿಂದಿನ ಬಿಜೆಪಿ ಸರ್ಕಾರ. ಸರ್ಕಾರದ ವತಿಯಿಂದ ಶಿವ ಜಯಂತಿ ಆಚರಣೆಗೆ ಚಾಲನೆ ಕೊಟ್ಟಿದ್ದು ಬಿಜೆಪಿ ಸರ್ಕಾರವಿದ್ದಾಗ. ಬಸವಕಲ್ಯಾಣದಲ್ಲಿ ಶಿವಸೃಷ್ಠಿ ಪರಿಕಲ್ಪನೆಗಾಗಿ, ಶಿವಾಜಿ ಸ್ಮಾರಕ ನಿರ್ಮಾಣಕ್ಕೆ ಹತ್ತು ಎಕರೆ ಜಮೀನು ಮಂಜೂರು ಮಾಡಿ ಹತ್ತು ಕೋಟಿ ಅನುದಾನ ನೀಡಲಾಗಿದೆ. ಹೀಗಾಗಿ ಚುನಾವಣೆಯಲ್ಲಿ ಬಿಜೆಪಿ ಬೆಂಬಲಿಸಲು ನಿರ್ಧರಿಸಲಾಗಿದೆ ಎಂದು ನಗರದಲ್ಲಿ ಭಾನುವಾರ ಪತ್ರಿಕಾಗೋಷ್ಠಿಯಲ್ಲಿ ಹೇಳಿದರು.

ADVERTISEMENT

ಬಿಜೆಪಿ ಸರ್ಕಾರ ಶಿವಸೃಷ್ಟಿ ಯೋಜನೆಗೆ ಮೀಸಲಿಟ್ಟಿದ್ದ ₹20 ಕೋಟಿಯಲ್ಲಿ ಕಾಂಗ್ರೆಸ್‌ ಸರ್ಕಾರ ಹತ್ತು ಕೋಟಿ ಅನುದಾನ ವಾಪಸ್ ಪಡೆದಿದೆ. ಮರಾಠ ಅಭಿವೃದ್ಧಿ ನಿಗಮಕ್ಕಾಗಿ ಬಿಜೆಪಿ ಘೋಷಣೆ ಮಾಡಿದ್ದ ನೂರು ಕೋಟಿ ಅನುದಾನದಲ್ಲಿ ಐವತ್ತು ಕೋಟಿ ಹಿಂಪಡೆದಿದೆ ಎಂದು ಆರೋಪಿಸಿದರು.

ಬಿಜೆಪಿ ಸರ್ಕಾರದ ಅವಧಿಯಲ್ಲಿ ದೇಶದಲ್ಲಿ ರಾಷ್ಟ್ರೀಯ ಹೆದ್ದಾರಿಗಳು ಅಭಿವೃದ್ಧಿ ಹೊಂದಿವೆ. ನೌಕಾಪಡೆ ಧ್ವಜದ ಮೇಲೆ ಶಿವಾಜಿ ಭಾವಚಿತ್ರ ಹಾಕಲಾಗಿದೆ. ಆಗ್ರಾ ಕೋಟೆಯಲ್ಲಿ ಶಿವಾಜಿ ಸ್ಮರಣೆಗೆ ವಸ್ತು ಪ್ರದರ್ಶನ ನಡೆಯುತ್ತಿದೆ. ಚೀನಾ– ಭಾರತ ಗಡಿಯಲ್ಲಿ ಶಿವಾಜಿ ಪುತ್ಥಳಿ ಸ್ಥಾಪಿಸಲಾಗಿದೆ. ಸಂಸತ್ ಭವನ ಮುಂದೆ ಶಿವಾಜಿ, ಬಸವೇಶ್ವರರ ಮೂರ್ತಿ ಸ್ಥಾಪಿಸಲಾಗಿದೆ. ಡಾ.ಬಿ.ಅಂಬೇಡ್ಕರ್‌ ಅವರಿಗೆ ಸಂಬಂಧಿಸಿದ ಸ್ಥಳಗಳನ್ನು ಅಭಿವೃದ್ಧಿ ಪಡಿಸಿದ್ದು ಬಿಜೆಪಿ ಸರ್ಕಾರ. ಕೇಂದ್ರ ಸಚಿವ ಭಗವಂತ ಖೂಬಾ ಅವರು ಎಲ್ಲರನ್ನೂ ವಿಶ್ವಾಸಕ್ಕೆ ತೆಗೆದುಕೊಂಡು ಕೆಲಸ ಮಾಡುತ್ತಿದ್ದಾರೆ. ಹೆದ್ದಾರಿ, ಸಿಪೆಟ್, ಸೋಲಾರ ಪಾರ್ಕ್, ರೈಲ್ವೆ ವ್ಯವಸ್ಥೆ, ವಿಮಾನಯಾನ, ಫಸಲ್‌ ಬಿಮಾ ಯೋಜನೆ, ಪಿಎಂ ಆವಾಸ್ ಯೋಜನೆ ಜಾರಿಗೆ ತಂದಿದ್ದಾರೆ ಎಂದು ತಿಳಿಸಿದರು.

ಡಾ. ದಿನಕರ್‌ ಮೋರೆ ಅವರು ನನ್ನ ಸಂಬಂಧಿ. ಅವರಿಗೆ ಚುನಾವಣೆಯಲ್ಲಿ ಸ್ಪರ್ಧಿಸಲು ನಾನೇ ಹೇಳಿದ್ದೇನೆ ಎಂಬುದು ಶುದ್ಧ ಸುಳ್ಳು. ಸಮಾಜದ ಹಿತ ಬಯಸಿ ಮೋರೆ ಚುನಾವಣೆಗೆ ಸ್ಪರ್ಧಿಸಿದ್ದೇನೆ ಎಂದು ತಿಳಿಸಿದ್ದಾರೆ. ಇದು ಅವರ ವೈಯಕ್ತಿಕ ವಿಚಾರ ಎಂದು ಸ್ಪಷ್ಟಪಡಿಸಿದರು.

ಮುಖಂಡರಾದ ಅನಂತ ಬಿರಾದಾರ, ಬಾಬುರಾವ ಕಾರಬಾರಿ, ನಾಗನಾಥ ಬಗ್ದೂರೆ, ಮಾಧವ ಹಸೂರೆ, ರಾಜಕುಮಾರ ಪಾಟೀಲ ನೆಮತಾಬಾದ, ದಿಗಂಬರರಾವ್‌ ಮಾನಕಾರಿ, ಅಭಿಮನ್ಯು ನೀರಗುಡೆ, ಶಂಕರರಾವ ಬಿರಾದಾರ, ನೀಲೇಶ ಹಾಜರಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.